ಇತಿಹಾಸದ ಮರುಶೋಧ ಸಾವರ್ಕರ್ ನಿಜವಾಗಿಯೂ ಧೀರರೇ?
ವಿನಾಯಕ ದಾಮೋದರ ಸಾವರ್ಕರ್ ಅವರ 133ನೆ ಜಯಂತಿಯನ್ನು ಮೇ 28ರಂದು ಆಚರಿಸಲಾಯಿತು. ಇವರು ಹುಟ್ಟಿದ್ದು 1883ರಲ್ಲಿ. ಅವರ ಸಾಹಸವನ್ನು ಬಿಂಬಿಸಿ, ಭಾರತೀಯ ಜನತಾ ಪಕ್ಷ ಅವರಿಗೆ ವೀರ ಎಂಬ ವಿಶೇಷಣ ನೀಡಿದೆ. ಆದರೆ ವಾಸ್ತವವಾಗಿ ಅವರೆಷ್ಟು ವೀರರಾಗಿದ್ದರು?
ಸಾವರ್ಕರ್ ತಮ್ಮ 83ನೆ ವಯಸ್ಸಿನಲ್ಲಿ 1966ರಲ್ಲಿ ನಿಧನರಾದರು. ಮೂವರು ಬ್ರಿಟಿಷ್ ಅಧಿಕಾರಿಗಳ ರಾಜಕೀಯ ಹತ್ಯೆಯಲ್ಲಿ ಅವರು ಶಾಮೀಲಾಗಿದ್ದರು. ರಾಷ್ಟ್ರೀಯವಾದಿ ದೃಷ್ಟಿಕೋನದಿಂದ, ಇದನ್ನು ಸಾವರ್ಕರ್ ಅವರ ಕ್ರಾಂತಿಕಾರಿ ಮನೋಭಾವದ ಸಂಕೇತ ಎಂದು ಬಿಂಬಿಸಲಾಗಿದೆ. ಪರಿಣಾಮ ಏನೇ ಇದ್ದರೂ, ಬ್ರಿಟಿಷ್ ಆಡಳಿತ ಕೊನೆಗೊಳಿಸಲು ನಡೆಸಿದ ಹೋರಾಟ ಎಂದು ಇದನ್ನು ಬಿಂಬಿಸಲಾಗಿದೆ.
ಮಹಾತ್ಮಗಾಂಧೀಯವರ ಹತ್ಯೆಯಲ್ಲೂ ಸಾವರ್ಕರ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು. ಆದರೆ ಸಾಕ್ಷ್ಯ ಇಲ್ಲದ ಹಿನ್ನೆಲೆಯಲ್ಲಿ ಇವರನ್ನು ಆರೋಪಮುಕ್ತಗೊಳಿಸಲಾಯಿತು. ಇದು ಸಾವರ್ಕರ್ ಅವರು ವೀರ ಎನ್ನುವುದನ್ನು ನಿರೂಪಿಸಲು ಸಹಕಾರಿಯಾಯಿತು.
ಆದರೆ ಇತ್ತೀಚೆಗೆ ದೊರಕಿದ ಸಾಕ್ಷ್ಯಗಳ ಪ್ರಕಾರ, ಸಾವರ್ಕರ್ ವೀರ ಎನ್ನುವ ಕಟ್ಟುಕಥೆ ಛಿದ್ರವಾಗಿದೆ. ಬ್ರಿಟಿಷ್ ಅಧಿಕಾರಿಗಳ ಹತ್ಯೆಗೆ ಇವರು ತಮ್ಮ ಬೆಂಬಲಿಗರನ್ನು ಸಜ್ಜುಗೊಳಿಸಿದರೂ, ಈ ಅಪರಾಧಗಳಲ್ಲಿ ತಾವು ಸಿಕ್ಕಿಹಾಕಿಕೊಳ್ಳದಂತೆ ಎಚ್ಚರ ವಹಿಸಿದ್ದರು. ಗಾಂಧೀಜಿಯವರನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಗೆ ಮಾಡಿದಂತೆ ತಮ್ಮ ಬೆಂಬಲಿಗರಿಗೆ ವಿಶ್ವಾಸದ್ರೋಹ ಎಸಗಲೂ ಅವರು ಹಿಂಜರಿಯಲಿಲ್ಲ. ಅವರ ಈ ಮನೋಭಾವ ಅಂಡ ಮಾನ್ ಜೈಲಿನಲ್ಲಿದ್ದಾಗ ಬೆಳಕಿಗೆ ಬಂದಿತ್ತು. ಅವರು ಆ ವೇಳೆಯಲ್ಲಿ ಬ್ರಿಟಿಷರಲ್ಲಿ ಕ್ಷಮೆಯನ್ನೂ ಯಾಚಿಸಿದ್ದರು. ತಮ್ಮ ಸ್ವಾತಂತ್ರ್ಯಕ್ಕಾಗಿ ಚೌಕಾಶಿ ಮಾಡಿದ್ದರೇ ವಿನಃ ದೇಶದ ಸ್ವಾತಂತ್ರ್ಯಕ್ಕಾಗಿ ಅಲ್ಲ.
ಮೊದಲ ಹತ್ಯೆ
ಮದನ್ಲಾಲ್ ದಿಂಗ್ರಾ 1909ರ ಜುಲೈ 1ರಂದು ಸರ್ ವಿಲಿಯಂ ಕರ್ಜನ್ ವೈಲ್ ಎಂಬ ಅಧಿಕಾರಿಯನ್ನು ಅವರ ಕಚೇರಿಯಲ್ಲಿ ಹತ್ಯೆ ಮಾಡಿದರು. ಇದಕ್ಕೂ ಮುನ್ನ ಡಿಂಗ್ರಾ ಅವರು ಮಾಜಿ ವೈಸರಾಯ್ ಲಾರ್ಡ್ ಕರ್ಜನ್ ಹಾಗೂ ಬಂಗಾಳದ ಗವರ್ನರ್ ಬ್ರಂಫೀಲ್ಡ್ ಪುಲ್ಲೆರ್ ಅವರನ್ನು ಸಮಾರಂಭವೊಂದರಲ್ಲಿ ಹತ್ಯೆ ಮಾಡಲೂ ಸಂಚು ರೂಪಿಸಿದ್ದರು. ಆದರೆ ಡಿಂಗ್ರಾ ವಿಳಂಬವಾಗಿ ಆಗಮಿಸಿದ್ದರಿಂದ ಇಬ್ಬರೂ ಪಾರಾಗಿದ್ದರು.
