ಮತ್ತೆ ಅಮ್ಮನ ಮಡಿಲಿಗೆ ತಮಿಳು ನಾಡು
ಚೆನ್ನೈ, ಮೇ 19: ತಮಿಳುನಾಡು ಮತ್ತೆ ಅಮ್ಮನ ಮಡಿಲಿಗೆ ಬಿದ್ದಿದೆ. ಸಮೀಕ್ಷೆಗಳನ್ನು ಸುಳ್ಳಾಗಿಸಿರುವ ಎಐಎಡಿ ಎಂಕೆ ಪಕ್ಷ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಮರಳುವ ಸ್ಪಷ್ಟ ಸೂಚನೆ ಸಿಕ್ಕಿದೆ. ಎಐಎಡಿಎಂಕೆ 151 ಸ್ಥಾನಗಳಲ್ಲಿ ಸ್ಪಷ್ಟ ಮುನ್ನಡೆ ಪಡೆದಿದ್ದರೆ ಡಿಎಂಕೆ 76 ಸ್ಥಾನಗಳಲ್ಲಿ ಮಾತ್ರ ಮುಂದಿದೆ. ಮೊದಲು ಕರುಣಾನಿಧಿ ನೇತೃತ್ವದ ಡಿಎಂಕೆ ಮುನ್ನಡೆ ಸಾಧಿಸುವ ಲಕ್ಷಣ ತೋರಿಸಿದ್ದರೂ 9 ಗಂಟೆಯ ಬಳಿಕ ಅಮ್ಮಾ ಸ್ಪಷ್ಟ ಮುನ್ನಡೆ ಸಾಧಿಸುವ ಮೂಲಕ ಇನ್ನು ಹಿಂದೆ ಸರಿಯದ ಲಕ್ಷಣ ತೋರಿಸುತ್ತಿದ್ದಾರೆ.
Next Story