ವೃತ್ತಿಯಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳುವ ಮೂರು ವಿಧಾನ
ನಿಮ್ಮ ಬಳಿ ನಿಮ್ಮದೇ ಆದ ವಿಶಿಷ್ಟ ಕೌಶಲ್ಯವಿರುತ್ತದೆ. ನಿಮ್ಮ ಉದ್ಯಮದಲ್ಲಿ ಇತರರ ಮುಂದೆ ನಿಮಗೆ ಉತ್ತಮ ಅವಕಾಶ ನೀಡುವುದೇ ಅದು. ಆದರೆ ನಿಮ್ಮ ಬ್ರಾಂಡನ್ನು ಇತರರ ಮುಂದೆ ಇಡದೆ ಇದ್ದಲ್ಲಿ ನಿಮ್ಮ ಕೌಶಲ್ಯ ಅವರಿಗೆ ತಿಳಿಯದು. ನಿಮ್ಮ ಬ್ರಾಂಡನ್ನು ಮುಂದಿಡುವುದಾದರೂ ಹೇಗೆ? ಇಲ್ಲಿದೆ ಕೆಲವು ಸಲಹೆಗಳು:
ನಿಮ್ಮ ಜಾಲವನ್ನು ತಿಳಿದುಕೊಳ್ಳಿ
ನಿಮ್ಮದೇ ಜಾಲವಿದ್ದರೆ ಎಂದಿಗೂ ಭಯ ಪಡಬೇಕಾಗಿಲ್ಲ. ನಿಮ್ಮ ಸುತ್ತಮುತ್ತಲಿನ ವ್ಯಕ್ತಿಗಳ ಜತೆಗೆ ಉತ್ತಮ ವೃತ್ತಿಪರ ಸಂಬಂಧವನ್ನು ಇಟ್ಟುಕೊಳ್ಳುವುದು ಮುಖ್ಯ. ನಿಮ್ಮ ವೃತ್ತಿಪರ ಸ್ನೇಹಿತರು ನಿಮ್ಮ ಮುಂದಿನ ಅತ್ಯುತ್ತಮ ಸ್ನೇಹಿತರು ಆಗದೇ ಇರಬಹುದು. ಆದರೆ ವೃತ್ತಿಪರ ಆಯಾಮಗಳನ್ನು ತೆರೆದಿಡಿ. ಏಕೆಂದರೆ ಶೇ. 40ರಷ್ಟು ಕಂಪನಿಗಳು ಸಿಬ್ಬಂದಿಗಳನ್ನು ಇತರರ ಶಿಫಾರಸಿನ ಮೇಲೆ ಆರಿಸಿಕೊಳ್ಳುತ್ತವೆ. ನಿಮ್ಮನ್ನು ಈಗಾಗಲೇ ಗೊತ್ತಿರುವ ವ್ಯಕ್ತಿಗಳು ಮಾತ್ರವಲ್ಲ, ಅಂತರ್ಜಾಲದಲ್ಲಿ ಇರುವ ಮಾಹಿತಿಯೂ ಕೆಲಸಕ್ಕೆ ಸೇರಿಸಿಕೊಳ್ಳುವ ವ್ಯಕ್ತಿಗಳಿಗೆ ಮುಖ್ಯವಾಗುತ್ತದೆ. ಹೀಗಾಗಿ ಡಿಜಿಟಲ್ ಜಾಲದಲ್ಲಿ ನೀವೇನು ಹಾಕುತ್ತೀರೋ ಎನ್ನುವ ಬಗ್ಗೆ ಗಮನವಿರಲಿ. ನಿಮ್ಮ ವರ್ಚಸ್ಸನ್ನು ಉತ್ತಮಗೊಳಿಸುವ ಮಾಹಿತಿಗಳೇ ಇರುವಂತೆ ಗಮನಹರಿಸಿ.
ಸಾಮಾಜಿಕ ಮಾಧ್ಯಮಗಳನ್ನು ಅಧಿಕ ಬಳಸಿ
ಸಾಮಾಜಿಕ ತಾಣವನ್ನು ಸಾಮಾನ್ಯ ಬಹುತೇಕರು ಬಳಸುತ್ತಾರೆ. ಟ್ವೀಟ್ ಮಾಡುವುದು, ಸ್ನೇಹಿತರ ಟೈಮ್ಲೈನ್ ಮೇಲೆ ಬರೆಯುವುದು ಅಥವಾ ಲಿಂಕ್ಡಿನ್ ತಾಣದಲ್ಲಿ ನಿಮ್ಮ ಸಂಪರ್ಕ ವಿವರಗಳನ್ನು ಹಾಕುವುದು ಇತ್ಯಾದಿ. ನಿಮ್ಮನ್ನು ವೃತ್ತಿಪರ ಎಂದು ತಿಳಿಯಬೇಕಾಗಿದ್ದಲ್ಲಿ, ಗ್ರಾಮರ್ ಮತ್ತು ಸ್ಪೆಲ್ಲಿಂಗ್ ಬಗ್ಗೆ ಗಮನವಿರಲಿ. ನೀವು ವೃತ್ತಿಪರವಲ್ಲದ ವಿವರಗಳನ್ನು ಹಾಕಿರುವುದನ್ನು ಭಾವಿ ಬಾಸ್ ನೋಡುವುದು ನಿಮಗೂ ಬೇಕಿರುವುದಿಲ್ಲ. ಹೀಗಾಗಿ ಎಚ್ಚರವಿರಲಿ.
