ನಿಮ್ಮ ಬದುಕಿನ ಎಷ್ಟು ವರ್ಷಗಳನ್ನು ಫೇಸ್ ಬುಕ್ ಗೆ ಕೊಡುತ್ತಿದ್ದೀರಿ?
ಫೇಸ್ ಬುಕ್ ಒಟ್ಟು ಆದಾಯ ಮೂರು ಪಟ್ಟು ಅಧಿಕವಾಗಿ 1.5 ದಶಕೋಟಿ ಡಾಲರುಗಳಿಗೇರಿದೆ. ಅದರ ಮಾಸಿಕ ಬಳಕೆದಾರ ಹಿಟ್ ದಾಖಲೆ 1.65 ದಶಕೋಟಿಗೆ ತಲುಪಿದೆ. ಬಳಕೆದಾರ ಪ್ರತೀ ದಿನ 50 ನಿಮಿಷ ಫೇಸ್ ಬುಕ್ ನಲ್ಲಿ ಕಳೆಯುತ್ತಾರೆ. ಇದು ದೊಡ್ಡ ಸಮಯ ಎಂದು ಅನಿಸದೆ ಇರಬಹುದು. ಆದರೆ ದಿನದ 24 ಗಂಟೆಗಳಲ್ಲಿ 8.8 ಗಂಟೆ ನಿದ್ದೆಯಲ್ಲೇ ಕಳೆಯುತ್ತೇವೆ. ಉಳಿದ ಸಮಯದ ಆರನೇ ಒಂದನ್ನು ಫೇಸ್ ಬುಕ್ ಅಲ್ಲಿ ಕಳೆಯುವುದು ಜಾಸ್ತಿಯೇ ಆಯಿತು.
ಕಾರ್ಮಿಕ ದಾಖಲೆಗಳ ಪ್ರಕಾರ ಇದು ಯಾವುದೇ ಮನೋರಂಜನಾ ಕಾರ್ಯಕ್ರಮಕ್ಕೆ ಬಳಸುವ ಸಮಯಕ್ಕಿಂತ ಹೆಚ್ಚು. ಸಿನಿಮಾ ಮತ್ತು ಟಿವಿ ಹೊರತಾಗಿ ಇನ್ಯಾವುದೇ ಕ್ರಿಯೆಗೆ ಜನ ಇಷ್ಟು ಸಮಯ ವ್ಯಯಿಸುವುದಿಲ್ಲ. ಓದುವುದರಲ್ಲಿ ಜನ 19 ನಿಮಿಷ, ವ್ಯಾಯಾಮದಲ್ಲಿ 17 ನಿಮಿಷ, ಸಾಮಾಜಿಕ ಕಾರ್ಯಕ್ರಮದಲ್ಲಿ 4 ನಿಮಿಷ ಕಳೆಯುತ್ತಾರೆ. ಊಟ ಮತ್ತು ಕುಡಿಯಲೂ ಜನರು 1.07 ಗಂಟೆ ಬಳಸುವುದು.
ಯೋಚಿಸಿದರೆ ಇದು ಬಹಳ ಅಧಿಕ ಸಮಯ. ಸಾಮಾನ್ಯವಾಗಿ ಜನರು ಮನೋರಂಜನಾ ಕ್ರಿಯೆಯಲ್ಲಿ ಸಕ್ರಿಯವಾಗಿರುವ ಸಮಯ ಅತೀ ಕಡಿಮೆ ಎನ್ನುತ್ತಾರೆ ಅಂತರ್ಜಾಲ ಬಳಕೆದಾರ ಕಂಪನಿಗಳ ವಿಶ್ಲೇಷಕ ಎವರ್ ಕೋರ್ ಮ್ಯಾನೇಜಿಂಗ್ ಡೈರೆಕ್ಟರ್ ಕೇನ್ ಸೇನಾ.
