ವಾಟ್ಸ ಆ್ಯಪ್ ನಲ್ಲೇ ಹಣ ಪಾವತಿಸಿ, ಸ್ವೀಕರಿಸುವುದು ಹೀಗೆ!
ಫ್ರೀಚಾರ್ಜ್ ಇತ್ತೀಚೆಗೆ ಬ್ಲಾಗ್ ಪೋಸ್ಟಲ್ಲಿ ಹೇಳಿರುವ ಪ್ರಕಾರ ಬಳಕೆದಾರರು ವಾಟ್ಸಪ್ ಬಳಸಿ ಚಾಟ್ ಎನ್ ಪೇ ಮೂಲಕ ಪಾವತಿ ಮಾಡಬಹುದು. ಈ ಲಕ್ಷಣವು ಟೆನ್ಸೆಂಟ್ ನ ವಿ ಚಾಟ್ ಮೂಲಕ ಇರುವ ಹಣ ವರ್ಗಾವಣೆ ಸೇವೆಯಂತೆಯೇ ಇದೆ. ಬಳಕೆದಾರರು ವಾಟ್ಸಪ್ ಅಲ್ಲಿ ಫ್ರೀಚಾರ್ಜ್ ಗೆ ಹೋಗಿ, ಆಂಡ್ರಾಯ್ಡಾ ಫೋನಲ್ಲಿ ಫ್ರೀಚಾರ್ಜ್ ಮೆನುನಲ್ಲಿ ಎನೇಬಲ್‌ಕ್ಲಿಕ್ ಮಾಡಬೇಕು. ಎನೇಬಲ್ ಫ್ರೀಚಾರ್ಜ್ ಅಕ್ಸೆಸಿಬಿಲಿಟಿ ಸೆಟ್ಟಿಂಗಲ್ಲಿದೆ. ವಾಟ್ಸಪ್ ತೆರೆದು, ಫ್ರೀಚಾರ್ಜ್ ನಂತರ ಮೊತ್ತವನ್ನು ಟೈಪ್ ಮಾಡಿ. ಉದಾಹರಣೆಗೆ 100F ಮತ್ತು ವರ್ಗಾವಣೆ ಆಗುತ್ತದೆ.
ಫ್ರೀಚಾರ್ಜ್ ಚಾಟ್ ಎನ್ ಪೇ ಲಕ್ಷಣವನ್ನು ಆರಂಭಿಸುವಾಗ ಸ್ನಾಪ್ ಡೀಲ್ ಮುಖ್ಯ ಪ್ರೊಡಕ್ಟ್ ಅಧಿಕಾರಿ ಆನಂದ್ ಚಂದ್ರಶೇಖರನ್, ಪಾವತಿ ಸಾಮಾಜಿಕವಾಗಿರುವುದು ಉದ್ದೇಶ ಎಂದು ಹೇಳಿದ್ದರು. ಈಗ ಉದ್ದೇಶ ನೆರವೇರಿದೆ.
ಚಾಟ್ ಎನ್ ಪೇ ಲಕ್ಷಣವನ್ನು ಮಾರ್ಚ್‌ನಲ್ಲಿ ಫ್ರೀಚಾರ್ಜ್ ಆರಂಭಿಸಿದೆ. ಇದರ ಲೇಟೆಸ್ಟ್ ವರ್ಷನನ್ನು ಫ್ರೀಚಾರ್ಜ್ ಆಪಲ್ಲಿ ಪಡೆಯಬಹುದು. ಇತ್ತೀಚೆಗೆ ಫ್ರೀಚಾರ್ಜ್ ಜಿವಾಮೆ, ಕ್ಲಿಯರ್ ಟ್ರಿಪ್, ರೆಡ್ ಬಸ್ ಮತ್ತು ಕೆಫೆ ಕಾಫಿ ಡೇ ಜೊತೆಗೆ ಸೇರಿಕೊಂಡು ಅದರ ಮಳಿಗೆಗಳಲ್ಲಿ ವಾಲೆಟ್ ಪೇಯ್ಮೆಂಟಿಗೆ ಅವಕಾಶ ಕೊಟ್ಟಿದೆ. ರೆಡ್ ಬಸ್ ವೇದಿಕೆಗಳಲ್ಲಿ 10 ಸೆಕೆಂಡುಗಳಲ್ಲಿ ಭದ್ರತೆಯಿಂದ ಗ್ರಾಹಕರು ಹಣ ಪಾವತಿಸುವ ಅವಕಾಶವಿರುತ್ತದೆ. ಫ್ರೀಚಾರ್ಜ್ ಈಗ ಪೇಟಿಮ್ ಗೆ ಸ್ಪರ್ಧೆ ನೀಡುತ್ತಿದೆ. ಚೀನಾದ ಅಲಿಬಾಬ ತರಹ ಎಲ್ಲಾ ಸೇರಿರುವ ಅಂತರ್ಜಾಲ ಮಾರುಕಟ್ಟೆ ನಿರ್ಮಿಸುವ ಸ್ನಾಪ್ ಡೀಲ್ ಪ್ರಯತ್ನವಾಗಿದೆ ಇದು.
ಕೃಪೆ: http://www.businessinsider.in/