ಕಾರು ಢಿಕ್ಕಿ: ವ್ಯಕ್ತಿ ಸಾವು
ಬೆಂಗಳೂರು, ಮೇ 17: ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟಿರುವ ದುರ್ಘಟನೆ ಇಲ್ಲಿನ ವಿಜಯ ನಗರದ ನ್ಯೂ ಪಬ್ಲಿಕ್ ಶಾಲೆ ಮೈದಾನದ ಬಳಿ ನಿನ್ನೆ ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ನಗರದ ಕಾಮಾಕ್ಷಿಪಾಳ್ಯದ ರಾಜೇಂದ್ರ ಸೂರ್ಯವಂಶಿ(45) ಎಂದು ಗುರುತಿಸಲಾಗಿದೆ.
ಬಸವನಗುಡಿಯಲ್ಲಿ ಕೆಲಸ ಮುಗಿಸಿಕೊಂಡ ಸೂರ್ಯವಂಶಿ ಅವರು ರಾತ್ರಿ 10:30ರ ವೇಳೆ ಮನೆಗೆ ಬೈಕ್‌ನಲ್ಲಿ ವಿಜಯನಗರದ ಮಾರ್ಗವಾಗಿ ನ್ಯೂ ಪಬ್ಲಿಕ್ ಸ್ಕೂಲ್ ಮೈದಾನದ ಬಳಿ ಬರುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದ ರಭಸಕ್ಕೆ ಗಂಭೀರವಾಗಿ ತಲೆಗೆ ಗಾಯಗೊಂಡಿದ್ದಾರೆ. ಸ್ಥಳೀಯರು ಸೂರ್ಯವಂಶಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮಧ್ಯರಾತ್ರಿ 2ರ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ವಿಜಯನಗರ ಸಂಚಾರ ಪೊಲೀಸರು, ಕಾರು ಚಾಲಕನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
Next Story