*ಇನ್ನೆರಡು ವರ್ಷ ನಾನೇ
*ಇನ್ನೆರಡು ವರ್ಷ ನಾನೇ
ಮುಖ್ಯಮಂತ್ರಿ - ಸಿದ್ದರಾಮಯ್ಯ
♦ಕಳೆದ ಮೂರು ವರ್ಷಗಳೂ ನೀವೇ ಮುಖ್ಯಮಂತ್ರಿಯಾಗಿದ್ದದ್ದು ಹೌದೇ ಎಂಬುದು ನಿಮ್ಮ ಅಭಿಮಾನಿಗಳ ಪ್ರಶ್ನೆ.
---------------------
ಸರಕಾರ ಇದ್ದೂ ಸತ್ತಂತಾಗಿದೆ
- ಯಡಿಯೂರಪ್ಪ
♦ಸತ್ತ ವಿಪಕ್ಷವಿದ್ದಾಗ ಯಾವುದೇ ಸರಕಾರಕ್ಕೆ ಇಂತಹ ಅಪಾಯದ ಸ್ಥಿತಿ ಬಂದೇ ಬರುತ್ತದೆ.
---------------------
ನಾನು ಅತೀ ಬಡ ಕುಟುಂಬದಿಂದ ಬಂದವನು
- ನರೇಂದ್ರ ಮೋದಿ, ಪ್ರಧಾನಿ
♦ಇನ್ನು ಅದಕ್ಕೆ ದಾಖಲೆಯಾಗಿ ಬಿಪಿಎಲ್ ಕಾರ್ಡ್‌ನ ಪ್ರತಿ ತರಬೇಡಿ. ಆಗ ಅದು ಇರಲಿಲ್ಲ .
---------------------
ನೆಹರೂ ಸಾವಿಗೆ 1962ರಲ್ಲಿ ನಡೆದ ಚೀನಾ ದಾಳಿಯೇ ಕಾರಣ
- ಮುಲಾಯಂ ಸಿಂಗ್ ಯಾದವ್
♦ಉತ್ತರ ಪ್ರದೇಶದಲ್ಲಿ ಅಮಾಯಕರ ನಿರಂತರ ಸಾವಿಗೂ ಚೀನಾ ದಾಳಿಗೂ ಸಂಬಂಧವಿರಬಹುದೇ ?
---------------------
ಪ್ರತಿ ಪ್ರಜೆಯು ತಾನು ಕಟ್ಟಿದ ತೆರಿಗೆ ಹಣ ಯಾರದ್ದೋ ಪಾಲಾಗುವುದನ್ನು ಸಹಿಸಲಾರ
-ಜಿತೇಂದ್ರ ಸಿಂಗ್, ಕೇಂದ್ರ ಸಚಿವ
♦ಯಾರ್ಯಾರದ್ದೋ ಪಾಲಾಗುವುದಕ್ಕಿಂತ ಅದಾನಿ ಪಾಲಾಗುವುದು ಉತ್ತಮ ಎಂಬುದು ನಿಮ್ಮ ಅಭಿಪ್ರಾಯವೇ ?
---------------------
ನಾನು ದೇಶದ ನಂಬರ್ 1 ಕಾರ್ಮಿಕ
- ನರೇಂದ್ರ ಮೋದಿ, ಪ್ರಧಾನಿ
♦ಇದು ಒಳ್ಳೇ ಪಜೀತಿ ಆಯಿತು. ನೀವು ಏನೇನೋ ಆಗುವುದನ್ನು ಬಿಟ್ಟು ದಯವಿಟ್ಟು ಪ್ರಧಾನಿ ಆಗಿ ಎಂಬುದು ಬಡ ಭಾರತೀಯರ ಒಕ್ಕೊರಳ ಆಗ್ರಹ.
---------------------
ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ
- ಎಚ್.ಆಂಜನೇಯ, ಸಚಿವ
♦ನೀವು ಈ ಕೆಲಸದಲ್ಲೇ ಮುಳುಗಿದ್ದರೆ ಸಮಾಜ ಕಲ್ಯಾಣ ಸಚಿವ ಸ್ಥಾನ ಖಾಲಿಯಾಗಿದೆ ಎಂದು ತಿಳಿದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ!
---------------------
ಕಾಂಗ್ರೆಸ್ ಪಕ್ಷದ ವಿರುದ್ಧ ಅಪಪ್ರಚಾರ ನಡೆಸಿ ಅಧಿಕಾರ ಪಡೆಯಲು ಸಂಘ ಪರಿವಾರ ಹುನ್ನಾರ ನಡೆಸುತ್ತಿದೆ
- ರಮಾನಾಥ ರೈ, ಸಚಿವ
♦ಕಾಂಗ್ರೆಸ್ ಪಕ್ಷದ ಪರ ಪ್ರಚಾರ ನಡೆಸಲು ನೀವು ಏನು ಮಾಡಿದ್ದೀರಿ ?
---------------------
ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಕೂಡಾ ಕಾಂಗ್ರೆಸ್ ಅನರ್ಹ
- ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ
♦ಈಗ ನಿಮಗೆ ವಿಪಕ್ಷದಲ್ಲಿ ಕೂರುವ ತುರ್ತೇನು ?
---------------------
ಒಂದೇ ಮಗು ಬಂದರೂ ಸರಕಾರಿ ಶಾಲೆ ನಡೆಸಲಾಗುವುದು
- ಕಿಮ್ಮನೆ ರತ್ನಾಕರ, ಸಚಿವ
♦ಈಗ ನೀವು ಸಚಿವರಾಗಿದ್ದೂ ಶಿಕ್ಷಣ ಇಲಾಖೆಯನ್ನು ನಡೆಸಲಾಗುತ್ತಿಲ್ಲವೇ?
