ನಿಮ್ಮ ನೆಚ್ಚಿನ Nokia ಈಸ್ ಕಮಿಂಗ್ ಬ್ಯಾಕ್!
ಒಂದು ಕಾಲದಲ್ಲಿ ಬಹಳ ಪ್ರಸಿದ್ಧಿ ಪಡೆದಿದ್ದ ಬ್ರಾಂಡ್ ನೋಕಿಯ ಮತ್ತೆ ಬರುತ್ತಿದೆ. ಮೈಕ್ರೋಸಾಫ್ಟ್ ದುರದೃಷ್ಟವಶಾತ್ ನೋಕಿಯದ ಉದ್ಯಮಕ್ಕೆ ಸಮಸ್ಯೆ ಒಡ್ಡಿದ ಮೇಲೆ ಮೊಬೈಲ್ ಬ್ರಾಂಡ್ ತನ್ನ ನಂಬಿಗಸ್ತ ಗ್ರಾಹಕರನ್ನು ಕಳೆದುಕೊಂಡಿತ್ತು. ಹೀಗಾಗಿ ಆಂಡ್ರಾಯ್ಡ್ ದೈತ್ಯರ ನಡುವೆ ಸ್ಪರ್ಧೆಯಲ್ಲಿ ಹಿಂದೆ ಬಿದ್ದಿದೆ.
ಈಗ ನೋಕಿಯ 10 ವರ್ಷದ ಲೈಸೆನ್ಸಿಂಗ್ ಡೀಲನ್ನು ಎಚ್ ಎಂ ಡಿ ಗ್ಲೋಬಲ್ ಆಯ್ ಕಂಪನಿ ಜತೆಗೆ ಮಾಡಿಕೊಂಡಿದೆ. ಇದು ಐಫೋನ್ ತಯಾರಿಸುವ ತೈವಾನಿನ ಫಾಕ್ಸ್ ಕಾನ್ ಉಪ ಸಂಸ್ಥೆ.
ನಾವು ಆದರ್ಶಮಯ ನೋಕಿಯ ಆಂಡ್ರಾಯ್ಡಾ ಫೋನ್ ಬೇಕೆಂದುಕೊಂಡಿದ್ದೆವು. ಅದು ಅಂತಿಮವಾಗಿ ಬರುತ್ತಿದೆ. ಹೊಸ ಸ್ಮಾರ್ಟ್ ಫೋನ್ ಮತ್ತು ಟಾಬ್ಲೆಟ್ ಆಂಡ್ರಾಯ್ಡಾ ಆಗಿರಲಿದೆ. ಮುಂದಿನ ಮೂರು ವರ್ಷಗಳಲ್ಲಿ ಎಚ್.ಎಂ.ಡಿ ಆಂಡ್ರಾಯ್ಡಾ ಫೋನ್ ಗಳನ್ನು ನೋಕಿಯಾಗಾಗಿ ತಯಾರಿಸಲು 500 ದಶಲಕ್ಷ ಡಾಲರ್ ಸುರಿಯಲಿದೆ.
ನಮಗೆ ನೆನಪಿರುವ ಈ ಹೊಸ ಲಕ್ಷಣಗಳನ್ನು ನೋಕಿಯ ಹೊಸ ಫೋನಿನಲ್ಲಿ ಇಡಲಿದೆಯೇ?
ಉದಾಹರಣೆಗೆ ಐಕಾನಿಕ್ ರಿಂಗ್ಟೋನ್ ನೆನಪಿದೆಯೆ? ಪ್ರಸಿದ್ಧ ಸ್ನೇಕ್ ಗೇಮ್ ಮರೆಯಲು ಸಾಧ್ಯವೆ? ಅಲ್ಲದೆ ಕನೆಕ್ಟಿಂಗ್ ಪೀಪಲ್‌ಎನ್ನುವ ಲೋಗೋ ಕೂಡ ಮರೆಯಲು ಸಾಧ್ಯವಿಲ್ಲ.
ನೋಕಿಯಾ ಈಗ ಅದ್ಭುತವಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಮೂಲ ಗ್ರಾಹಕರನ್ನು ಮತ್ತೊಮ್ಮೆ ಪಡೆಯಬಹುದು.
ಕೃಪೆ:www.indiatimes.com