ಕರ್ನಾಟಕದಲ್ಲಿ ಹಕ್ಕಿ ಜ್ವರ, ಕೇರಳದ ಫಾರ್ಮ್ ಕೋಳಿಗಳಿಗೆ ತಮಿಳ್ನಾಡಿನಲ್ಲಿ ನಿಷೇಧ!
ಕೋಯಮತ್ತೂರು, ಮೇ 15: ಕರ್ನಾಟಕದಲ್ಲಿ ಹಕ್ಕಿಜ್ವರ ಪತ್ತೆಯಾದ ಹಿನ್ನೆಲೆಯಲ್ಲಿ ಕರ್ನಾಟಕ, ಕೇರಳ ರಾಜ್ಯಗಳಿಂದ ಪೌಲ್ಟ್ರಿ ಉತ್ಪನ್ನಗಳು ತಮಿಳ್ನಾಡಿಗೆ ಬರದಂತೆ ತಡೆ ಒಡ್ಡಲಾಗಿದೆ. ಎರಡು ರಾಜ್ಯಗಳ ಗಡಿ ಭಾಗದಲ್ಲಿ ತಮಿಳ್ನಾಡು ಪ್ರಾಣಿ ಸಂರಕ್ಷಣಾ ಇಲಾಖೆಯ ವಿಶೇಷ ತಂಡಗಳು ತಪಾಸಣೆ ನಡೆಸುತ್ತಿವೆ ಎಂದು ವರದಿಯಾಗಿದೆ.
ಕೋಳಿ, ಬಾತುಕೋಳಿ, ಜಾನುವಾರು ಮತ್ತು ಕೋಳಿ ಆಹಾರ, ಗೊಬ್ಬರ, ಮೊಟ್ಟೆ ಮುಂತಾದ ಉತ್ಪನ್ನಗಳನ್ನು ತಮಿಳ್ನಾಡು ಕಟ್ಟೆಚ್ಚರದಿಂದ ತಪಾಸಣೆ ನಡೆಸುತ್ತಿದೆ. ಇದನ್ನು ಬೇರೆ ರಾಜ್ಯಗಳಿಂದ ತಮಿಳ್ನಾಡು ಹಾದಿಯಾಗಿ ಕೇರಳಕ್ಕೆ ಕೊಂಡು ಹೋಗುವುದನ್ನೂ ನಿಷೇಧಿಸಲಾಗಿದೆ. ಆದರೆ ತಮಿಳ್ನಾಡಿನಿಂದ ಕೇರಳ, ಕರ್ನಾಟಕಗಳಿಗೆ ಕೋಳಿ, ಕೋಳಿ ಮೊಟ್ಟೆ ರಫ್ತು ಮಾಡುವುದನ್ನು ಮುಂದುವರಿಸಲಾಗುವುದು ಎಂದು ವರದಿಯಾಗಿದೆ.
Next Story