ಕೊಡೆ
ಮಳೆ ಬರದೆ ಊರು ಕಂಗೆಟ್ಟಿತ್ತು.
ಕೆರೆ, ಬಾವಿ ಎಲ್ಲವೂ ಬತ್ತಿ ಹೋಗಿದ್ದವು.
ಕಟ್ಟ ಕಡೆಗೆ ಊರವರೆಲ್ಲ ಒಂದೆಡೆ ಸೇರಿ ಸಾಮೂಹಿಕವಾಗಿ ಪ್ರಾರ್ಥಿಸೋದು ಎಂದು ತೀರ್ಮಾನಿಸಿದರು.
ದಿನವನ್ನು ಗೊತ್ತು ಪಡಿಸಿದರು. ಅಂತೆಯೇ ಆ ದಿನ ಎಲ್ಲರೂ ಮೈದಾನದಲ್ಲಿ ಸೇರಿ ಸಾಮೂಹಿಕವಾಗಿ ಪ್ರಾರ್ಥಿಸಿದರು.
ಆದರೆ ಮಳೆ ಬರಲೇ ಇಲ್ಲ. ಜನರೆಲ್ಲ ಸಂತನ ಬಳಿ ಸಾರಿದರು.
ಪ್ರಾರ್ಥಿಸಿದರೆ ಉತ್ತರ ದೊರಕುತ್ತದೆ ಎಂದಿದ್ದೀರಿ.
ಇದೀಗ ನಾವು ಸಾಮೂಹಿಕ ಪ್ರಾರ್ಥನೆ ಮಾಡಿದರೂ ಮಳೆ ಸುರಿಯಲಿಲ್ಲ ದೂರಿದರು.
ಸಂತ ನಕ್ಕು ಕೇಳಿದ ಅಂದು ಎಷ್ಟು ಜನ ಕೊಡೆ ಹಿಡಿದು ಕೊಂಡು ಹೋಗಿದ್ದೀರಿ? ನೆರೆದವರು ಮೌನವಾದರು.
ನಿಮ್ಮ ಪ್ರಾರ್ಥನೆಯ ಬಗ್ಗೆ ನಿಮಗೆ ನಂಬಿಕೆ ಇದ್ದಿದ್ದರೆ ನೀವು ಖಂಡಿತ ಕೊಡೆ ಹಿಡಿದು ಕೊಂಡು ಹೋಗುತ್ತಿದ್ದಿರಿ ಹೀಗೆಂದು ಹೇಳಿದ ಸಂತ ಮೌನವಾದ.
-ಮಗು
Next Story