ಕಾರು ಅಫಘಾತದಲ್ಲಿ ಪ್ರಾಣಾಪಾಯ ತಪ್ಪಿಸಲು ಅತ್ಯಾಧುನಿಕ ತಂತ್ರಜ್ಞಾನ
ಭಾರತೀಯ ರಸ್ತೆಗಳು ವಿಶ್ವದಲ್ಲೇ ಅತೀ ಅಪಾಯಕಾರಿ. ಪ್ರತೀ ವರ್ಷ ಭಾರತೀಯ ರಸ್ತೆಗಳಲ್ಲಿ 2 ಲಕ್ಷ ಮಂದಿ ಸಾಯುತ್ತಾರೆ. ಹೀಗಾಗಿ ನಮ್ಮ ರಸ್ತೆ ಸ್ಥಿತಿಗಳಿಂದ ಕಾಪಾಡಬಲ್ಲ ಕಾರು ಸುರಕ್ಷಾ ಲಕ್ಷಣಗಳತ್ತ ಒಮ್ಮೆ ದೃಷ್ಟಿ ಹರಿಸೋಣ. ಕಾರಿನಲ್ಲಿರುವ ಸುರಕ್ಷಾ ವಿಧಾನಗಳನ್ನು ತಿಳಿದುಕೊಳ್ಳಬೇಕೆಂದರೆ ಕಾರು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯುವುದೂ ಮುಖ್ಯ.
ಕಾರು ಅಫಘಾತವಾಗುವಾಗ ಮೂರು ಹಂತಗಳಿರುತ್ತವೆ. ಮೊದಲ ಹಂತದಲ್ಲಿ ಕಾರು ಒಂದು ವಸ್ತುವಿಗೆ ಢಿಕ್ಕಿ ಹೊಡೆಯುತ್ತದೆ. ಢಿಕ್ಕಿಯ ಸಂದರ್ಭದಲ್ಲಿ ಕಾರಿನ ಪ್ರಯಾಣದ ವೇಗವು ಕಾರಿನೊಳಗೆ ಸೇರಿ ಅದು ನಿಲ್ಲುತ್ತದೆ. ಹೀಗಾಗಿ ಕಾರು ತಯಾರಕರು ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ವಿವಿಧ ಹಂತದಲ್ಲಿ ಬಳಸುತ್ತಾ ಬಂದಿದ್ದಾರೆ.
ಆರನೇ ಇಂದ್ರಿಯದ ವೀಲುಗಳು
ಕೆಲವು ವಾಹನಗಳಲ್ಲಿ ಚಾಲಕನ ಸುಸ್ತು ಪತ್ತೆ ವ್ಯವಸ್ಥೆಗಳಿವೆ. ಅವುಗಳು ಸ್ಟೀರಿಂಗ್ ವೀಲ್ ಚಲನೆಗೆ ತಕ್ಕಂತೆ, ಇತರ ಸಿಗ್ನಲುಗಳ ಜೊತೆಗೆ ಚಾಲಕನ ಸುಸ್ತನ್ನೂ ತೋರಿಸುತ್ತವೆ. ಅಪಘಾತಗಳಿಗೆ ಸಾಮಾನ್ಯವಾಗಿ ಚಾಲಕನ ಸುಸ್ತೇ ಕಾರಣವಾಗಿರುತ್ತದೆ. ಇಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಅಥವಾ ಇಎಸ್‌ಪಿಯು ಢಿಕ್ಕಿ ತಡೆಯಲು ಮತ್ತೊಂದು ದೊಡ್ಡ ಪ್ರಚೋದನೆಯಾಗಿದೆ. ಇಎಸ್‌ಪಿ ಎರಡು ಸುರಕ್ಷಾ ವ್ಯವಸ್ಥೆಗಳನ್ನು ಹೊಂದಿದೆ. ಎಬಿಎಸ್ (ಆಂಟಿ ಲಾಕ್ ಬ್ರೇಕಿಂಗ್ ವ್ಯವಸ್ಥೆ) ಮತ್ತು ಟಿಸಿಎಸ್ (ಟ್ರಾಕ್ಷನ್ ಕಂಟ್ರೋಲ್ ವ್ಯವಸ್ಥೆ). ಎರಡೂ ಏಕ ಸಾಲಾಗಿ ಕೆಲಸ ಮಾಡಿ ಜಾರುವ ಹೊರಮೈ ಇದ್ದಾಗ ಅಥವಾ ಢಿಕ್ಕಿಯ ಸಂದರ್ಭದಲ್ಲಿ ಕಾರನ್ನು ನಿಯಂತ್ರಣಕ್ಕೆ ತರಲು ಚಾಲಕನಿಗೆ ನೆರವಾಗುತ್ತದೆ. ತುರ್ತು ನಿಲ್ದಾಣದ ಸಂದರ್ಭ ಅಥವಾ ಜಾರುವ ಹೊರಮೈಯಲ್ಲಿ ಎಬಿಎಸ್ ವೀಲುಗಳನ್ನು ಲಾಕಿಂಗ್ ನಿಂದ ರಕ್ಷಿಸುತ್ತದೆ. ಟಿಸಿಎಸ್ ವೀಲುಗಳು ಸ್ಪಿನ್ ಆಗದಂತೆ ತಡೆಯುವುದಲ್ಲದೆ, ನಿರಂತರವಾಗಿ ವೀಲುಗಳ ವೇಗವನ್ನು ಮೇಲ್ವಿಚಾರಣೆ ಮಾಡುತ್ತದೆ.
