ಫೇಸ್ ಬುಕ್ಅಲ್ಲಿ ನೀವು ಯಾರನ್ನು ಫಾಲೋ ಮಾಡುತ್ತೀರಿ?
ಸಾಮಾಜಿಕ ತಾಣ ಫೇಸ್ಬುಕ್ ಬಗ್ಗೆ ನಡೆದಿರುವ ಒಂದು ಕುತೂಹಲಕರ ಅಧ್ಯಯನದಲ್ಲಿ ನಾವು ಫೋಲೋ ಮಾಡುವ ಪ್ಯಾಟರ್ನನ್ನು ತಿಳಿದುಕೊಳ್ಳಲಾಗಿದೆ. ನಾವು ಸಾಮಾನ್ಯವಾಗಿ ನಮಗಿಂತ ಹೆಚ್ಚು ಜನಪ್ರಿಯರಾಗಿರುವವರು ಮತ್ತು ನಮಗಿಂತ ಹೆಚ್ಚು ಸ್ನೇಹಿತರು ಇರುವವರನ್ನು ಫೋಲೋ ಮಾಡುತ್ತೇವೆ ಎಂದು ಅಧ್ಯಯನ ಹೇಳಿದೆ.
ಈ ಅಧ್ಯಯನದ ಸಂದರ್ಭದಲ್ಲಿ ಸಾಮಾಜಿಕ ತಾಣಗಳಲ್ಲೂ ಹೈಯರಾರ್ಕಿ (ಮೇಲಿನ ಸ್ಥಾನ, ಕೆಳಗಿನ ಸ್ಥಾನ) ಇರುವುದು ತಿಳಿದು ಬಂದಿದೆ. ಸಾಮಾನ್ಯವಾಗಿ ಈ ಹೈಯರಾರ್ಕಿಯಲ್ಲಿ ಜನರು ಅಡ್ಡಡ್ಡವಾಗಿ ಅಥವಾ ಮೇಲ್ಮುಖವಾಗಿ ಫೋಲೋ ಮಾಡುತ್ತಾರೆಯೇ ವಿನಾ ತಮಗಿಂತ ಕೆಳದರ್ಜೆಯಲ್ಲಿರುವವರನ್ನು ಫೋಲೋ ಮಾಡುವುದಿಲ್ಲ.
ಬುದ್ಧಿಮತ್ತೆ, ಸ್ಮರಣೆ, ಜನಪ್ರಿಯ ಮತ್ತು ವೈಯಕ್ತಿಕ ಚಹರೆಗಳಲ್ಲಿ ತಾವು ತಮ್ಮ ಸ್ನೇಹಿತರಿಗಿಂತ ಉತ್ತಮ ಎಂದು ಹಲವರು ತಿಳಿದಿರುತ್ತಾರೆ. ಆದರೆ ಅದು ಸುಳ್ಳು. ನಮ್ಮ ಸ್ನೇಹಿತರು ಹೆಚ್ಚು ಸಕ್ರಿಯರಾಗಿರುತ್ತಾರೆ ಮತ್ತು ಹೆಚ್ಚು ಪ್ರಭಾವ ಹೊಂದಿದವರಾಗಿರುತ್ತಾರೆ. ಇದನ್ನು ಜನರಲೈಸ್ಡ್ ಫ್ರೆಂಡ್ಶಿಪ್ ಪಾರಡಾಕ್ಸ್ ಎನ್ನಲಾಗುತ್ತದೆ ಎಂದು ಮೆಕ್ಗಿಲ್ ವಿಶ್ವವಿದ್ಯಾನಿಲಯದ ಅಧ್ಯಯನಕಾರ ನಾಗ್ಮೆ ಮೊಮೆನಿ ತಾರಾಮ್ಸರಿ ಹೇಳಿದ್ದಾರೆ.
ಬಳಕೆದಾರನ ಪ್ರಭಾವವನ್ನು ಅಂದಾಜಿಸಲು ಹೊಸ ವಿಧಾನಗಳನ್ನು ಬಳಸುವ ಮೂಲಕ ಜನರಲೈಸ್ಡ್ ಫ್ರೆಂಡ್ಶಿಪ್ ಪಾರಡಾಕ್ಸ್ ಎಷ್ಟರಮಟ್ಟಿಗೆ ಸಾಮಾಜಿಕ ತಾಣಗಳಲ್ಲಿದೆ ಎಂದು ಅಧ್ಯಯನಕಾರರು ತಿಳಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಬಹುತೇಕ ಎಲ್ಲಾ ಬಳಕೆದಾರರು ಅಂದರೆ ಶೇ. 90ರಷ್ಟು ಜನರಲೈಸ್ಡ್ ಫ್ರೆಂಡ್ಶಿಪ್ ಪಾರಡಾಕ್ಸನ್ನು ಅನುಭವಿಸಿದ್ದಾರೆ. ಅಧಿಕ ಸಕ್ರಿಯವಾಗಿರುವವರು ಮತ್ತು ಪ್ರಭಾವಿಗಳೂ ಇದರಿಂದ ಹೊರತಲ್ಲ. ಇದಕ್ಕೆ ಮುಖ್ಯ ಕಾರಣ ಯಾವುದೇ ಘಟ್ಟದಲ್ಲಿರುವ ಸಕ್ರಿಯ ವ್ಯಕ್ತಿಗಳೂ ಸಹ ತಮಗಿಂತ ಹೆಚ್ಚು ಸಕ್ರಿಯರಾಗಿರುವವರನ್ನೇ ಮತ್ತು ಪ್ರಭಾವಿಗಳನ್ನೇ ಫೋಲೋ ಮಾಡಲು ಬಯಸುವುದೇ ಆಗಿದೆ.
ಕೃಪೆ:www.indiatvnews.com