ಎರಡು ವಾಟ್ಸ್ ಅಪ್ ಖಾತೆ ನಿರ್ವಹಿಸಿ- ಈ ಹೊಸ ಮೊಬೈಲ್ ನಲ್ಲಿ!
ಚೀನೀ ಹ್ಯಾಂಡ್ಸೆಟ್ ತಯಾರಕ ಕೂಲ್ ಪ್ಯಾಡ್ ಹೊಸ ಮ್ಯಾಕ್ಸ್ ಸ್ಮಾರ್ಟ್ ಫೋನ್ ಅನ್ನು ಹೊರಬಿಟ್ಟಿದ್ದಾರೆ. ಇದರ ಬೆಲೆ ರು. 24,999. ಮೇ 30ರಂದು ಅಮೆಜಾನ್ ನಲ್ಲಿ ಇದು ಲಭ್ಯವಿರಲಿದೆ.
ಕೂಲ್ ಪ್ಯಾಡ್ ಮ್ಯಾಕ್ಸ್ ಗೆ ಡ್ಯುಯಲ್ ಇನ್ ಒನ್‌ಎಂದು ಟ್ಯಾಗ್ ಲೈನ್ ಕೊಡಲಾಗಿದೆ. ಇದರಲ್ಲಿ ವಿಶೇಷ ಸಿಮ್ ಮ್ಯಾನೇಜ್ಮೆಂಟ್ ಇದೆ. ಈ ಸ್ಮಾರ್ಟ್ ಫೋನ್ ವಾಟ್ಸಪ್, ಮೆಸೆಂಜರ್, ಫೇಸ್ಬುಕ್, ಟ್ವಿಟರ್ ಮತ್ತು ಇನಸ್ಟ್ರಾಗ್ರಾಂಗಳಲ್ಲಿ ಎರಡು ಖಾತೆಗಳನ್ನು ಬಳಸಲು ಅವಕಾಶ ಕೊಡುತ್ತದೆ. ನಿಮ್ಮ ಕೆಲಸ ಮತ್ತು ಮನೆಯ ಫೋನನ್ನು ಪ್ರತ್ಯೇಕಿಸಿ ಭಿನ್ನ ಡಿವೈಸುಗಳ ಬದಲಾಗಿ ಒಂದೇ ಡಿವೈಸಲ್ಲಿ ಎರಡನ್ನೂ ನಿಭಾಯಿಸಲು ಈ ಅವಕಾಶ ಕೊಡಲಾಗಿದೆ.
ಸ್ಮಾರ್ಟ್ ಫೋನ್ ಎರಡು ಮೋಡ್ ಗಳನ್ನು ಹೊಂದಿರಲಿದೆ. ಖಾಸಗಿ ಮತ್ತು ಕೆಲಸ. ಖಾಸಗಿ ಮೋಡ್ ಅಲ್ಲಿ ನೀವು ಸಾಮಾನ್ಯ ಆಂಡ್ರಾಯ್ಡಾ ಫೋನ್ ಬಳಸಿದಂತೆಯೇ ಬಳಸಬಹುದು. ಆದರೆ ಕೆಲಸದ ಮೋಡ್ ಅಲ್ಲಿ ನೀವು ಡಾಟಾಗಳನ್ನು ಎನ್ಕ್ರಿಪ್ಟೆಡ್ ಆಗಿ ಮತ್ತು ಸೆಕ್ಯೂರ್ ಆಗಿ ಇಡುವ ಅವಕಾಶವಿದೆ. ಎರಡೂ ಅಕೌಂಟುಗಳು ಕಾಂಟಾಕ್ಟ್ ಗಳು, ಸಂದೇಶಗಳು ಮತ್ತು ಆಪ್ ಗಳನ್ನು ಪ್ರತ್ಯೇಕವಾಗಿ ನಿಭಾಯಿಸಲಿವೆ. ಹಾಗೆ ವಾಟ್ಸಪ್ ಗಾಗಿ ನೀವು ಒಂದೇ ಫೋನಲ್ಲಿ ಎರಡು ಖಾತೆಗಳನ್ನು ಬಳಸಬಹುದು. ಆಪ್ ಅದಕ್ಕೆ ಅವಕಾಶ ಕೊಡದಿದ್ದರೂ, ಫೋನ್ ಕೊಡುತ್ತದೆ.
ಇದು 5.5 ಇಂಚಿನ FHD ಕರ್ವ್ ಇರುವ 2.5 D ಡಿಸ್ಪಲೇ, 12 ಮೆಗಾಪಿಕ್ಸಲ್ ಮೈನ್ ಕ್ಯಾಮರಾ, 5 ಮೆಗಾ ಪಿಕ್ಸಲ್ ಫ್ರಂಟ್ ಫೇಸಿಂಗ್ ಶೂಟರ್ ಮತ್ತು 2800 mAh ಬ್ಯಾಟರಿ ಹೊಂದಿದೆ. ಆಂಡ್ರಾಯ್ಡಾ 5.1 ಲಾಲಿಪಪ್ ಇದ್ದು, ಎಲ್ಲಕ್ಕಿಂತ ಹೆಚ್ಚಾಗಿ ಕೂಲ್ UI ಹೊಂದಿದೆ. ಭಾರತದಲ್ಲಿ ತರಲಾಗುತ್ತಿರುವ ವರ್ಷನಲ್ಲಿ 64 GB ಸಂಗ್ರಹವಿದ್ದು, 4 GB RAM ಇದೆ. ಸ್ನಾಪ್ ಡ್ರಾಗನ್ 617 ಪ್ರೊಸೆಸರ್ ಇದೆ. ಫೋನ್ ಕ್ವಾಲಕಮ್ಯು ನ ಕ್ವಿಕ್ ಚಾರ್ಚ್ 3.0 ತಂತ್ರಜ್ಞಾನ ಹೊಂದಿದೆ.
ಕೂಲ್ ಪ್ಯಾಡ್ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ಹೇಳುವ ಪ್ರಕಾರ, ಭಾರತದಲ್ಲಿ ಈ ವರ್ಷ 3 ದಶಲಕ್ಷ ಫೋನುಗಳನ್ನು ಮಾರಲಿದ್ದೇವೆ. ಅದರಿಂದ ನಾವು ಶೇ.3-4 ಮಾರುಕಟ್ಟೆ ವ್ಯಾಪ್ತಿಯನ್ನು ದೇಶದಲ್ಲಿ ಪಡೆಯಲಿದ್ದೇವೆ. ಸ್ಥಳೀಯವಾಗಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಭಾರತದಲ್ಲಿ ಆರಂಭಿಸುವುದು ಮತ್ತು ಇಂಟರ್ನೆಟ್ ಆಧಾರಿತ ಸೇವೆಗಳನ್ನು ಕೊಡುವ ಬಗ್ಗೆಯೂ ಸಂಸ್ಥೆ ಯೋಜಿಸಿದೆ. ಮೇಕ್ ಇನ್ ಇಂಡಿಯಾ ಯೋಜನೆಯನ್ನೂ ಅದು ಹೊಂದಿದೆ.
ಕೃಪೆ:www.hindustantimes.com