ಪದೇ ಪದೇ ಸುಸ್ತಾಗುತ್ತದೆಯೆ? ನಿಮಗೆ ಆರೋಗ್ಯಕರ ಜೀವನಶೈಲಿ ಬೇಕು
ಕಡಿಮೆ ಶಕ್ತಿ ಮತ್ತು ಪದೇ ಪದೇ ಸುಸ್ತಾಗುವುದು ಬಹಳಷ್ಟು ಮಂದಿಯ ಸಾಮಾನ್ಯ ದೂರಾಗಿರುತ್ತದೆ. ಇದು ಯುವಜನತೆ ಮತ್ತು ಕ್ರೀಡಾಳುಗಳನ್ನೂ ಕಾಡುವುದು ಸಾಮಾನ್ಯ ಸುಸ್ತು ಹಲವು ರೋಗಗಳ ಸೂಚಕ. ಮಧುಮೇಹ, ಬೊಜ್ಜು, ಹೃದಯ ರೋಗ, ಆರ್ಥಿರೈಟಿಸ್ ಮತ್ತು ಅನಿಮಿಯದಂತಹ ಸಾಮಾನ್ಯ ರೋಗಗಳು ಸುಸ್ತಿಗೆ ಕಾರಣವಾಗಬಹುದು.
ಮಾರಕ ಸುಸ್ತು ಸಮಸ್ಯೆ ಇನ್ನೂ ಅಪಾಯಕಾರಿ. ಅದರ ಸಾಮಾನ್ಯ ಚಿಹ್ನೆಗಳೆಂದರೆ ಸಾಕಷ್ಟು ನಿದ್ದೆ ಇಲ್ಲದಿರುವುದು, ಮೂಳೆ ಮತ್ತು ಸಂಧಿಗಳಲ್ಲಿ ನೋವು, ಆಗಾಗ್ಗೆ ಶೀತವಾಗುವುದು, ತಲೆನೋವು, ದೇಹವಿಡೀ ನೋವು, ಮರೆವು, ಮೆದುಳು ಶಕ್ತಿ ಕ್ಷೀಣ, ಕಿರಿಕಿರಿ ಮತ್ತು ಮನೋಸ್ಥಿತಿ ಬದಲಾಗುವುದು. ನಮ್ಮ ದೇಹದಲ್ಲಿ ಬಹಳಷ್ಟು ಶಕ್ತಿ ಇರಬೇಕು. ಆದರೆ ಸರಿಯಾದ ಆಹಾರ ಸೇವಿಸದೆ, ವಿಷಕಾರಿಗಳನ್ನು ದೇಹಕ್ಕೆ ಸೇರಿಸುವುದು ಮತ್ತು ಸಾಕಷ್ಟು ದ್ರವ ಪದಾರ್ಥ ಸೇವಿಸದೆ ಇರುವುದು ಸಮಸ್ಯೆ ತರುತ್ತದೆ. ದೇಹಕ್ಕೆ ಉತ್ತಮ ಪೌಷ್ಟಿಕಾಂಶ ಸಿಕ್ಕಾಗ ಮತ್ತು ರಾಸಾಯನಿಕ ರಹಿತ ಆಹಾರ, ಸಾಕಷ್ಟು ವಿಶ್ರಾಂತಿ, ನಿದ್ದೆ ಮತ್ತು ವಿಷವಲ್ಲದ ಪರಿಸರವಿದ್ದರೆ ಉತ್ತಮ.
ಮಾರಕ ಸುಸ್ತಿಗೆ ಕೆಲವು ಸಾಮಾನ್ಯ ಕಾರಣಗಳು
► ಹರ್ಮೋನ್ ಅಸಮತೋಲನ, ಮುಖ್ಯವಾಗಿ ಥೈರಾಯ್ಡ ಕಾರ್ಯ
►ಪೌಷ್ಟಿಕಾಂಶದ ಕೊರತೆ. ವಿಟಮಿನ್ ಮತ್ತು ಲವಣಗಳ ಕೊರತೆ, ಆಹಾರ ಅಸಹಿಷ್ಣುತೆ ಮತ್ತು ಅಲರ್ಜಿಗಳು
► ಮಾರಕ ಆಹಾರ
► ಸಾಕಷ್ಟು ವ್ಯಾಯಾಮ ಮತ್ತು ನಿದ್ದೆ ಇಲ್ಲ
► ಜಠರದ ಸೋಂಕು
► ದುರ್ಬಲ ಜೀರ್ಣಕ್ರಿಯೆ
►ಡಿಸ್ಬಿಯಾಸಿಸ್, ಕ್ಯಾಂಡಿಡಿಯಾಸಿಸ್
► ಮಾರಕ ಸುಸ್ತು
► ವಿಷ ನಿರ್ಮಾಣ (ಧೂಮಪಾನ, ಆಲ್ಕೋಹಾಲ್ ಮತ್ತು ಮಾದಕ ದ್ರವ್ಯ ಸೇವನೆ, ಕೃತಕ ಸಿಹಿಗಳು, ಕೀಟನಾಶಕಗಳು)
► ಕೀಮೋತೆರಪೆಟಿಕ್ ಆಜೆಂಟುಗಳಾದ ಆಂಟಿಬಯಾಟಿಕ್, ಹಾಮೋನು ಔಷಧಿ, ನೋವು ನಿವಾರಕಗಳ ಅತಿಯಾದ ಸೇವನೆ.