ವಿಲ್ಲಿಯವರ ಹತ್ಯೆಗಾಗಿ ಡಿಂಗ್ರಾ ಅವರನ್ನು ಬಂಧಿಸಿ ಗಲ್ಲಿಗೇರಿಸಲಾ ಯಿತು. ಇದರಲ್ಲಿ ಸಾವರ್ಕರ್ ಅವರ ಕೈವಾಡವನ್ನು ಬ್ರಿಟಿಷರು ಶಂಕಿಸಿದರೂ, ಯಾವುದೇ ಪ್ರಬಲ ಸಾಕ್ಷಿ ಇರಲಿಲ್ಲ. ಸಾವರ್ಕರ್ 1966ರಲ್ಲಿ ನಿಧನರಾಗಿ ಕೆಲ ತಿಂಗಳುಗಳ ಬಳಿಕ, ಸಾವರ್ಕರ್ ಅವರ ಆತ್ಮಚರಿತ್ರೆ ಬರೆದ ಲೇಖಕ ಈ ಸಂಬಂಧ ದಾಖಲೆ ಬಿಡುಗಡೆ ಮಾಡಿದರು.
ಸಾವರ್ಕರ್ ಸಾವಿನ ಹಿನ್ನೆಲೆಯಲ್ಲಿ ಧನಂಜಯ್ ಕೀರ್ ತಮ್ಮ 1950ರ ಪುಸ್ತಕವನ್ನು ಮರುಮುದ್ರಣ ಮಾಡಿದರು. ವೀರ ಸಾವರ್ಕರ್ ಬಗೆಗಿನ ಹೊಸ ಹಲವು ಅಂಶಗಳನ್ನು ಈ ಕೃತಿ ಒಳಗೊಂಡಿದ್ದು, ಸಾವರ್ಕರ್ ಅವರೇ ಕೊಡಮಾಡಿದ ದಾಖಲೆಗಳು ಇವು ಎಂದು ಪ್ರಚಾರ ಮಾಡಿದರು. 1966ರ ಸಂಪುಟದಲ್ಲಿ, ಸಾವರ್ಕರ್ ಅವರು ದಿಂಗ್ರಾ ಅವರಿಗೆ ನಿಕ್ಕೆಲ್ ಲೇಪದ ರಿವಾಲ್ವರ್ ನೀಡಿ, ವಿಲ್ಲಿಯವರ ಹತ್ಯೆಗೆ ಸೂಚಿಸಿದ್ದನ್ನು ಉಲ್ಲೇಖಿಸಲಾಗಿದೆ. ‘ಈ ಬಾರಿ ವಿಫಲನಾದರೆ, ನನಗೆ ಮುಖ ತೋರಿಸಬೇಡ’ ಎಂದು ಸಾವರ್ಕರ್ ಆತನಿಗೆ ತಾಕೀತು ಮಾಡಿದ್ದರು. ‘ಲೈಫ್ ಆ್ಯಂಡ್ ಡೆತ್ ಆಫ್ ಮಹಾತ್ಮ ಗಾಂಧಿ’ ಕೃತಿಯಲ್ಲಿ ರಾಬರ್ಟ್ ಪೇನ್ ಅವರು ಇದನ್ನು ಸ್ಪಷ್ಟಪಡಿಸಿದ್ದರು. ಸಾವರ್ಕರ್ ಅವರು ಡಿಂಗ್ರಾಗೆ ಕೆಲ ತಿಂಗಳ ತರಬೇತಿ ನೀಡಿ, ಲಾರ್ಡ್ ಕರ್ಜನ್ ಹಾಗೂ ಪುಲ್ಲೆರ್ ಹತ್ಯೆಗೆ ವಿಫಲವಾದುದಕ್ಕಾಗಿ ಅಣಕಿಸಿದ್ದರು. ಕೀರ್ ಅವರ ಹೊಸ ಪರಿಷ್ಕೃತ ಸಂಪುಟದಲ್ಲಿನ ಈ ಹೊಸ ಮಾಹಿತಿಗಳು, ವಕೀಲ ಹಾಗೂ ಇತಿಹಾಸ ತಜ್ಞ ಎ.ಜಿ.ನೂರಾನಿ ಅವರಿಗೆ ಸಾವರ್ಕರ್ ಹಾಗೂ ‘ಹಿಂದುತ್ವ- ದ ಗೋಡ್ಸೆ ಕನೆಕ್ಷನ್’ ಎಂಬ ಕೃತಿಗೆ ಒಳ್ಳೆಯ ಮಾಹಿತಿ ಒದಗಿಸಿತು.
ಎರಡನೆ ಹತ್ಯೆ
ಇಂಗ್ಲೆಂಡ್ಗೆ ಕಾನೂನು ಪದವಿಗೆ ತೆರಳುವ ಮೊದಲು ಸಾವರ್ಕರ್, ಮಿತ್ರ ಮೇಳ ಎಂಬ ರಹಸ್ಯ ಸಂಘಟನೆಯ ಸದಸ್ಯರಾಗಿದ್ದರು. ಬಳಿಕ ಇದನ್ನು ಅಭಿನವ ಭಾರತ ಎಂದು ಹೆಸರಿಸಲಾಯಿತು. ಹಿಂಸಾತ್ಮಕ ಮಾರ್ಗದ ಮೂಲಕ ಬ್ರಿಟಿಷ್ ಸರಕಾರವನ್ನು ಕಿತ್ತೊಗೆಯುವುದು ಇದರ ಉದ್ದೇಶವಾಗಿತ್ತು. ಸಾವರ್ಕರ್ ಅವರ ಅಣ್ಣ ಗಣೇಶ್ ಅಲಿಯಾಸ್ ಬಾಬಾರಾವ್ ಕೂಡಾ ಅಭಿನವ ಭಾರತದ ಸದಸ್ಯರಾ ಗಿದ್ದರು. ಪೊಲೀಸರು ಗಣೇಶ್ನನ್ನು ಬಂಧಿಸಿ, ಬಾಂಬ್ ತಯಾರಿಕಾ ಸಾಧನ ವಶಪಡಿಸಿಕೊಂಡಿದ್ದರು. 1909ರ ಜೂನ್ 8ರಂದು ಜೀವಾವಧಿ ಗಡಿಪಾರು ಶಿಕ್ಷೆಗೆ ಗುರಿಯಾದರು.