2014ರಲ್ಲಿ ಜನರು ಫೇಸ್ ಬುಕ್ ಅನ್ನು 40 ನಿಮಿಷ ಬಳಸುತ್ತಿದ್ದು, ಈಗ ಸಮಯ ಅಧಿಕವಾಗಿದೆ. ಮಾಸಿಕ ಬಳಕೆದಾರರ ಸಂಖ್ಯೆಯೂ ಏರಿದೆ. ಕೆಲವರಿಗೆ ಇದು ಅಂತರ್ಜಾಲ ಚಟ ರೋಗವಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಜನರು ವೆಬ್ ತಾಣವನ್ನು ಎಷ್ಟರ ಮಟ್ಟಿಗೆ ಬಳಸುತ್ತಾರೆ ಎನ್ನುವ ಸಮಯವು ಅವರ ಚಟುವಟಿಕೆ ಮತ್ತು ಜಾಹೀರಾತು ಪರಿಣಾಮಕಾರಿಯನ್ನೂ ಸೂಚಿಸುತ್ತದೆ. ಫೇಸ್ ಬುಕ್ ಈ ಪ್ರಮಾಣದಲ್ಲಿ ಜನರ ನಡುವೆ ಚಟವಾಗಿದ್ದಾಗ ಉತ್ಪನ್ನಗಳ ಜಾಹೀರಾತಿಗೂ ಹೆಚ್ಚು ಅವಕಾಶವಿದ್ದು, ಆದಾಯ ಅಧಿಕವಿರುತ್ತದೆ. ಸಮಯವು ಫೇಸ್ ಬುಕ್ ಬಳಕೆದಾರರ ಬಗ್ಗೆ ಅವರ ಹವ್ಯಾಸ ಮತ್ತು ಆಸಕ್ತಿಯನ್ನು ತಿಳಿಸುತ್ತದೆ. ಇದು ಜಾಹೀರಾತಿಗೆ ಗುರಿ ಕೊಡುತ್ತದೆ. ಫೇಸ್ ಬುಕ್ ಬಳಕೆ ಸಮಯ ನೋಡಿದರೆ ಅದಕ್ಕೆ ಕೆಲವೇ ಶತ್ರುಗಳಿದ್ದಾರೆ. ದಾಖಲೆ ಪ್ರಕಾರ ಕಾಮ್ ಸ್ಕೋರ್ ಮತ್ತು ಯು ಟ್ಯೂಬ್ ನಂತರದ ಸ್ಥಾನದಲ್ಲಿ ದಿನಕ್ಕೆ 17 ನಿಮಿಷ ಬಳಕೆಯಾಗುತ್ತದೆ. ಅದು ಫೇಸ್ ಬುಕ್ ಬಳಕೆಗಿಂತ 35 ನಿಮಿಷ ಕಡಿಮೆ. ಬಳಕೆದಾರರು ಯಾಹೂ ತಾಣದಲ್ಲಿ 9 ನಿಮಿಷ ಮತ್ತು ಲಿಂಕ್ಡಿನ್ ಅಲ್ಲಿ ಎರಡು ಹಾಗೂ ಟ್ವಿಟರ್ ನಲ್ಲಿ ಒಂದು ನಿಮಿಷ ಕಳೆದಿದ್ದಾರೆ. ಇದೇ ಕಾರಣಕ್ಕೆ ಟ್ವಿಟರ್ ಜಾಹೀರಾತು ಪಡೆಯಲು ಕಷ್ಟಪಡುತ್ತಿದೆ.
ಫೇಸ್ ಬುಕ್ ಬಳಸುವವರು 50 ನಿಮಿಷಗಳಲ್ಲಿ ಏನು ಮಾಡುತ್ತಾರೆ? ಇದು ಕೆಲಸ ಮತ್ತು ಓದಿನ ಮಧ್ಯ ಪ್ರವೇಶಿಸುತ್ತದೆಯೆ? ಅದರ ವಿವರ ಇನ್ನೂ ಬಂದಿಲ್ಲ. ಸಾಮಾನ್ಯವಾಗಿ ಜನರು ಇತರ ಕೆಲಸಗಳ ಜೊತೆಗೆ ಫೇಸ್ ಬುಕ್ ನೋಡುತ್ತಾರೆ. ಹೀಗಾಗಿ ಕೆಲಸ ಮತ್ತು ಆರಾಮವಾಗಿರುವಾಗಲೂ ಇದು ಬಳಕೆಯಾಗುತ್ತದೆ.
ಕಂಪ್ಯೂಟರನ್ನು ಆರಾಮ ಸಮಯದಲ್ಲಿ ಬಳಸುವವರೇ ಹೆಚ್ಚು ಫೇಸ್ ಬುಕ್ ನೋಡುತ್ತಾರೆ. ಫೇಸ್ ಬುಕ್ ಇತರ ಚಟುವಟಿಕೆಗೆ ಪರ್ಯಾಯವಾಗಿಲ್ಲ. ಜನರು ತಮ್ಮ ಸಾಮಾನ್ಯ ಕೆಲಸಗಳಿಂದ ಬಿಡುವು ಸಿಕ್ಕಾಗಲಷ್ಟೇ ಫೇಸ್ ಬುಕ್ ನೋಡುತ್ತಾರೆ. ನಡೆಯುವಾಗ, ಕಾಯುವಾಗ ಮತ್ತು ಲಿಫ್ಟ್ ಅಲ್ಲಿದ್ದರೆ ಇತ್ಯಾದಿ. ದಿನಕ್ಕೆ 24 ಗಂಟೆಗಳಷ್ಟೇ ಇರುವ ಕಾರಣ ಜನರು ಎಷ್ಟರಮಟ್ಟಿಗೆ ಅದನ್ನು ಬಳಸುತ್ತಾರೆ ಎನ್ನುವುದು ಸೀಮಿತವೇ. ಟಿವಿಯನ್ನು ಇಡೀ ದಿನ ನೋಡುವಂತೆ ಜನ ಫೇಸ್ ಬುಕ್ ತೆರೆದು ಕೂತಿರುವುದೂ ಇರುತ್ತದೆ.
ಕೃಪೆ:timesofindia.indiatimes.com