ನಿಮ್ಮ ಮೊಬೈಲ್ ನಲ್ಲಿರುವ ಮಾಹಿತಿಗಳ ಸುರಕ್ಷತೆಗೆ ಇಲ್ಲಿದೆ ಸುಲಭ ವಿಧಾನ
ನೀವು ಹೊಸ ಆಂಡ್ರಾಯ್ಡಾ ಫೋನ್ ಖರೀದಿಸಿ, ಗೂಗಲ್ ಅಕೌಂಟ್ ಮೂಲಕ ಸೆಟ್ ಮಾಡಿ ವಾಟ್ಸಪ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಮತ್ತು ಟ್ವಿಟರ್ ಮೊದಲಾದ ಆಪ್ಸ್ ಲೋಡ್ ಮಾಡಿ ಲಾಗಿನ್ ಮಾಡಿದ್ದಷ್ಟೇ ಆಗಿದ್ದರೂ ನಿಮ್ಮ ಡಾಟಾ ಅಪಾಯದಲ್ಲಿದೆ ಎಂದುಕೊಳ್ಳಬೇಕು.
ಇಷ್ಟೆಲ್ಲ ನಮ್ಮ ಡಿಜಿಟಲ್ ಗುರುತು ನೀಡುವ ಸಾಧನದ ಬಗ್ಗೆ ನಾವು ಹೆಚ್ಚು ರಕ್ಷಣೆ ವಹಿಸುವುದಿಲ್ಲ. ಫೋನ್ ಕದ್ದು ಹೋದ ಅರ್ಧಗಂಟೆಯಲ್ಲಿ ಕಳ್ಳರು ನಮ್ಮೆಲ್ಲ ಇಮೇಲ್ ಮತ್ತು ಸಾಮಾಜಿಕ ತಾಣಗಳ ಪಾಸ್ವರ್ಡ್ ಬದಲಿಸಬಹುದು. ನಮ್ಮ ಖಾತೆ ಬಳಸಲು ಅವರ ಬಳಿ ಎಲ್ಲ ವಿವರ ಇರುತ್ತದೆ. ಫೋಟೋ, ಎಸ್ ಎಂ ಎಸ್, ತ್ವರಿತ ಸಂದೇಶ, ಬ್ಯಾಂಕ್ ಪಿನ್ ಮೊದಲಾದವು ಫೋನಿನಲ್ಲಿರುವ ಬಗ್ಗೆ ಹೇಳುವುದೇ ಬೇಡ. ನಿಮ್ಮ ಆಂಡ್ರಾಯ್ಡಾ ಸ್ಮಾರ್ಟ್ ಫೋನಿಗೆ ಹೇಗೆ ರಕ್ಷಣೆ ಕೊಡಬೇಕು?
1. ಮೊದಲನೆಯ ಹೆಜ್ಜೆಯಾಗಿ ಸ್ಕ್ರೀನ್ ಲಾಕ್ ಬಳಸುವ ಮೂಲಕ ಮಾಹಿತಿ ಬಳಸಲು ಸಾಧ್ಯವಾಗದಂತೆ ಮಾಡುವುದು.
ಅದಕ್ಕಾಗಿ ಸೆಟ್ಟಿಂಗ್ ಆಪ್ ಹೋಗಿ, ಸ್ಕ್ರೋಲ್ ಡೌನ್ ಮಾಡಿ ಸೆಕ್ಯುರಿಟಿ ಮೇಲೆ ಟಾಪ್ ಮಾಡಿ. ಕೆಲವು ಫೋನ್ ಗಳಲ್ಲಿ ಲಾಕ್ ಸ್ಕ್ರೀನ್ ಮತ್ತು ಪಾಸ್ವರ್ಡ್ ಮೇಲೆ ಟಾಪ್ ಮಾಡಬೇಕು. ಅಲ್ಲಿ ಪ್ಯಾಟರ್ನ್, ಪಿನ್, ಪಾಸ್ವರ್ಡ್ ಮತ್ತು ಫಿಂಗರ್ ಪ್ರಿಂಟ್ ಮೊದಲಾದ ಆಯ್ಕೆಗಳಿರುತ್ತವೆ. ಈ ಆಯ್ಕೆಗಳಲ್ಲಿ ಪಾಸ್ವರ್ಡ್ ಅಥವಾ ಫಿಂಗರ್ ಪ್ರಿಂಟ್ ಅನ್ಲಾಕ್ ಆರಿಸಿಕೊಳ್ಳಿ. ಇವುಗಳನ್ನು ಕ್ರಾಕ್ ಮಾಡುವುದು ಅತೀ ಕಷ್ಟ. ಒಮ್ಮೆ ಸಾಧನದ ಸ್ಕ್ರೀನ್ ಲಾಕ್ ಸಕ್ರಿಯಗೊಳಿಸಿದ ಮೇಲೆ ನಿಮ್ಮ ಫೋನನ್ನು ಇತರರು ನೋಡುವುದು ಬಹಳ ಕಷ್ಟ.