---------------------
ನಾನು ಯಾವುದೇ ಪ್ರಶಸ್ತಿ ಪುರಸ್ಕಾರಗಳಿಗಾಗಿ ಕೆಲಸ ಮಾಡುವುದಿಲ್ಲ
- ರವಿಶಂಕರ್ ಗುರೂಜಿ
♦ನೀವು ಜೀವಮಾನವಿಡೀ ಕೆಲಸ ಮಾಡದೆಯೇ ಎಷ್ಟೆಲ್ಲಾ ಸಂಪಾದಿಸಿದ್ದೀರಿ, ಇನ್ನು ಪ್ರಶಸ್ತಿ ಯಾವ ಲೆಕ್ಕ ?
---------------------
ಮಾಧ್ಯಮಗಳು ನನ್ನನ್ನು ಕಳ್ಳನಂತೆ ಬಿಂಬಿಸುತ್ತಿವೆ
- ವಿಜಯ ಮಲ್ಯ, ಮದ್ಯ ದೊರೆ
♦ಡಕಾಯಿತ, ಲೂಟಿಕೋರ ಎಂದು ಕರೆಯಲು ಅವರಿಗೆ ಮುಲಾಜು
---------------------
ನಾನು ಬಾಬಾ ರಾಮದೇವ್ ಕಟ್ಟಾ ಅಭಿಮಾನಿ
- ಲಾಲು ಪ್ರಸಾದ್ ಯಾದವ್
♦ನೀವು ಹುಟ್ಟಾ ಅವಕಾಶವಾದಿ ಎಂದು ಬಿಹಾರಿಗಳು ಶಾಪ ಹಾಕುತ್ತಿದ್ದಾರೆ.
---------------------
ನಾನು ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಿಲ್ಲ
- ಡಾ.ಜಿ.ಪರಮೇಶ್ವರ್, ಗೃಹ ಸಚಿವ
♦ದಿನನಿತ್ಯದ ಖರ್ಚಿಗೆ ತೊಂದರೆಯಾದರೆ ದಯವಿಟ್ಟು ತಿಳಿಸಿ.
---------------------
ಬ್ರಾಹ್ಮಣರು ಶಾಸ್ತ್ರಕ್ಕಾಗಿಯೂ ಮಾಂಸ ತಿನ್ನುವುದನ್ನು ಒಪ್ಪಲಾಗದು
- ವಿಶ್ವೇಶತೀರ್ಥ ಸ್ವಾಮೀಜಿ
♦ನೀವು ಹೀಗೆಲ್ಲ ಹಸಿಹಸಿ ಸುಳ್ಳು ಹೇಳಿ ಜನರ ತಲೆ ತಿನ್ನುವುದನ್ನು ಸುತಾರಾಂ ಒಪ್ಪಲಾಗದು.
---------------------
ನನ್ನ ಬಿಜೆಪಿ ಸೇರ್ಪಡೆಗೆ ಯಾರ ವಿರೋಧವೂ ಇಲ್ಲ
- ಧನಂಜಯ ಕುಮಾರ್, ಮಾಜಿ ಸಂಸದ
♦ ಒಳ್ಳೆಯದಾಯ್ತು . ಅವರಿಗೆ ನಿಮ್ಮ ಪರಿಚಯ ಮಾಡಿಕೊಂಡು ಅಪಾಯ ಮೈಮೇಲೆಳೆದುಕೊಳ್ಳಬೇಡಿ.
---------------------
ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯದ ಜೊತೆ ರಾಜಕೀಯವೂ ಚರ್ಚೆಯಾಗಲಿ
- ಎಚ್.ವಿಶ್ವನಾಥ್, ಮಾಜಿ ಸಂಸದ
♦ಅದರಿಂದ ನಿರುದ್ಯೋಗಿ ಅನಾಥ ರಾಜಕಾರಣಿಗಳಿಗೆ ಮೈಕಾದರೂ ಸಿಗುತ್ತದೆ !
---------------------
ಕಾಂಗ್ರೆಸ್ ಸರಕಾರ ತುಘಲಕ್ ದರ್ಬಾರು ನಡೆಸುತ್ತಿದೆ
- ಸಿ.ಟಿ.ರವಿ, ಬಿಜೆಪಿ ಶಾಸಕ
♦ ಹೌದು ಮೂರು ವರ್ಷಗಳಲ್ಲಿ ಒಮ್ಮೆಯೂ ರೆಸಾರ್ಟ್‌ಗೆ ಹೋಗಿಲ್ಲ ಅಂದರೆ ಏನರ್ಥ ?
---------------------
ಎಲ್ಲಿ ಉತ್ತರ ಸಿಗುತ್ತದೋ ಅಲ್ಲಿ ಪ್ರಶ್ನೆ ಕೇಳಬೇಕು
- ರಾಘವೇಶ್ವರ ಸ್ವಾಮೀಜಿ
♦ ಇಲ್ಲದಿದ್ದರೆ ನಿಮ್ಮ ಬಗ್ಗೆ ಬಂದ ಕೋರ್ಟು ತೀರ್ಪು ಓದಬೇಕು ! ಸಾಕಷ್ಟು ಉತ್ತರಗಳು ಅಲ್ಲಿ ಮಾತ್ರ ಇವೆ.
---------------------
ಹೋರಾಟವೇ ನನ್ನ ಬದುಕು.
- ಸೋನಿಯಾ ಗಾಂಧಿ
♦ ಬಡ ಭಾರತೀಯರ ಬದುಕೇ ಹೋರಾಟವಾಗಲು ನಿಮ್ಮ ಹೋರಾಟದ ಬದುಕೇ ಕಾರಣ ಎಂಬ ವ್ಯಾಪಕ ದೂರಿದೆ.