ಸ್ಮಾರ್ಟರ್ ಬಾಡಿ, ಸುರಕ್ಷಿತ ಪ್ರಯಾಣಿಕ
ನಿಜವಾದ ಕಾರು ಅಪಘಾತವಾದಾಗ ಪ್ರಯಾಣಿಕರಿಗೆ ಅತ್ಯಧಿಕ ಮಟ್ಟದ ರಕ್ಷಣೆ ಕೊಡಲು ಕಾರು ಬಾಡಿಯನ್ನು ತಯಾರಕರು ಮರು ವಿನ್ಯಾಸ ಮಾಡುತ್ತಿದ್ದಾರೆ. ಹೊಸ ಕಾರು ವಿನ್ಯಾಸಗಳು ಉತ್ತಮ ಕ್ರಂಪಲ್ ಝೋನ್ ಹೊಂದಿರುತ್ತವೆ. ಈ ಝೋನ್ ಗಳು ಅಪಘಾತದ ಪರಿಣಾಮವು ಪ್ರಯಾಣಿಕನನ್ನು ತಲುಪುವ ಮೊದಲು ಹೀರಿಕೊಳ್ಳುತ್ತವೆ. ಕ್ರಂಪಲ್ ಝೋನ್ ಗಳು ವಾಹನದ ಫ್ರಂಟ್ ಮತ್ತು ರೇರ್ ಭಾಗದಲ್ಲಿವೆ. ಕೆಲವು ಕಾರು ತಯಾರಕರು ಸೈಡ್ ಇಂಪಾಕ್ಟ್ ಬಾರನ್ನೂ ಇಟ್ಟಿದ್ದಾರೆ. ಬಾಗಿಲುಗಳನ್ನು ಗಟ್ಟಿ ಮಾಡಿವುದು ಮತ್ತು ಅಪಘಾತದಲ್ಲಿ ಕಠಿಣ ನಿರೋಧಕ ಶಕ್ತಿ ತೋರಿಸುವಂತೆ ವಿನ್ಯಾಸ ಮಾಡಲಾಗಿದೆ.
ಕ್ರಂಪಲ್ ಝೋನ್: 1950ರಲ್ಲಿ ಅನ್ವೇಷಿಸಲಾದ ಕ್ರಂಪಲ್ ಝೋನ್ ಗಳು ಪ್ರಯಾಣಿಕರು ಕುಳಿತಲ್ಲಿ ಸುರಕ್ಷಾ ಕೋಣೆ ಸೃಷ್ಟಿಸುತ್ತದೆ. ಅಪಘಾತದ ಸಂದರ್ಭದಲ್ಲಿ ಈ ಝೋನ್ ಮುಂದೆ ಬಂದು ಆಘಾತದ ಪರಿಣಾಮವನ್ನು ಹೀರಿಕೊಳ್ಳುತ್ತವೆ. ಸುರಕ್ಷಾ ಕೋಣೆಯು ಕೆಂಪು ಬಣ್ಣದಲ್ಲಿದ್ದರೆ, ಕ್ರಂಪಲ್ ಝೋನ್ ಸೇಫ್ಟಿ ಸೆಲ್ ಅನ್ನು ಸುತ್ತುವರಿದಿರುತ್ತದೆ.
ಅಪಘಾತದ ನಂತರದ ತಂತ್ರಜ್ಞಾನ
ಇಂಜಿನಿಯರುಗಳು ಅಪಘಾತದದ ಮೊದಲ ಹಂತದಲ್ಲಿಯೇ ಅದರ ಪರಿಣಾಮ ಕಡಿಮೆ ಮಾಡಲು ಪ್ರಯತ್ನಿಸುವ ಜೊತೆಗೆ ಎರಡನೇ ಹಂತದಲ್ಲೂ ಸುರಕ್ಷೆ ಕೊಟ್ಟಿದ್ದಾರೆ. ಅಪಘಾತದ ನಂತರ ಪ್ರಯಾಣಿಕರು ವೇಗವಾಗಿ ಕಾರು ನಿಲ್ಲುವ ಕಾರಣ ಕಾರಿನ ಆಂತರಿಕ ಭಾಗಗಳಿಗೆ ಹೊಡೆದುಕೊಳ್ಳುವ ಸಾಧ್ಯತೆಯನ್ನು ತಡೆಯುವ ಪ್ರಯತ್ನ ಮಾಡಿದೆ. ಇದರಲ್ಲಿ ಅತೀ ಪರಿಣಾಮಕಾರಿ ಇಂಜಿನಿಯರಿಂಗ್ ಸುರಕ್ಷೆ ಎಂದರೆ ಸೀಟ್ ಬೆಲ್ಟ್. ಅದು ಮರಣದ ಅಪಾಯವನ್ನು ಶೇ. 50ರಷ್ಟು ಕಡಿಮೆ ಮಾಡಲಿದೆ.