ಅವರ ಸಹವರ್ತಿಗಳು ಇದಕ್ಕೆ ಪ್ರತೀಕಾರ ಕ್ರಮ ಕೈಗೊಳ್ಳಲು ಮುಂದಾದರು. 1909ರ ಡಿಸೆಂಬರ್ 29ರಂದು, ಅನಂತ್ ಕನಾರೆ ಎಂಬಾತ ಎಎಂಟಿ ಜಾಕ್ಸನ್ ಎಂಬ ನಾಸಿಕ್ ಜಿಲ್ಲಾಧಿಕಾರಿಯನ್ನು ಮರಾಠಿ ನಾಟಕ ಶಾರದಾವನ್ನು ವೀಕ್ಷಿಸುತ್ತಿದ್ದಾಗ ಹತ್ಯೆ ಮಾಡಿದ. ಗಣೇಶ್ ಸಾವರ್ಕರ್ ಅವರ ವಿರುದ್ಧದ ತನಿಖೆಗೆ ಸಂಚು ರೂಪಿಸ ಲಾಯಿತು. ಆದರೆ ನ್ಯಾಯಾಧೀಶರು ಗಣೇಶ್ನನ್ನು ಅಂಡಮಾನ್ಗೆ ಗಡಿಪಾರು ಮಾಡಿದರು.
ಪೊಲೀಸರು ಕನಾರೆಯನ್ನು ಬಂಧಿಸಿದಾಗ, ಅವರ ಕೊಠಡಿಯಲ್ಲಿ ಸಾವರ್ಕರ್ ಪತ್ರಗಳು ಪತ್ತೆಯಾದವು. ಈ ಹತ್ಯೆಗೆ ಬಳಸಿದ ಪಿಸ್ತೂಲ್ ಸಾವರ್ಕರ್ಗೆ ಸಂಬಂಧಪಟ್ಟದ್ದು ಎನ್ನುವುದು ತಿಳಿಯಿತು. ಸಾವರ್ಕರ್ ಇಂಥ 20 ಶಸ್ತ್ರಾಸ್ತ್ರಗಳನ್ನು ಇಂಗ್ಲೆಂಡಿನಿಂದ ಭಾರತಕ್ಕೆ ರವಾನಿಸಿದ್ದರು ಎನ್ನುವುದು ತಿಳಿಯಿತು. ಲಂಡನ್ನಲ್ಲಿದ್ದ ಸಾವರ್ಕರ್ ಅವರಿಗೆ ಟೆಲಿಗ್ರಾಂ ಮೂಲಕ ವಾರಂಟ್ ನೀಡಲಾಯಿತು. 1910ರ ಮಾರ್ಚ್ 13ರಂದು ಸಾವರ್ಕರ್ ಶರಣಾದರು. ಅವರನ್ನು ಭಾರತಕ್ಕೆ ಕರೆ ತರಲಾಯಿತು.
ಜಾಕ್ಸನ್ ಹತ್ಯೆ ಹಾಗೂ ಸಾಮ್ರಾಜ್ಯದ ವಿರುದ್ಧದ ಹೋರಾಟಕ್ಕಾಗಿ ಸಾವರ್ಕರ್ ಅವರನ್ನು 100 ವರ್ಷ ಅವಧಿಗೆ ಅಂಡಮಾನ್ಗೆ ಗಡಿಪಾರು ಮಾಡಲು ನಿರ್ಧರಿಸಲಾಯಿತು. 1911ರ ಜುಲೈ 4ರಂದು ಅವರನ್ನು ಪೋರ್ಟ್ಬ್ಲೇರ್ಗೆ ಕರೆ ತರಲಾಯಿತು.
ಸಾವರ್ಕರ್ ಕ್ಷಮೆ
ಅಂಡಮಾನ್ನಲ್ಲಿದ್ದ ಭೂಗತ ಜೈಲುಗಳ ಸ್ಥಿತಿ ಖಂಡಿತವಾ ಗಿಯೂ ಭಯಾನಕವಾಗಿತ್ತು. ಸಾವರ್ಕರ್ ಅವರನ್ನು ಎಣ್ಣೆ ಮಿಲ್ ಕೆಲಸಕ್ಕೆ ನಿಯೋಜಿಸಲಾಗಿತ್ತು. ಅವರ ಕ್ರಾಂತಿಕಾರಿ ಮನೋಭಾವ ಇಲ್ಲೂ ಕೆಲಸ ಮಾಡಿತು. ಇಂಥ ಭಯಾನಕ ಶಿಕ್ಷೆಗೆ ಒಳಗಾದವರು ತಾವು ಮಾತ್ರ ಅಲ್ಲ ಎನ್ನುವುದು ಅವರ ಗಮನಕ್ಕೆ ಬಂತು. 1911ರಲ್ಲೇ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದರು. ಆದರೆ ಈ ಪತ್ರದ ವಿವರ ಲಭ್ಯವಿಲ್ಲ. ಆದರೆ 1913ರ ನವೆಂಬರ್ 14ರಂದು ತಮ್ಮನ್ನು ಭಾರತದ ಜೈಲಿಗೆ ವರ್ಗಾಯಿಸುವಂತೆ ಕೋರಿ ಬ್ರಿಟಷರಿಗೆ ಸಲ್ಲಿಸಿದ ಅರ್ಜಿಯಲ್ಲಿ ಸಾವರ್ಕರ್ ಹೀಗೆ ಬರೆದಿದ್ದರು: ‘‘ನನ್ನ ಬಗ್ಗೆ ದಯೆ ತೋರಲು ದೇವರಿಗಷ್ಟೇ ಸಾಧ್ಯ. ಈ ಉಡಾಳ ಮಗನನ್ನು ಕರೆಸಿಕೊಳ್ಳಲು ಸರಕಾರಕ್ಕೆ ಮಾತ್ರ ಸಾಧ್ಯವಿದೆ. ಇದಕ್ಕೆ ಪ್ರತಿಯಾಗಿ ಸರಕಾರದಲ್ಲಿ ಯಾವ ಕೆಲಸ ಮಾಡಲು ಕೂಡಾ ಸಿದ್ಧ. ಇದೀಗ ನನಗೆ ಹಿಂಸೆಯಲ್ಲಿ ನಂಬಿಕೆ ಇಲ್ಲ’’ ಎಂದು ತಪ್ಪೊಪ್ಪಿಗೆ ನೀಡಿದ್ದರು. ಬ್ರಿಟಿಷ್ ಸರಕಾರದಲ್ಲಿ ಆಗಿರುವ ಬದಲಾವಣೆಗೆ ಅನುಗುಣವಾಗಿ ಸಂವಿಧಾನಕ್ಕೆ ಬದ್ಧವಾಗಿ ಉಳಿಯುವುದಾಗಿ ಸ್ಪಷ್ಟಪಡಿಸಿದ್ದರು. ಆದರೆ ಇದರಿಂದ ಸರಕಾರ ತೃಪ್ತವಾಗಲಿಲ್ಲ. ಆದರೆ ಮತ್ತೆ ಸಲ್ಲಿಸಿದ ಮನವಿಯನ್ನು ಪರಿಗಣಿಸಿ ಸರಕಾರದ ಫೋರ್ಮನ್ ಆಗಿ ನಿಯೋಜಿಸಲಾಯಿತು. ಅಂಡಮಾನ್ ಜೈಲಿನಲ್ಲಿದ್ದಾಗಲೂ ಸಾವರ್ಕರ್, ಸಾಕಷ್ಟು ಎಚ್ಚರಿಕೆಯ ಹೆಜ್ಜೆಯನ್ನೇ ಇಟ್ಟಿದ್ದರು. ಉದಾಹರಣೆಗೆ ಇತಿಹಾಸ ತಜ್ಞ ಆರ್.ಸಿ.ಮಜೂಂದಾರ್ ಅವರು ತ್ರಿಲೋಕ್ಯನಾಥ್ ಚಕ್ರವರ್ತಿಯವರ ಹೇಳಿಕೆಯನ್ನು ಈ ಸಂಬಂಧ ಉಲ್ಲೇಖಿಸಿದ್ದಾರೆ. ಅವರ ಹೇಳಿಕೆ ಪ್ರಕಾರ, ಅಂಡಮಾನ್ ಜೈಲಿನಲ್ಲಿ ಸಾವರ್ಕರ್ ಹಾಗೂ ಅವರ ಸಹೋದರ, ನಮ್ಮನ್ನು ಅನಿರ್ದಿಷ್ಟಾವಧಿ ಉಪವಾಸ ಮಾಡುವಂತೆ ಪ್ರಚೋದನೆ ನೀಡಿದರೇ ವಿನಃ ಅವರು ಇದರಲ್ಲಿ ಪಾಲ್ಗೊಳ್ಳಲಿಲ್ಲ.
ತಾಯ್ನಡಿಗೆ ವಾಪಸು
1921ರ ಮೇ ತಿಂಗಳಲ್ಲಿ ಸಾವರ್ಕರ್ ಅವರನ್ನು ಅಂಡಮಾನ್ನಿಂದ ಭಾರತಕ್ಕೆ ವರ್ಗಾಯಿಸಲಾಯಿತು. ಮೂರು ವರ್ಷಗಳ ಬಳಿಕ ಬ್ರಿಟಿಷ್ ಸರಕಾರ ಹಲವು ಷರತ್ತುಗಳೊಂದಿಗೆ ಸಾವರ್ಕರ್ ಅವರನ್ನು ಪುಣೆಯ ಯರವಾಡ ಜೈಲಿನಿಂದ ಬಿಡುಗಡೆ ಮಾಡಿತು.
ಈ ಷರತ್ತುಗಳೆಂದರೆ ಸಾವರ್ಕರ್, ರತ್ನಗಿರಿ ಜಿಲ್ಲೆಯಲ್ಲೇ ವಾಸ್ತವ್ಯ ಇರಬೇಕು. ಸರಕಾರದ ಅನುಮತಿ ಇಲ್ಲದೇ ಜಿಲ್ಲೆಯ ವ್ಯಾಪ್ತಿ ಬಿಟ್ಟು ಹೊರಹೋಗಬಾರದು. ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು. ಈ ನಿರ್ಬಂಧಗಳು ಐದು ವರ್ಷಗಳ ಅವಧಿಗೆ ಇದ್ದು, ಅವಧಿ ಪೂರ್ಣಗೊಂಡ ಬಳಿಕ ಪರಿಷ್ಕರಿಸಲಾಗುವುದು.
ಇದನ್ನು ಸಾವರ್ಕರ್ ಒಪ್ಪಿಕೊಂಡರು. ಇದು ಸಾವರ್ಕರ್ ಅವರು ಧೀರರಾಗಿಯೇ ಶರಣಾಗತರಾದರು ಎಂಬ ಕಟ್ಟುಕಥೆಗೆ ವಿರುದ್ಧವಾಗಿದೆ. ಆದರೆ ಈ ಅವಮಾನಕರ ಅಂಶ 1995ರಲ್ಲಿ ಫ್ರಂಟ್ಲೈನ್ ನಿಯತ ಕಾಲಿಕ ಬಹಿರಂಗಗೊಳಿಸುವವರೆಗೂ ಯಾರಿಗೂ ತಿಳಿದಿರಲಿಲ್ಲ. ಈ ಷರತ್ತುಗಳನ್ನು ಒಪ್ಪಿಕೊಳ್ಳುವ ಬಗ್ಗೆ ಸಾವರ್ಕರ್, ಸರಕಾರಕ್ಕೆ ಮುಚ್ಚಳಿಕೆ ನೀಡಿದ್ದರು. ಸಾವರ್ಕರ್, ತನ್ನ ವಿಚಾರಣೆ ನಿಷ್ಪಕ್ಷಪಾತವಾಗಿ ನಡೆದಿದ್ದು, ಶಿಕ್ಷೆ ವಿಧಿಸಲಾಗಿದೆ ಎಂದು ಹೇಳಿಕೆ ನೀಡಿದರು. ಭಯಾನಕ ಹಿಂಸೆಯ ದಿನಗಳು ಮುಗಿದುಹೋಗಿವೆ. ದೇಶದ ಕಾನೂನನ್ನು ಎತ್ತಿಹಿಡಿದು, ಸಂವಿಧಾನಕ್ಕೆ ಬದ್ಧವಾಗಿರುವುದು ನನ್ನ ಕರ್ತವ್ಯ ಎಂದು ನಾನು ಭಾವಿಸುತ್ತೇನೆ ಎಂದು ಸಾವರ್ಕರ್ ಬರೆದಿದ್ದರು.
