ಅದು ಬಹುಮಹಡಿ ವಸತಿ ಸಮುಚ್ಚಯ.
ಅಲ್ಲಿ ಸಸ್ಯಾಹಾರಿಗಳಷ್ಟೇ ವಾಸಿಸುವುದಂತೆ.
ಮಾಂಸಾಹಾರಿಗಳಿಗೆ ಅಲ್ಲಿ ಮನೆಯಿಲ್ಲ. ಯಾರೋ ಕೇಳಿದರು ‘‘ಇದನ್ನು ನಿರ್ಮಿಸಿದ ಕಾರ್ಮಿಕರು, ಸಸ್ಯಾಹಾರಿಗಳೇ ಆಗಿದ್ದರೆ?’’ -ಮಗು