ಅಯೋಧ್ಯೆಯಲ್ಲಿ ಬಜರಂಗದಳದಿಂದ ಶಸ್ತ್ರಾಸ್ತ್ರ ತರಬೇತಿ ಶಿಬಿರ ಪ್ರಾರಂಭ
ಅಯೋಧ್ಯೆ,ಮೇ 23: ಉತ್ತರ ಪ್ರದೇಶದಲ್ಲಿ ಬಜರಂಗದಳ ತನ್ನ ಕಾರ್ಯಕರ್ತರಿಗೆ ರೈಫಲ್ ಚಲಾಯಿಸಲು, ತಲವಾರು ಪ್ರಯೋಗ ಮತ್ತು ಲಾಠಿ ಚಲಾಯಿಸುವ ತರಬೇತಿ ಪ್ರಾರಂಭಿಸಿದೆ. ಹಿಂದೂಗಳಿಗೆ ಅವರ ಸಹೋದರರಲ್ಲದವರಿಂದ ಸುರಕ್ಷಿತವಾಗಿರಲು ಈ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಸಂಘಟನೆಯು ಹೇಳಿಕೊಂಡಿದೆ.
ಟ್ರೈನಿಂಗ್ ಕ್ಯಾಂಪ್ ಅಯೋಧ್ಯೆಯಲ್ಲಿ ಏರ್ಪಡಿಸಲಾಗಿದೆ. ಇಂತಹ ಕ್ಯಾಂಪ್‌ಗಳನ್ನು ಜೂನ್‌ನಲ್ಲಿ ಸುಲ್ತಾನ್‌ಪುರ, ಪಿಲಿಬಿತ್,ನೋಯ್ಡ ಹಾಗೂ ಫತೇಪುರದಲ್ಲಿಯೂ ನಡೆಸಲಾಗುವುದು. ಈ ಸಂಘಟನೆಯು ವಿಶ್ವಹಿಂದೂ ಪರಿಷತ್‌ನ ಯೂತ್ ವಿಂಗ್ ಆಗಿದೆ.ಈ ಸಂಘಟನೆಯ ವಿರುದ್ಧ ದಂಗೆ ಮತ್ತು ಹಿಂಸೆ ಹರಡಿದ ಆರೋಪವಿದೆ. ಆದರೆ ಬಜರಂಗದಳ ಅಸ್ತ್ರ ಪ್ರಯೋಗದ ಟ್ರೈನಿಂಗ್‌ನ್ನು ಹಲವು ವರ್ಷಗಳಿಂದ ಏರ್ಪಡಿಸುತ್ತಿದೆ. ಇದಕ್ಕಿಂತ ಮೊದಲು 2002ರಲ್ಲಿ ಅಯೋಧ್ಯೆಯಲ್ಲಿ ಆಯುಧ ತರಬೇತಿಯನ್ನುನಡೆಸಿತ್ತು ಎಂದು ವರದಿಯಾಗಿದೆ.
Next Story