ಮೂರನೇ ಹಂತದಲ್ಲಿ ವಾಸ್ತವದಲ್ಲಿ ಅಪಘಾತವಾದಾಗ ವೇಗ ಮತ್ತು ಆಘಾತ ಎರಡೂ ಆಗುತ್ತದೆ. ಇದರಿಂದ ದೇಹದ ಆಂತರಿಕ ಭಾಗಗಳಿಗೆ ನಷ್ಟವಾಗಬಹುದು. ತಯಾರಕರು ಈ ಅಪಾಯ ಕಡಿಮೆ ಮಾಡಲು ಏರ್ ಬ್ಯಾಗುಗಳನ್ನು ತಯಾರಿಸಿದ್ದಾರೆ. ಏರ್ ಬ್ಯಾಗುಗಳನ್ನು ಕಾರಿನ ಫ್ರಂಟಲ್ಲಿ ಇರಿಸಲಾಗುತ್ತದೆ ಮತ್ತು ಕ್ರಾಶ್ ಸೆನ್ಸಾರುಗಳು ಅವುಗಳನ್ನು ಸಕ್ರಿಯಗೊಳಿಸುತ್ತವೆ. ಅಪಘಾತವಾದಾಗ 40 ಮಿಲಿ ಸೆಕೆಂಡುಗಳಲ್ಲಿ ಇವು ಹೊರ ಬರುತ್ತವೆ. ಹಲವು ಕಾರುಗಳ ಬದಿಗಳಲ್ಲೂ ಏರ್ ಬ್ಯಾಗುಗಳನ್ನು ಜೋಡಿಸಲಾಗಿದೆ. ಇದರಿಂದ ಹೊರಗಿನ ಪರಿಣಾಮದಿಂದಲೂ ರಕ್ಷಣೆ ಪಡೆದುಕೊಳ್ಳಬಹುದು.
ಸೀಟ್ ಬೆಲ್ಟುಗಳು
ಸೀಟ್ ಬೆಲ್ಟುಗಳನ್ನು ಧರಿಸುವುದು 1970ರಲ್ಲಿ ಆಸ್ಟ್ರೇಲಿಯದ ವಿಕ್ಟೋರಿಯದಲ್ಲಿ ಕಡ್ಡಾಯ ಮಾಡಲಾಗಿತ್ತು. ಇದೀಗ ವಿಶ್ವದಾದ್ಯಂತ ಸೀಟ್ ಬೆಲ್ಟು ಕಡ್ಡಾಯವಾಗಿದೆ. ಆಧುನಿಕ ಸೀಟ್ ಬೆಲ್ಟುಗಳು ಪ್ರಿ ಟೆನ್ಷನರುಗಳನ್ನು ಹೊಂದಿರುವ ಕಾರಣ ಹೆಚ್ಚು ಸಮರ್ಥವಾಗಿರುತ್ತವೆ. ಅಪಘಾತದ ಸಂದರ್ಭದಲ್ಲಿ ಪ್ರಯಾಣಿಕ ಮುಂದಕ್ಕೆ ಅಥವಾ ಹಿಂದಕ್ಕೆ ಬಾಗುವುದರಿಂದ ಸೀಟ್ ಬೆಲ್ಟ್ ರಕ್ಷಿಸುತ್ತದೆ.
ಮುಂದಿನ ಬಾರಿ ನೀವು ಕಾರು ಖರೀದಿಸಲು ಹೋದಾಗ ಈ ಸುರಕ್ಷಾ ವ್ಯವಸ್ಥೆಗಳು ಇವೆಯೇ ಎಂದು ಮೊದಲು ನೋಡಿ. ಲೆದರ್ ಸೀಟ್ ಅಥವಾ ಸಂಗೀತ ವ್ಯವಸ್ಥೆಯ ಬಗ್ಗೆ ಆಮೇಲೆ ಚಿಂತಿಸಿದರೂ ನಡೆಯುತ್ತದೆ. ಇದು ನಿಮ್ಮ ಜೀವ ರಕ್ಷಿಸಬಹುದು. ಅತ್ಯಾಧುನಿಕ ಪ್ರಯಾಣಿಕ ರಕ್ಷಣೆ ವ್ಯವಸ್ಥೆಯಾದ ಇಎಸ್‌ಪಿ, ಸುಸ್ತು ಪತ್ತೆ ಹಚ್ಚುವ ವ್ಯವಸ್ಥೆ, ಉನ್ನತ ಗುಣಮಟ್ಟದ ಏರ್ ಬ್ಯಾಗ್ ಮತ್ತು ಸೀಟ್ ಬೆಲ್ಟುಗಳು ಇವೆಯೇ ಗಮನಿಸಿ.
ಕೃಪೆ: http://scroll.in