2. ನಿಮ್ಮ ಡಿಜಿಟಲ್ ಡಾಟಾದ ಹೆಚ್ಚುವರಿ ಭದ್ರತೆಗೆ ಆಂಡ್ರಾಯ್ಡಾ ಎನ್ಕ್ರಿಪ್ಟ್ ಲಕ್ಷಣವನ್ನೂ ಸಲಹೆ ಮಾಡುತ್ತೇವೆ.
ಇದು ಸೆಟ್ಟಿಂಗ್>ಸೆಕ್ಯುರಿಟಿಯಲ್ಲಿ ಇರುತ್ತದೆ. ಕೆಲವು ಫೋನುಗಳಲ್ಲಿ ಸೆಟ್ಟಿಂಗ್> ಪ್ರೈವಸಿಯಡಿ ಇರಬಹುದು. ತಯಾರಕರು ತಮ್ಮ ಸಾಧನಗಳಲ್ಲಿ ಆಪರೇಟಿಂಗ್ ಸಿಸ್ಟಂ ಅನ್ನು ಕಸ್ಟಮೀಕರಿಸಿರುತ್ತಾರೆ. ಹೀಗಾಗಿ ಸೆಟ್ಟಿಂಗ್ ಆಪ್ ಒಳಗೆ ಆಯ್ಕೆಯಾಗಿ ಹುಡುಕಬೇಕು. ಡಿವೈಸನ್ನು ಎನ್ ಕ್ರಿಪ್ಟ್ ಮಾಡುವುದರಿಂದ ಡಾಟಾ, ಆಪ್ಸ್, ಸಂಗೀತ, ಫೋಟೋಗಳು ಮತ್ತು ಇತರ ವಿವರಗಳು ರಕ್ಷಣೆಯಾಗುತ್ತದೆ. ತಪ್ಪು ಕೈಗಳಿಗೆ ಫೋನ್ ಹೋದರೂ ಡಾಟಾ ಪಿನ್, ಪ್ಯಾಟರ್ನ್ ಅಥವಾ ಪಾಸ್ವರ್ಡ್ ಲಾಕ್ ಹಿಂದೆ ರಹಸ್ಯವಾಗಿರುತ್ತದೆ.
ಫೋನ್ ಚಾರ್ಜ್ ಮಾಡಿದ ಕೂಡಲೇ ಎನ್ ಕ್ರಿಪ್ಟ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು. ತಡೆಯಾದಲ್ಲಿ ಕೆಲವು ಡಾಟಾ ಮಿಸ್ ಆಗಬಹುದು.
3. ನೀವು ಈಗಾಗಲೇ ಮಾಡಿರದಿದ್ದಲ್ಲಿ ಆಂಡ್ರಾಯ್ಡಾ ಡಿವೈಸ್ ಮ್ಯಾನೇಜರನ್ನು ಫೋನಿನಲ್ಲಿ ಸಕ್ರಿಯಗೊಳಿಸಿ.