ಖಂಡಿತವಾಗಿಯೂ ಸಾವರ್ಕರ್, ನೆಲ್ಸನ್ ಮಂಡೇಲಾ ಅಲ್ಲ.
1925ರಲ್ಲಿ, ಪ್ರವಾದಿ ಮುಹಮ್ಮದ್ ಅವರ ಬಗೆಗೆ ಬಂದ ಕುಚೋದ್ಯದ ಕಿರುಹೊತ್ತಗೆ ‘ರಂಗೀಲಾ ರಸೂಲ್’, ದೊಡ್ಡ ಪ್ರಮಾಣದಲ್ಲಿ ಹಿಂದೂ- ಮುಸ್ಲಿಂ ಸಂಘರ್ಷಕ್ಕೆ ಕಾರಣವಾಯಿತು. ಈ ಕೋಮು ಸಂಘರ್ಷ ಕ್ಷಿಪ್ರವಾಗಿ ಪಂಜಾಬ್ಗೆ ಕೂಡಾ ಹಬ್ಬಿತು. ಸಾವರ್ಕರ್, 1925ರ ಮಾರ್ಚ್ ನಲ್ಲಿ ಮಹ್ರೂತ್ತಾ ಎಂಬ ಇಂಗ್ಲಿಷ್ ಪತ್ರಿಕೆಯಲ್ಲಿ ಅತ್ಯಂತ ಕೋಮು ಪ್ರಚೋದಕ ಲೇಖನ ಬರೆದರು.
ಇಂತಹ ಲೇಖನವನ್ನು ಇನ್ನು ಮುಂದೆ ಬರೆದರೆ, ನಿಮ್ಮ ಬಿಡುಗ ಡೆಯ ವಿಚಾರವನ್ನು ಮರು ಪರಿಶೀಲಿಸಬೇಕಾಗುತ್ತದೆ ಎಂದು ಸರಕಾರ ಎಚ್ಚರಿಕೆ ನೀಡಿತು. ಈ ಎಚ್ಚರಿಕೆಯಿಂದಾಗಿ ಸಾವರ್ಕರ್, ಮುಂದೆಂದೂ ಸ್ವರಾಜ್ ಕಲ್ಪನೆಯ ಬಗೆಗಿನ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮೂರನೆ ಹತ್ಯೆ
ಷರತ್ತುಬದ್ಧ ಸ್ವಾತಂತ್ರ್ಯದ ಅವಧಿಯಲ್ಲಿ, ಸಾವರ್ಕರ್ ಮತ್ತೆ ಹತ್ಯೆ ಯತ್ನವೊಂದಕ್ಕೆ ಕುಮ್ಮಕ್ಕು ನೀಡಿದರು ಎನ್ನಲಾಗಿದೆ. 1931ರ ಜುಲೈ 22ರಂದು ವಿ.ಬಿ.ಗೋಗಟೆ ಎಂಬಾತ, ಮುಂಬೈನ ಹಂಗಾಮಿ ಗವರ್ನರ್ ಸರ್ ಅರ್ನೆಸ್ಟ್ ಹಾಟ್ಸನ್ ಅವರು ಪುಣೆಯ ಪರ್ಗ್ಯೂಸನ್ ಕಾಲೇಜಿಗೆ ಭೇಟಿ ನೀಡಿದ್ದ ವೇಳೆ, ಅವರತ್ತ ಎರಡು ಸುತ್ತು ಗುಂಡು ಹಾರಿಸಿದ. ಆದರೆ ಹಾಟ್ಸನ್ ಪವಾಡಸದೃಶವಾಗಿ ಪಾರಾದರು. ಇದರಲ್ಲಿ ಸಾವರ್ಕರ್ ಅವರ ಪಾತ್ರವನ್ನು ಯಾರೂ ಸಂದೇಹಿಸಿ ರಲಿಲ್ಲ. ಆದರೆ ಕೀರ್ 1966ರ ತಮ್ಮ ಪರಿಷ್ಕೃತ ಕೃತಿಯಲ್ಲಿ ಈ ಅಂಶವನ್ನು ಬಹಿರಂಗಪಡಿಸಿದರು. ಸಾವರ್ಕರ್ ಅವರ ಕಟ್ಟಾ ಅನುಯಾಯಿ ಯಾಗಿದ್ದ ಗೋಗಟೆ, ಈ ಹತ್ಯೆ ಪ್ರಯತ್ನದ ಕೆಲವೇ ದಿನಗಳ ಮೊದಲು ಸಾವರ್ಕರ್ ಅವರನ್ನು ಭೇಟಿ ಮಾಡಿದ್ದರು. ಅಂದರೆ, ಈ ಹತ್ಯೆ ಯತ್ನದಲ್ಲೂ ಸಾವರ್ಕರ್ ಪ್ರಭಾವ ಬೀರಿದ್ದಾರೆ ಎನ್ನುವುದು ಕೀರ್ ಅವರ ಅಭಿಪ್ರಾಯವೇ?