ಹಾಗೆಂದು ಏನೂ ಪೋಸ್ಟ್ ಮಾಡಲೇಬಾರದು ಎಂದಲ್ಲ. ಕೆಲಸಕ್ಕೆ ಸೇರಿಸಿಕೊಳ್ಳುವವರು ಅಂತರ್ಜಾಲದಲ್ಲಿ ಜನರನ್ನು ಕಾಣದೆ ಇದ್ದರೆ ನಿಮ್ಮ ಬಗ್ಗೆ ಹೆಚ್ಚಿನ ವಿವರವಿಲ್ಲ ಎಂದುಕೊಳ್ಳುತ್ತಾರೆ. ಅವರಿಗೆ ನಿಮ್ಮ ಬಗ್ಗೆ ವಿವರ ತಿಳಿದುಕೊಳ್ಳುವುದು ಕಷ್ಟವಾಗಿ ಅನುಮಾನ ಮೂಡುತ್ತದೆ. ಮುಖ್ಯವಾಗಿ ಪರೋಕ್ಷವಾಗಿ ಭಾವಿ ಕಂಪನಿಯ ಮ್ಯಾನೇಜರುಗಳ ಜೊತೆ ಸಂಪರ್ಕಿಸಲು ಇದು ಉತ್ತಮ ತಾಣ. ನಿಮ್ಮ ಕೆಲಸದ ಕೌಶಲ್ಯದ ವಿವರಗಳನ್ನು ಹಾಕಿ. ಸಮೀಕ್ಷೆಯೊಂದರ ಪ್ರಕಾರ ಶೇ.73ರಷ್ಟು ಮಂದಿ ಸಾಮಾಜಿಕ ತಾಣದಲ್ಲೇ ಉದ್ಯೋಗ ಪಡೆಯುತ್ತಾರೆ. ಉದ್ಯಮದ ಬಗ್ಗೆ ನಿಮ್ಮ ಬಳಿ ಇರುವ ಮಾಹಿತಿಯನ್ನು ತಿಳಿಸಲು ಸಾಮಾಜಿಕ ತಾಣ ಬಳಸಿಕೊಳ್ಳಬಹುದು.
ನಿಮ್ಮ ಲಾಭಕ್ಕಾಗಿ ತಂತ್ರಜ್ಞಾನ ಬಳಸಿಕೊಳ್ಳಿ
ಅಧಿಕೃತ ವ್ಯಕ್ತಿವಿವರದ ಕಾಳ ಈಗ ಹೋಗಿದೆ. ಇಲೆಕ್ಟ್ರಾನಿಕ್ ವ್ಯಕ್ತಿವಿವರ ಮತ್ತು ಕವರ್ ಲೆಟರ್ ಕೂಡ ಕೆಲವು ಕಡೆ ಬೇಕಾಗುವುದಿಲ್ಲ. ಲಿಂಕ್ಡಿನ್ ವ್ಯಕ್ತಿ ವಿವರ ಕೆಲಸ ಮಾಡುತ್ತದೆ. ಅಲ್ಲೇ ಜನರು ನಿಮ್ಮ ವೃತ್ತಿಪರ ವಿವರಗಳನ್ನು ನೋಡುತ್ತಾರೆ. 2016ರಲ್ಲಿ ವಿಡಿಯೋ ವ್ಯಕ್ತಿವಿವರ ಹೆಚ್ಚು ಜನಪ್ರಿಯವಾಗುತ್ತಿದೆ. ಎರಡು ನಿಮಿಷಗಳ ವಿಡಿಯೋದಲ್ಲಿ ನಿಮ್ಮ ಬಗ್ಗೆ ವಿವರ ಹೇಳಿ ಅಪ್ಲೋಡ್ ಮಾಡಲಾಗುತ್ತದೆ. ಸೃಜನಶೀಲ ಎನಿಸಿದಾಗ ಹೊಸ ವಿಷಯ ಆರಿಸಿ. ಅದು ಬ್ಲಾಗ್ ಪೋಸ್ಟ್ ಬರೆಯುವುದು, ಕೆಲಸ ಪ್ರಕಟವಾಗುವುದು ಅಥವಾ ಟ್ವೀಟ್ ಹ್ಯಾಶ್ ಟ್ಯಾಗ್ ಮಾಡುವುದೂ ಸಹ ಆಗಬಹುದು. ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಕೌಶಲ್ಯ ಕಾಣಬೇಕು. ಇದೇ ವೈಯಕ್ತಿಕ ಬ್ರಾಂಡಿಂಗ್.