ಮಾರಕ ಸುಸ್ತಿಗೆ ಚಿಕಿತ್ಸೆ ನೀಡಲು ಅದರ ಕಾರಣಗಳನ್ನು ತಿಳಿಯುವುದು ಅಗತ್ಯ. ವಿಷ ನಿವಾರಣೆ, ಮರು ನಿರ್ಮಾಣ ಮತ್ತು ಅತ್ಯಧಿಕ ಪೌಷ್ಟಿಕತೆ ಪಡೆಯಬೇಕು. ಚಿಹ್ನೆಗಳು ಮತ್ತೂ ಇದ್ದಲ್ಲಿ ರೋಗಗಳಿಲ್ಲ ಎಂದು ಖಚಿತಪಡಿಸಲು ವೃತ್ತಿಪರ ಸಹಾಯವನ್ನು ಪಡೆದುಕೊಳ್ಳಬೇಕು.
► ದೇಹದ ವಿಷ ನಿವಾರಣೆ ಮತ್ತು ಸುಸ್ತನ್ನು ನಿವಾರಿಸಲು ಕೆಲವು ಸಲಹೆಗಳು
► ನಿಮಗೆ ಸಹಿಷ್ಣುವಾದ ಆಹಾರ ಗುರುತಿಸುವುದು
► ತರಕಾರಿ, ಸಲಾಡ್ ಮತ್ತು ಹಣ್ಣುಗಳ ಅಧಿಕ ಸೇವನೆ
► ಹೆಚ್ಚು ಪ್ರೊಟೀನ್ ಸೇವನೆ ಮತ್ತು ಮೈಕ್ರೊ ಪೌಷ್ಟಿಕ ಕೊರತೆ, ಲವಣಗಳು, ಸತು, ಸೆಲೆನಿಯಂ, ಕ್ರೋಮಿಯಂ, ಮ್ಯಾಂಗನೀಸ್ ಮತ್ತು ಮೆಗ್ನೇಶೀಯಂನ್ನು ಸರಿಪಡಿಸಿಕೊಳ್ಳುವುದು.
►ಆರೋಗ್ಯಕರ ಕೊಬ್ಬು ಸೇರಿಸಲು ಕಡಲೆಗಳು, ಬೀಜಗಳು ಮತ್ತು ಕೋಲ್ಡ್ ಪ್ರೆಸ್ಡ್ ಎಣ್ಣೆ ಬಳಕೆ
►ಅಧಿಕ ಫೈಬರ್ ಇರುವ ಆಹಾರ ಸೇವಿಸುವುದು.
►ತಾಜಾ ಆಹಾರ ತಯಾರಿಸಿ ಮೈಕ್ರೋವೇವ್ ಬಳಕೆ ಕಡಿಮೆ ಮಾಡಿ
► ಆರೋಗ್ಯಕರ ಅಡುಗೆ ಸಾಮಾನಾದ ಸ್ಟೇನ್ಲೆಸ್ ಸ್ಟೀಲ್ ಬಳಸಿ
►ಆಗಾಗ್ಗೆ ಉಪವಾಸ ಮಾಡುವುದು ಅಭ್ಯಾಸ ಮಾಡಿ
► ಸಂಸ್ಕರಿತ ಆಹಾರ ಕಡಿಮೆ ಮಾಡಿ, ಸಕ್ಕರೆ ಕಡಿಮೆ ಮಾಡಿ, ಅಧಿಕ ಸಂಸ್ಕರಿತ ಎಣ್ಣೆ ಮತ್ತು ಕರಿದ ತಿಂಡಿ ಬೇಡ.
► ಕೀಟನಾಶಕ ಮತ್ತು ರಾಸಾಯನಿಕ ಬಳಸಿದ ಆಹಾರ ಬೇಡ. ಸಾವಯವ ಆಹಾರ ಬಳಸಿ
►ಧೂಮಪಾನ ಬಿಡಿ
► ನೀರು ಮತ್ತು ದ್ರವಾಹಾರದ ಮೂಲಕ ಸಾಕಷ್ಟು ಹೈಡ್ರೇಶನ್ ಮಾಡಿಕೊಳ್ಳಿ. ದಿನಕ್ಕೆ 6-8 ಗ್ಲಾಸ್ ನೀರು ಕುಡಿಯಿರಿ.
► ಆಲ್ಕೋಹಾಲ್, ಕಾಫಿ ಮತ್ತು ಇತರ ಉತ್ತೇಜಕ ಕಡಿಮೆ ಮಾಡಿ
► ಔಷಧಿಗಳಿಗೆ ಪರ್ಯಾಯ ಹುಡುಕಿ
► ತೂಕ ಸರಿಪಡಿಸಿಕೊಳ್ಳಿ
►6-8 ಗಂಟೆ ನಿದ್ದೆ ಮಾಡಿ
ಜೀವನಶೈಲಿ ಬದಲಾವಣೆಯಿಂದ ಯೋಗ, ಧ್ಯಾನ ಮತ್ತು ಉಸಿರಾಟದ ವ್ಯಾಯಾಮಗಳನ್ನು ಅಭ್ಯಾಸ ಮಾಡಿಕೊಳ್ಳಿ.
ದೇಹದಲ್ಲಿ ಶಕ್ತಿಯ ಮಟ್ಟವನ್ನು ಏರಿಸಲು ಶಾರ್ಟ್ ಕಟ್ ಇಲ್ಲ. ಆರೋಗ್ಯಕರ ಜೀವನಶೈಲಿಯೇ ದೇಹದಲ್ಲಿ ಶಕ್ತಿ ಕೊಡುತ್ತದೆ. ಪೌಷ್ಟಿಕಾಂಶಗಳು ಮತ್ತು ಉತ್ತಮ ಆಹಾರ ಇದಕ್ಕೆ ನಿರ್ಣಾಯಕ.
ಕೃಪೆ:indianexpress.com