ಬಿಜೆಪಿಯ ಸಾವರ್ಕರ್ ಪ್ರೀತಿ
ಸಂಘ ಪರಿವಾರ ಅನುಸರಿಸುತ್ತಿರುವ ಹಿಂದುತ್ವ ರಾಜಕೀಯ ಸಿದ್ಧಾಂತದ ಜನಕ ಸಾವರ್ಕರ್. ಈ ಹಿನ್ನೆಲೆಯಲ್ಲೇ ಸಾವರ್ಕರ್ ಅವರ ಶೌರ್ಯದ ಕಥೆಗಳು ಹುಟ್ಟಿಕೊಂಡಿವೆ. ಅವರ ಕಟ್ಟಾ ಅನುಯಾಯಿಗಳಿಗೆ ಮಾಡಿದ ವಿಶ್ವಾಸ ದ್ರೋಹದ ವಿಚಾರ ಹಾಗೂ ಬ್ರಿಟಿಷ್ ಸರಕಾರಕ್ಕೆ ಶರಣಾಗತಿಯಾದ ವಿಚಾರವನ್ನು ಬಿಟ್ಟು, ಅವರನ್ನು ವೀರ ಎಂದು ಬಿಂಬಿಸಲಾಗಿದೆ. ಅದರೆ ವಾಸ್ತವ ವೆಂದರೆ, ನೈತಿಕ ಕಟ್ಟಣೆಗಳ ಹಿನ್ನೆಲೆಯಲ್ಲಿ, ಆತ್ಮಸಾಕ್ಷಿ ಎನ್ನುವುದು ನಾಶವಾಗಿದೆ ಎನ್ನುವುದನ್ನು ಸಂಕೇತಿಸುವ ಹಲವು ನಿದರ್ಶನಗಳು ಸಿಗುತ್ತವೆ. ಉದಾಹರಣೆಗೆ ನಾವು ಸಾರ್ವಜನಿಕ ಕಟ್ಟಡಗಳನ್ನು ಗಾಂಧೀಜಿಗೆ ಸಮರ್ಪಿಸುತ್ತೇವೆ. ಅಂತೆಯೇ ಗಾಂಧೀಜಿ ಹತ್ಯೆಗೆ ಮಾರ್ಗದರ್ಶನ ನೀಡಿದ್ದ ಸಾವರ್ಕರ್ ಅವರಿಗೆ ಕೂಡಾ.
ಆತಂಕಕಾರಿ ವಿಚಾರವೆಂದರೆ ಸಾವರ್ಕರ್ ಅವರ ವಂಶ ಉಳಿದುಕೊಂಡಿದೆ. ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಅವರು ಅಭಿನವ್ ಭಾರತ್ ಎಂಬ ಸಂಘಟನೆ ಹುಟ್ಟುಹಾಕಿದ್ದಾರೆ. ಇದು ಮಾಲೆಗಾಂವ್, ಹೈದರಾಬಾದ್ನ ಮಕ್ಕಾ ಮಸೀದಿ ಹಾಗೂ ಸಂಜೋತಾ ಎಕ್ಸ್ಪ್ರೆಸ್ ರೈಲಿನಲ್ಲಿ ಬಾಂಬ್ ಇಟ್ಟ ಆರೋಪ ಎದುರಿಸುತ್ತಿದೆ. ಸಾವರ್ಕರ್ ಇದ್ದ ಭೂಗತ ಸಂಘಟನೆಯ ಹೆಸರು ಕೂಡಾ ಅಭಿನವ ಭಾರತ ಎಂದಾಗಿತ್ತು. ಈ ಹಿಂಸಾತ್ಮಕ ಸಿದ್ಧಾಂತ ಶತಮಾನಕ್ಕಿಂತಲೂ ಹಳೆಯದು ಎನ್ನುವುದನ್ನು ಇದು ತೋರಿಸುತ್ತದೆ.
ಗಾಂಧಿಹತ್ಯೆಯಲ್ಲಿ ಸಾವರ್ಕರ್ ಪಾತ್ರ
ಮಹಾತ್ಮಗಾಂಧೀಜಿಯವರನ್ನು 1948ರ ಜನವರಿ 30ರಂದು ಹತ್ಯೆ ಮಾಡಿದ ಘಟನೆ ಹಿನ್ನೆಲೆಯಲ್ಲಿ ಫೆಬ್ರವರಿ 5ರಂದು ಸಾವರ್ಕರ್ ಅವರನ್ನು ಪೊಲೀಸರು ಕಸ್ಟಡಿಗೆ ತೆಗೆದು ಕೊಂಡರು. ಹದಿನೇಳು ದಿನಗಳ ಬಳಿಕ, ಅವರು ಮುಂಬೈ ಪೊಲೀಸ್ ಕಮಿಷನರ್ ಅವರಿಗೆ ಒಂದು ಪತ್ರ ಬರೆದರು:
‘‘ನಾನು ಯಾವುದೇ ಕೋಮು ಅಥವಾ ರಾಜಕೀಯ ಚಟುವಟಿಕೆಯಲ್ಲಿ ಯಾವ ಕಾಲಕ್ಕೂ ತೊಡಗಿಸಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ, ಆ ಷರತ್ತಿನೊಂದಿಗೆ ನಾನು ಬಿಡುಗಡೆಯಾಗಿದ್ದೇನೆ’’ ಎಂದು ಆ ಪತ್ರದಲ್ಲಿ ಸ್ಪಷ್ಟಪಡಿಸಿದರು.
ಈ ಹಿನ್ನೆಲೆಯಲ್ಲಿ ಸರಕಾರ, ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿತು. ಆದರೆ ನ್ಯಾಯಾಲಯದಲ್ಲಿ ಅವರ ಪಾತ್ರವನ್ನು ನಿರೂಪಿಸಲು ಪುರಾವೆಗಳಿರಲಿಲ್ಲ. ಆದರೆ ಸಾವರ್ಕರ್ ಅವರ ನಿಧನದ ಬಳಿಕ ಈ ವಿಷಯವನ್ನು ಅವರ ಹಿಂಬಾಲಕರು ಮತ್ತು ಅನುಯಾಯಿಗಳು ಬಹಿರಂಗಡಿಸಿದರು.
ಗಾಂಧೀಜಿಯವರ ಹತ್ಯೆಗೆ 1948ರ ಜನವರಿಯಲ್ಲಿ ಎರಡು ಪ್ರಯತ್ನ ನಡೆಯಿತು. ಮೊದಲ ಬಾರಿ ಜನವರಿ 20ರಂದು ಈ ಯತ್ನ ನಡೆಯಿತು. ಪಂಜಾಬ್ ನಿರಾಶ್ರಿತ ಮದನ್ಲಾಲ್ ಪಾಹ್ವ ಅವರನ್ನು ಈ ಸಂಬಂಧ ಬಂಧಿಸಲಾಯಿತು. ಎರಡನೆ ಪ್ರಯತ್ನದಲ್ಲಿ ನಾಥೂರಾಂ ಗೋಡ್ಸೆ ಗಾಂಧೀಜಿಯವರನ್ನು 1948ರ ಜನವರಿ 30ರಂದು ಹತ್ಯೆ ಮಾಡಿದ.
ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಎಂಟು ಮಂದಿ ಆರೋಪಿ ಗಳಿದ್ದರು. ನಾಥೂರಾಂ ಗೋಡ್ಸೆ ಹಾಗೂ ಗೋಪಾಲ್ ಗೋಡ್ಸೆ, ಸಹೋದರ ನಾರಾಯಣ ಡಿ. ಆಪ್ಟೆ, ವಿಷ್ಣು ಕರ್ಕರೆ, ಮದನ್ಲಾಲ್ ಪಾಹ್ವ, ಶಂಕರ್ ಕಿಸ್ತಯ್ಯೆ, ವಿ.ಡಿ.ಸಾವರ್ಕರ್ ಹಾಗೂ ದತ್ತಾತ್ರೇಯ ಪರಚುರೆ. ಒಂಬತ್ತನೆ ವ್ಯಕ್ತಿ ದಿಗಂಬರ ಆರ್.ಬಾಡ್ಗೆೆ ಶರಣಾದ. ಆತ ನ್ಯಾಯಾಲಯಕ್ಕೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಯಲ್ಲಿ, ಗಾಂಧೀಜಿ ಹತ್ಯೆಯಲ್ಲಿ ಸಾವರ್ಕರ್ ಪಾತ್ರವನ್ನು ಬಹಿರಂಗಪಡಿಸಿದ್ದ.
ಇಡೀ ಘಟನಾವಳಿ ಬಗ್ಗೆ ಬಾಡ್ಗೆ ವಿವರವಾದ ಮಾಹಿತಿ ನೀಡಿದ್ದ. ಗೋಡ್ಸೆ ಮತ್ತು ಆಪ್ಟೆ ಮುಂಬೈನ ಸಾವರ್ಕರ್ ಸದನದಲ್ಲಿ ತಮ್ಮನ್ನು ಎರಡು ಬಾರಿ ಭೇಟಿ ಮಾಡಿದ್ದರು. ಸದನದ ಎರಡನೆ ಮಹಡಿಯಲ್ಲಿ ಸಾವರ್ಕರ್ ವಾಸವಿದ್ದರು. ಮೊದಲ ಬಾರಿ ಜನವರಿ 14ರಂದು ಭೇಟಿ ಮಾಡಲಾಯಿತು. ಈ ದಿನ ಬಾಡ್ಗೆ, ಗೋಡ್ಸೆ ಹಾಗೂ ಆಪ್ಟೆಗೆ ಎರಡು ಬಂದೂಕು, ಹತ್ತಿಯ ಉಂಡೆ, ಐದು ಕೈಬಾಂಬ್ ಹಾಗೂ ಡೆಟೊನೇಟರ್ಗಳನ್ನು ನೀಡಿದ್ದ. ಬಾಡ್ಗೆ ಸದನವನ್ನು ಪ್ರವೇಶಿಸಿರಲಿಲ್ಲ. ಆಪ್ಟೆ ಆ ಬಳಿಕ, ಬಾಡ್ಗೆ ಜತೆ ಮಾತನಾಡಿ, ಗೋಡ್ಸೆ ಹಾಗೂ ತಾನು ಸಾವರ್ಕರ್ ಅವರನ್ನು ಭೇಟಿ ಮಾಡಿದ್ದಾಗಿ ಹೇಳಿದ್ದ. ಗಾಂಧಿ ಹಾಗೂ ನೆಹರೂ ಅವರನ್ನು ಮುಗಿಸಬೇಕು ಎಂದು ಅವರು ಸೂಚನೆ ನೀಡಿದ್ದು, ಆ ಕೆಲಸವನ್ನು ನಮಗೆ ವಹಿಸಿದ್ದಾರೆ ಎಂದು ಬಹಿರಂಗಪಡಿಸಿದ್ದ.
ಜನವರಿ 17ರಂದು ಎರಡನೆ ಭೇಟಿಯಲ್ಲಿ ಬಾಡ್ಗೆ ಸಾವರ್ಕರ್ ಸದನದ ಒಳ ಹೋಗಿದ್ದ. ಗೋಡ್ಸೆ ಹಾಗೂ ಆಪ್ಟೆ ಎರಡನೆ ಮಹಡಿಗೆ ಹೋದರು. ಇದಾದ 10 ನಿಮಿಷ ಬಳಿಕ, ಮೆಟ್ಟಲಿನಿಂದ ಕೆಳಕ್ಕೆ ಇಳಿದರು. ಸಾವರ್ಕರ್ ಅವರ ಹಿಂದೆ ಬರುತ್ತಿದ್ದರು. ಸಾವರ್ಕರ್ ಅವರು ಆಪ್ಟೆ ಮತ್ತು ಗೋಡ್ಸೆಗೆ ಮರಾಠಿಯಲ್ಲಿ, ‘‘ಯಶಸ್ಸು ಸಾಧಿಸಿ ವಾಪಸು ಬನ್ನಿ’’ ಎಂದು ಹೇಳಿದ್ದನ್ನು ಬಾಡ್ಗೆ ಕೇಳಿಸಿಕೊಂಡಿದ್ದರು. ಆದರೆ ಸಾವರ್ಕರ್ ಅವರನ್ನು ನೋಡಿರಲಿಲ್ಲ.
ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶ, ಆತ್ಮ ಚರಣ್ ಅವರು ಬಾಡ್ಗೆಯನ್ನು ಸತ್ಯವಂತ ಸಾಕ್ಷಿ ಎಂದು ಪರಿಗಣಿಸಿದ್ದರು. ಆದರೆ ಇದನ್ನು ಸಾಬೀತುಪಡಿಸಲು ಬೇಕಾದ ಪುರಾವೆ ಇಲ್ಲದ್ದರಿಂದ ಆರೋಪಮುಕ್ತಗೊಳಿಸಬೇಕಾಯಿತು.
