ಡಾ. ಅಬೂ ಸಾಲಿಹ್ ಶರೀಫ್ ಅವರ ಕೃತಿ ಉಪರಾಷ್ಟ್ರಪತಿಯಿಂದ ಬಿಡುಗಡೆ
ಡಾ. ಅಬೂ ಸಾಲಿಹ್ ಶರೀಫ್ ಬರೆದಿರುವ ‘ಇನ್ಸ್ಟಿಟ್ಯೂಶನಲೈಸಿಂಗ್ ಕಾನ್ಸ್ಟಿಟ್ಯೂಶನಲ್ ರೈಟ್ಸ್: ಪೋಸ್ಟ್ ಸಾಚಾರ್ ಕಮಿಟಿ ಸೀನಾರಿಯೊ’ ಆಂಗ್ಲ ಕೃತಿಯನ್ನು ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಇತ್ತೀಚೆಗೆ ಹೊಸದಿಲ್ಲಿಯಲ್ಲಿ ಬಿಡುಗಡೆಗೊಳಿಸಿದರು. ಕೃತಿಯ ಲೇಖಕ ಡಾ. ಅಬು ಸಾಲಿಹ್ ಶರೀಫ್ , ಲೆ.ಜ. ಝಮೀರುದ್ದೀನ್ ಶಾ, ಅಲಿಗಡ ಮುಸ್ಲಿಂ ವಿವಿಯ ಉಪಕುಲಪತಿ ಫೈಝಾನ್ ಮುಸ್ತಫಾ, ಹೈದರಾಬಾದ್ನ ‘ನಲ್ಸಾರ್’ ಕಾನೂನು ವಿಶ್ವವಿದ್ಯಾನಿಲಯದ ಉಪಕುಲಪತಿ ಸಬೀಹಾ ಶಾ, ಸರಕಾರ ಹಾಗೂ ಸಾರ್ವಜನಿಕ ನೀತಿ ಕುರಿತ ಜಿಂದಾಲ್ ವಿದ್ಯಾಲಯದ ಡೀನ್ ಆರ್.ಸುದರ್ಶನ್, ವಾಶಿಂಗ್ಟನ್ನ ಅಮೆರಿಕ-ಭಾರತ ನೀತಿ ಸಂಸ್ಥೆಯ ಅಧ್ಯಕ್ಷ ರಶೀದ್ ಅಹ್ಮದ್ ಉಪಸ್ಥಿತರಿದ್ದರು. ಈ ಕೃತಿಯನ್ನು ಆಕ್ಸ್ಫರ್ಡ್ ವಿವಿ ಪ್ರೆಸ್ ಪ್ರಕಟಿಸಿದೆ.
Next Story