ಎನ್ ಕ್ರಿಪ್ಷನ್ ಹಾಗೆಯೇ ಈ ಆಯ್ಕೆಯೂ ಸೆಟ್ಟಿಂಗ್> ಸೆಕ್ಯುರಿಟಿಯಲ್ಲಿರುತ್ತದೆ. ಸೆಟ್ಟಿಂಗ್> ಪ್ರೈವಸಿಯಡಿಯೂ ಇರಬಹುದು. ಸಿಕ್ಕರೆ ಈ ಆಯ್ಕೆ ಸಕ್ರಿಯಗೊಳಿಸಿ. ಸಕ್ರಿಯಗೊಳಿಸಿದ ಮೇಲೆ ಆಂಡ್ರಾಯ್ಡಾ ಡಿವೈಸ್ ಮ್ಯಾನೇಜರ್ ಪರೀಕ್ಷಿಸಿ ಅದು ಸರಿಯಾಗಿ ಕೆಲಸ ಮಾಡುವುದನ್ನು ಖಾತರಿಗೊಳಿಸಿ. ಗೂಗಲ್ ಅಕೌಂಟ್ ಲಾಗಿನ್ ಆಗಿ ಇದನ್ನು ಮಾಡಬೇಕು. ಆನ್ ಲೈನ್ ಡಾಷ್ ಬೋರ್ಡ್ ಹ್ಯಾಂಡ್ ಸೆಟ್ ಸ್ಥಳ ಮತ್ತು ನಕ್ಷೆ ತೋರಿಸುತ್ತದೆ. ರಿಂಗರನ್ನು ದೂರದಿಂದಲೇ ಸಕ್ರಿಯಗೊಳಿಸುವ ಆಯ್ಕೆಯೂ ನಿಮಗೆ ಸಿಗುತ್ತದೆ. ನಿಮ್ಮ ಪರಿಸರದಲ್ಲಿ ಅದನ್ನು ಪತ್ತೆ ಹಚ್ಚಲು ಇದು ನೆರವಾಗುತ್ತದೆ.
ಸಾಧನ ತಪ್ಪಿದಲ್ಲಿ ನೀವು ಹೊಸ ಪಾಸ್ವರ್ಡ್ ಬಳಸಿ ಅದರ ಸ್ಕ್ರೀನನ್ನು ದೂರದಿಂದಲೇ ಲಾಕ್ ಮಾಡಬಹುದು. ಆಂಡ್ರಾಯ್ಡಾ ಡಿವೈಸ್ ಮ್ಯಾನೇಜರ್ ಫೋನ್ ಲಾಕ್ ಸ್ಕ್ರೀನಿಗೆ ಸಂದೇಶ ಕಳುಹಿಸಲು ನಿಮಗೆ ಬಿಡುತ್ತದೆ. ನಿಮ್ಮ ಫೋನ್ ಸಿಕ್ಕರೆ ಪರ್ಯಾಯ ಸಂಖ್ಯೆಯ ಮೂಲಕ ಜನರು ನಿಮಗೆ ಕರೆ ಮಾಡಬಹುದು. ಕೊನೆಯದಾಗಿ ಇದೆಲ್ಲ ವಿಫಲವಾದಲ್ಲಿ ದೂರದಿಂದಲೇ ಡಿವೈಸ್ ಡಾಟಾ ಅಳಿಸಬಹುದು. ಹಾಗೆ ನಿಮ್ಮ ಡಿಜಿಟಲ್ ಗುರುತು ಅಳಿಸಿ ಹೋಗಲಿದೆ.
4. ಆಂಡ್ರಾಯ್ಡಾ ಡಿವೈಸ್ ಮ್ಯಾನೇಜರ್ ಸೆಟ್ಟಿಂಗ್ ಮಾಡಿದ ಮೇಲೂ ಫೋನ್ ಪಡೆದಾತ ಫೋನನ್ನು ಸ್ವಿಚ್ ಆಫ್ ಮಾಡಿದರೆ ಅಥವಾ ಸಿಮ್ ಕಾರ್ಡ್ ಕಳಚಿದ್ದಲ್ಲಿ, ಡಾಟಾವನ್ನು ದೂರದಿಂದಲೇ ಅಳಿಸಲು ಸಾಧ್ಯವಾಗುವುದಿಲ್ಲ.
ಇನ್ನೂ ಹೆಚ್ಚಿನ ಪರಿಹಾರ ಬೇಕಾಗಿದ್ದಲ್ಲಿ ಸರ್ಬರಸ್ ಆಂಟಿ ಥೆಫ್ಟ್ ಆಪ್ ಬಳಸಬಹುದು.
ಕೃಪೆ: indianexpress.com