ಗೋಡ್ಸೆ ಹಾಗೂ ಇತರರು ತಮ್ಮ ಮಾರ್ಗದರ್ಶಕನಿಗೆ ಶಿಕ್ಷೆಯಾಗಬಾರದು ಎಂದು ಎಚ್ಚರ ವಹಿಸಿದ್ದರಿಂದ ಸಾವರ್ಕರ್ ಅವರನ್ನು ಶಿಕ್ಷಿಸಲು ಸಾಧ್ಯವಾಗಲಿಲ್ಲ. ಸಾವರ್ಕರ್ ಹಾಗೂ ತಮ್ಮ ಸಂಬಂಧ ನಾಯಕ ಮತ್ತು ಅನುಯಾಯಿ ಸಂಬಂಧಕ್ಕಿಂತ ಹೆಚ್ಚೇನೂ ಆಗಿರಲಿಲ್ಲ ಎಂದು ಗೋಡ್ಸೆ ಸ್ಪಷ್ಟಪಡಿಸಿದ್ದರು. 1947ರಲ್ಲಿ ಸಾವರ್ಕರ್ ಅವರ ನಾಯಕತ್ವಕ್ಕೆ ಗುಡ್ಬೈ ಹೇಳಿದ್ದೆವು. ಗಾಂಧೀಜಿಯವರನ್ನು ಹತ್ಯೆ ಮಾಡುವ ನಮ್ಮ ಯೋಚನೆ ಬಗ್ಗೆ ಸಾವರ್ಕರ್ ಅವರಿಗೆ ನಾವು ಏನೂ ಹೇಳಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಸಾವರ್ಕರ್ ಮಾಮೂಲಿನಂತೆ ವಿಶ್ವಾಸದ್ರೋಹ ಎಸಗಿದರು.
‘‘ಹಲವು ಮಂದಿ ಅಪರಾಧಿಗಳು ತಮ್ಮ ಧರ್ಮ ಅಥವಾ ಜನಾಂಗದ ಗುರು ಅಥವಾ ಮಾರ್ಗದರ್ಶಕರ ಬಗ್ಗೆ ಗೌರವ ಇಟ್ಟುಕೊಂಡಿರುತ್ತಾರೆ. ಆದರೆ ತಮ್ಮ ಅನುಯಾಯಿಗಳ ಯಾವುದೇ ಅಪರಾಧಗಳಲ್ಲಿ ಗುರುವಿನ ಮಾರ್ಗದರ್ಶನ ಇರುವುದಿಲ್ಲ. ಗುರುಗಳ ಬಗ್ಗೆ ವಿಧೇಯತೆ ಹಾಗೂ ಗೌರವದ ಆಧಾರದಲ್ಲೇ ಅವರನ್ನು ಕೂಡಾ ಅಪರಾಧಿಗಳು ಎನ್ನಲಾದೀತೆ?’’
ಸಾವರ್ಕರ್ ಅವರ ಹೇಳಿಕೆ ಗೋಡ್ಸೆಗೆ ನೋವು ತಂದಿತು ಎಂದು ಗೋಪಾಲ್ ಗೋಡ್ಸೆ ಅವರ ವಕೀಲ ಪಿ.ಎಲ್.ಇನಾಂದಾರ್ ಸ್ಪಷ್ಟಪಡಿಸಿದ್ದಾರೆ. ವಿಚಾರಣೆ ಬಗ್ಗೆ ವಿವರಿಸುತ್ತಾ, ಇನಾಂದಾರ್ ಹೀಗೆ ಬರೆದಿದ್ದಾರೆ:
‘‘ತಾತ್ಯರಾವ್ (ಸಾವರ್ಕರ್) ಅವರ ಕೈ ಸ್ಪರ್ಶಿಸಲು ನಾಥೂರಾಂ ಗೋಡ್ಸೆ ಹೇಗೆ ಅಲೆದಾಡಿದ್ದರು, ಅವರ ಬಗ್ಗೆ ಒಂದು ಅನುಕಂಪದ ಶಬ್ದ ಅಥವಾ ಕನಿಷ್ಠ ಸಹಾನುಭೂತಿ ಕೂಡಾ ವ್ಯಕ್ತಪಡಿಸಲಿಲ್ಲ. ನಾಥೂರಾಂ ಗೋಡ್ಸೆ ನನ್ನನ್ನು ಕೊನೆಯ ಬಾರಿ ಭೇಟಿ ಮಾಡಿದಾಗಲೂ ಈ ಅಭಿಪ್ರಾಯ ಹಂಚಿಕೊಂಡಿದ್ದರು’’
ಹೊಸ ಪುರಾವೆ
‘‘1964ರ ಅಕ್ಟೋಬರ್ನಲ್ಲಿ ಗೋಪಾಲ್ ಗೊಡ್ಸೆಯನ್ನು ಜೈಲಿನಿಂದ ಬಿಡುಗಡೆ ಮಾಡಿದಾಗ, ಅವರ ಗೌರವಾರ್ಥ 1964ರ ನವೆಂಬರ್ 11ರಂದು ಅಭಿನಂದನಾ ಸಮಾರಂಭ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾಜಿ ಸಂಪಾದಕ ಜಿ.ವಿ.ಕೇತ್ಕರ್, ಗಾಂಧೀಜಿಯವರನ್ನು ಕೊಲ್ಲುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನನ್ನ ಜತೆ ಗೋಡ್ಸೆ ಚರ್ಚಿಸುತ್ತಿದ್ದರು’’ ಎಂದು ಬಹಿರಂಗಪಡಿಸಿದರು.
ಇದು ಸಂಸತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಪರಿಣಾಮವಾಗಿ 1965ರಲ್ಲಿ ಈ ಬಗ್ಗೆ ತನಿಖೆ ನಡೆಸಲು ನ್ಯಾಯಮೂರ್ತಿ ಜೆ.ಎಲ್.ಕಪೂರ್ ನೇತೃತ್ವದಲ್ಲಿ ತನಿಖಾ ಆಯೋಗ ರಚಿಸಲಾಯಿತು. ಗಾಂಧೀಜಿ ಹತ್ಯೆ ಬಗ್ಗೆ ಮೊದಲೇ ಮಾಹಿತಿ ಇತ್ತೇ? ಇದನ್ನು ಸರಕಾರದ ಗಮನಕ್ಕೆ ತರಲಾಗಿದೆಯೇ ಎಂದು ಪತ್ತೆ ಮಾಡುವುದು ಇದರ ಕಾರ್ಯವಾಗಿತ್ತು.
ಕೆಲ ತಿಂಗಳ ಬಳಿಕ 1966ರ ಫೆೆಬ್ರವರಿಯಲ್ಲಿ ಸಾವರ್ಕರ್ ನಿರಶನ ಮೂಲಕ ಸಾ