ದಾರ್ಶನಿಕರನು್ನ ಜಾತಿಗೆ ಸೀಮಿತಗೊಳಿಸದಿರಿ: ಸಾಹಿತಿ ಕುಂ. ವೀರಭದ್ರಪ್ಪ
ದಾವಣಗೆರೆ, ಮೇ 24: ಸರ್ವಜ್ಞ ಅವರ ತ್ರಿಪದಿಗಳು ಈ ಸಮಾಜಕ್ಕೆ ಪಂಚಮ ವೇದಗಳಿದ್ದಂತೆ. ಇಂತಹ ಮಹಾನ್ ದಾರ್ಶನಿಕರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದು ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು. ನಗರದ ಅಭಿನವ ರೇಣುಕಾ ಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡದ ಶ್ರೇಷ್ಠ ತ್ರಿಪದಿ ಕವಿ ಸರ್ವಜ್ಞ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಬಸವಣ್ಣ ಸೇರಿದಂತೆ ನೂರಾರು ದಾರ್ಶನಿಕರು ದೇಶದಲ್ಲಿರುವ ಅನಿಷ್ಟ ಪದ್ಧತಿ ವಿರುದ್ಧ ಹೋರಾಟ ನಡೆಸಿದವರು. ಅಂತೆಯೇ, ಸರ್ವಜ್ಞ ಅವರು ಕುಂಬಾರ ಸಮಾಜದಲ್ಲಿ ಜನಿಸಿದ್ದರೂ ಜಗತ್ತಿಗೆ ಮಾದರಿಯಾಗಿದ್ದಾರೆ. ಸರ್ವಜ್ಞ ತ್ರಿಪದಿ ವಚನಗಳನ್ನು ಬಸ್, ರೈಲು ಗಾಡಿಗಳಲ್ಲಿ ಬರೆಸುವ ಮೂಲಕ ಅವರ ವಿಚಾರಗಳನ್ನು ಜನರಿಗೆ ಪರಿಚಯಿಸಬೇಕಾದ ಆವಶ್ಯಕತೆ ಇದೆ ಎಂದರ
ಜಯಂತಿಗಳ ರಜೆ: ಸರಕಾರವು ಈಗಾಗಲೇ ಶರಣರ, ಸಂತರ, ದರ್ಶನಿಕರ ಜಯಂತಿಗಳನ್ನು ಸರಕಾರದಿಂದ ಮಾಡಲಾಗುತ್ತಿದ್ದು, ಅದಕ್ಕೆ ರಜೆ ನೀಡುವುದು ಸರಿಯಲ್ಲ. ಮಹಾನ್ ವ್ಯಕ್ತಿಗಳ ದಿನದಂದು ಎಲ್ಲರೂ ಹೆಚ್ಚಿನ ಸಮಯ ಕೆಲಸ ಮಾಡುವ ಮೂಲಕ ಅವರ ಆದರ್ಶ, ತತ್ವಗಳನ್ನು ಪಡೆದುಕೊಳ್ಳಬೇಕು ಎಂದರು. ಅಕ್ಷಯ ತೃತೀಯ: ಭಾರತದಲ್ಲಿ ಅಕ್ಷಯ ತೃತೀಯ ತಂದು ಬಂಗಾರದ ಅಂಗಡಿ ಮಾಲಕರಿಗೆ ಸಾಕಷ್ಟು ಲಾಭ ಮಾಡಿಕೊಡಲಾಗುತ್ತಿದೆ. ವಿಶ್ವದಲ್ಲಿ ಹೆಚ್ಚು ಬಂಗಾರ ಪ್ರಿಯರಲ್ಲಿ ಭಾರತ ಎರಡನೆ ಸ್ಥಾನದಲ್ಲಿ ಇದ್ದು, ಇನ್ನೂ ಅಕ್ಷಯ ತೃತೀಯದಂತೆ ಬಂಗಾರ ಖರೀದಿ ಮಾಡಿದರೆ ಒಳ್ಳೆಯದು ಎನ್ನುವ ಭಾವನೆ ಬಿತ್ತಿ ಜನರಿಗೆ ಮೋಸ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮವನ್ನು ಜಿಪಂ ಅಧ್ಯಕ್ಷೆ ಉಮಾ ಎಂ.ಪಿ. ರಮೇಶ್ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪಾಲಿಕೆ ಮೇಯರ್ ಆಶ್ವಿನಿ ಪ್ರಶಾಂತ್, ಜಿಪಂ ಉಪಾಧ್ಯಕ್ಷ ಸಿದ್ದಪ್ಪ ಮಾತನಾಡಿದರು. ಸಾನ್ನಿಧ್ಯವನ್ನು ಕುಂಬಾರ ಗುರುಪೀಠ ಚಿತ್ರದುರ್ಗ ಬಸವ ಕುಂಬಾರ ಗುಂಡಯ್ಯ ಸ್ವಾಮಿ, ಜಿಲ್ಲಾ ಕುಂಬಾರ ಅಧ್ಯಕ್ಷ ಬಸವರಾಜ್ ಕುಂಚೂರು, ಕೆ.ಎಂ. ಚಂದ್ರಶೇಖರಪ್ಪ, ತಹಶೀಲ್ದಾರ್ ಮಂಜುನಾಥ್ ಬಳ್ಳಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಬಿ. ತಿಪ್ಪೇಸ್ವಾಮಿ, ಸದಾಶಿವಪ್ಪ, ಜಿ.ಸಿ. ಲೋಕೇಶ್, ಮಾದೇವ ಮೂರ್ತಿ, ಗಾಯತ್ರಿ ಶ್ರೀಧರ್ ಮತ್ತಿತರರಿದ್ದರು.