ಇಷ್ಟ
ಅಂದು ಮನೆಯಲ್ಲಿ ವಧು ಪರೀಕ್ಷೆ.
ಹುಡುಗ ಹುಡುಗಿಯನ್ನು ಮೆಚ್ಚಿದ್ದ.
ಆದರೆ ಹುಡುಗಿ ಹುಡುಗನ ಕುರಿತಂತೆ ಇನ್ನೂ ನಿರ್ಧರಿಸಿರಲಿಲ್ಲ.
ಇಡೀ ದಿನ ಹುಡುಗಿಗೆ ಹುಡುಗನದೇ ಯೋಚನೆ.
‘ಒಪ್ಪಬೇಕೋ, ಬೇಡವೋ?’
ಇಡೀ ದಿನ ಮನೆಯಲ್ಲಿ ಅದನ್ನೇ ಚರ್ಚಿಸತೊಡಗಿದಳು.
ಕೊನೆಗೆ ತಾಯಿಯಲ್ಲಿ ಕೇಳಿದಳು ‘‘ಅಮ್ಮಾ...ನಿನಗೆ ಹುಡುಗ ಇಷ್ಟವಾದನೋ...’’
ತಾಯಿ ನಾಚಿ ಹೇಳಿದಳು ‘‘ನನಗೇನೋ ಇಷ್ಟವಾದ. ಆದರೆ ಅವನಿಗೆ ನಾನು ಇಷ್ಟವಾಗಬೇಕಲ್ಲ...ಎಲ್ಲಕ್ಕಿಂತ ಮುಖ್ಯವಾಗಿ ನಿನ್ನಪ್ಪ ಇದಕ್ಕೆ ಒಪ್ಪಬೇಕಲ್ಲ...’’
-ಮಗು
Next Story