ಕಂಪ್ಯೂಟರ್ ನಿಂದ ನಿಮ್ಮ ಕಣ್ಣನ್ನು ರಕ್ಷಿಸಿಕೊಳ್ಳಿ
ನಾವು ಕಚೇರಿಯ ವೇಳೆಯಲ್ಲಿ ಗಂಟೆಗಟ್ಟಲೆ ಕಂಪ್ಯೂಟರ್ ಸ್ಕ್ರೀನನ್ನು ನೋಡಿಕೊಂಡು ಕಾಲ ಕಳೆಯುತ್ತೇವೆ. ಹೀಗೆ ಕಂಪ್ಯೂಟರ್ ಮುಂದೆ ಬಹಳ ಕಾಲ ಕೆಲಸ ಮಾಡುವವರಿಗೆ ಕಣ್ಣಿನ ಧೋಷ ಸಾಮಾನ್ಯ ಎನ್ನುತ್ತಾರೆ ವೈದ್ಯರು. ಈ ಕಣ್ಣಿನ ನೋವನ್ನು ನಿವಾರಿಸುವ ಹಲವು ವಿಧ ಇಲ್ಲಿದೆ. - ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಲು ಕಂಪ್ಯೂಟರಿನಿಂದ ಸ್ವಲ್ಪ ಹೊತ್ತು ಗಮನ ಅತ್ತ ಹರಿಸುವುದು ಒಳಿತು. ಸ್ವಲ್ಪ ಹೊತ್ತಿನವರೆಗೆ ನಿಮ್ಮ ಡೆಸ್ಕಿನಿಂದ ಎದ್ದು ಪ್ರತೀ ಗಂಟೆಗೊಮ್ಮೆ ಅತ್ತಿತ್ತ ಹೋಗಿ. ಸಾಧ್ಯವಾದರೆ ಕಣ್ಣನ್ನು ಮುಚ್ಚಿ ಕೆಲ ಸಮಯ ಇರಿ.
► ಸ್ವಲ್ಪ ಕಾಲ ತಾಜಾ ಗಾಳಿಯನ್ನು ಉಸಿರಾಡುವುದು ಉತ್ತಮ
ಒಳಾಂಗಣದಲ್ಲಿ ವಾತಾನುಕೂಲಿಯಲ್ಲಿ ಧೀರ್ಘ ಸಮಯ ಕೆಲಸ ಮಾಡುವಾಗ ಒಣ ಗಾಳಿಯಿಂದ ಕಣ್ಣುಗಳು ಒಣಗಿರುತ್ತವೆ. - ರಿಲ್ಯಾಕ್ಸ್ ಆಗುವ ವ್ಯಾಯಾಮ ಮಾಡಿ. ನಿಮ್ಮ ಕಣ್ಣುಗಳಿಗೆ ಕೈ ಅಡ್ಡ ಹಿಡಿಯಿರಿ. ಕಣ್ಣು ಮುಚ್ಚಿ ಆಳವಾಗಿ ಮೂಗಿನ ಮೂಲಕ ಉಸಿರಾಡಿ. ಸ್ವಲ್ಪ ಸೆಕೆಂಡು ಹಾಗೇ ಇರಿ. ಇದನ್ನು 15-30 ಸೆಕೆಂಡು ಪ್ರತೀ ದಿನ ಮಾಡಿ ನಿಮ್ಮ ಒತ್ತಡ ನಿವಾರಿಸಿ.
► ಕಣ್ಣಿನ ಪಾಪೆಗಳನ್ನು ಮಸಾಜ್ ಮಾಡಿ
ಸಣ್ಣಗೆ ಬಿಸಿ ಇರುವ ಚಹಾ ಬ್ಯಾಗುಗಳನ್ನು ತೆಗೆದುಕೊಂಡು 10 ನಿಮಿಷ ಕಣ್ಣಿನ ಮೇಲಿಡಿ. ಚಹಾ ಬ್ಯಾಗುಗಳನ್ನು ಕಳಚಿ ಕಣ್ಣಿನ ಪಾಪೆಗಳನ್ನು ಮಸಾಜ್ ಮಾಡಿ.ಹಾಗೆ ಮಾಡುವ ಮೂಲಕ ನೀರಿನ ಗ್ಲಾಂಡ್ ಗಳು ಪ್ರಚೋದನೆಗೆ ಒಳಗಾಗುತ್ತವೆ. ಒಣ ಕಣ್ಣುಗಳ ಮೇಲೆ ಇಡಬೇಡಿ ಮತ್ತು ಕಣ್ಣಿಗೆ ಒತ್ತಡವಾಗದಂತೆ ಗಮನಿಸಿ.
►ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದರಿಂದ ಕಣ್ಣು ಒಣಗುತ್ತದೆ
ಈ ಸ್ಥಿತಿಯಲ್ಲಿ ರೋಸ್ ವಾಟರ್ ಅಥವಾ ಪ್ರಿಸರ್ವೇಟಿವ್ ಇಲ್ಲದ ಐ ಡ್ರಾಪ್ ಗಳನ್ನು ಬಳಸಿ. - ಕಣ್ಣು ರೆಪ್ಪೆಗಳನ್ನು ತೆರೆದು ಮುಚ್ಚುವ ಮೂಲಕ ಕಣ್ಣಿಗೆ ಬ್ರೇಕ್ ನೀಡಿ. ಅತೀ ಕೆಲಸದಿಂದ ಕಣ್ಣಿಗೆ ವಿಶ್ರಾಂತಿ ಕೊಡಲು ಮರೆತಿರುತ್ತೀರಿ. ಕಣ್ಣನ್ನು ಮುಚ್ಚಿ ತೆಗೆಯುವುದು ತೇವಾಂಶ ಸಮಾನವಾಗಿ ಹಂಚಿಕೆಯಾಗುವಂತೆ ಮಾಡುತ್ತದೆ. ಒಣಗಿದ ಕಾರಣ ಕಣ್ಣಿಗೆ ಒತ್ತಡ ಉಂಟಾದರೂ ಇದು ನೆರವಾಗುತ್ತದೆ.