ಬಹು ಸಂಸ್ಕೃತಿಯ ಸತ್ಯ-ಮಿಥ್ಯೆಗಳ ಶೋಧ
‘‘ವೈವಿಧ್ಯ’’
ಆರ್ಥಿಕ ಉನ್ನತಿಯ ಯಶಸ್ಸೇ ಎಲ್ಲವನ್ನೂ ಅಳೆಯುವ ಮಾನದಂಡವಾಗಿ ಬಿಡುವ ಇಂದಿನ ಬಿಕ್ಕಟ್ಟಿನ ಕಾಲದಲ್ಲಿ ಪರ್ಯಾಯ ಚಿಂತನೆಯಲ್ಲಿ ನಂಬಿಕೆ ಉಳ್ಳವರ ಮಾತುಗಳು ವಿಚಾರಗಳು ಬದಿಗೆ ತಳ್ಳಲ್ಪಡುತ್ತವೆ, ಕೇಳಿಸದೇ ಹೋಗುತ್ತವೆ. ಈ ಕಾರಣದಿಂದಲೇ ಸದ್ಯದ ಒತ್ತಡದ ಸಂದರ್ಭದಲ್ಲಿ ಸಾಂಸ್ಕೃತಿಕ, ಸಾಹಿತ್ಯಿಕ ಸತತ ವಿಮರ್ಶೆ ಮಾಡುತ್ತಲೇ ಇರಬೇಕಾದ ಆವಶ್ಯಕತೆ ನಮ್ಮ ಮುಂದಿದೆ. ಅಂತಹ ಒಂದು ಪರ್ಯಾಯ ಸಾಧ್ಯತೆಯನ್ನು ನಿರಂತರವಾಗಿ ಶೋಸುವಲ್ಲಿ ಕೆ.ಸತ್ಯನಾರಾಯಣ ಅವರ ನಲವತ್ತಾರು ಲೇಖನಗಳ ‘‘ವೈವಿಧ್ಯ’’ ಸಂಕಲನ ಓದುಗರಿಗೆ ಒಂದು ವೇದಿಕೆ ಒದಗಿಸುತ್ತದೆ. ದೇಶ ಕಾಲಗಳ ಬಂಧಗಳನ್ನು ಮೀರಿ ಸಾಹಿತ್ಯದ ಸಾರ್ವಕಾಲಿಕ ವೌಲ್ಯದ ಶೋಧಕ್ಕಾಗಿ ತುಡಿಯುವುದು, ಅದನ್ನು ಅರ್ಥ ಮಾಡಿಕೊಳ್ಳುವುದು, ವಿಶ್ಲೇಷಿಸುವುದು ಮತ್ತು ಈ ಮೂಲಕ ಹೊಸ ಒಳನೋಟ ಕೊಡಬಲ್ಲ ಬರಹಗಳು ಈ ಸಂಕಲನದಲ್ಲಿ ರೂಪುಗೊಂಡಿವೆ.
ಇಲ್ಲಿಯ ಪ್ರತಿಯೊಂದು ಲೇಖನವೂ ವೈವಿಧ್ಯಪೂರ್ಣವಾಗಿ ಬೇರೆಯವರಿಗೆ ಕಾಣುವುದಕ್ಕಿಂತ ಭಿನ್ನವಾಗಿ ಭಿನ್ನ ಅರ್ಥದಲ್ಲಿ ಚರ್ಚೆಯನ್ನು ಹುಟ್ಟುಹಾಕಬಲ್ಲ ಸಾಮರ್ಥ್ಯದ ಲೇಖನಗಳು ಹಾಗೂ ಹೊಸತೇ ಆದ ಸಂಸ್ಕೃತಿಯ ಮೀಮಾಂಸೆಯನ್ನು ರೂಪಿಸುವಂತಹದು. ಉದಾಹರಣೆಯಾಗಿ ‘‘ಕನ್ನಡ ಪ್ರಶ್ನೆಗಳು-ಸಮುದಾಯದ ಶೋಧ’’ ಎಂಬ ತಮ್ಮ ಲೇಖನದಲ್ಲಿ ಕನ್ನಡದ ಅದರದ್ದೇಯಾದ ಪರಂಪರೆಯೊಂದನ್ನು ಪ್ರಾಚೀನ ಕಾಲದಿಂದಲೂ ಕಟ್ಟಿಕೊಂಡು ಬಂದಿದೆ ಎನ್ನುವ ಅವರು ಇಂದಿನ ಸಮಕಾಲೀನ ವಿದ್ಯಮಾನಗಳನ್ನು ವಿಶ್ಲೇಷಿಸುತ್ತಾ ಇಂಗ್ಲಿಷ್ ಭಾಷೆಯ ಆಪತ್ಯವನ್ನು ನಾವು ಹೇಗೆ ಸುಲಭವಾಗಿ ಒಪ್ಪಿಕೊಳ್ಳುವಂತೆ ಮಾಡಿದೆ ಎನ್ನುವುದನ್ನು ಬೇರೆ ಬೇರೆ ರೀತಿಯಲ್ಲಿ ಚರ್ಚಿಸುತ್ತಾರೆ. ಒಂದು ಭಾಷೆ ಸದಾ ವಿಕಾಸಶೀಲ ಗತಿಶೀಲತೆಯಲ್ಲಿ ಇರಬೇಕಾದರೆ ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರಿದ ವರ್ಗಗಳ ಭಾಷೆ ಆಗುತ್ತದೆ. ಇಂಗ್ಲಿಷ್ ಭಾಷೆಯ ಬಗ್ಗೆ ಜನರಿಗಿರುವ ಆಕಾಂಕ್ಷೆ ಏನೆಂದರೆ ಜಾಗತೀಕರಣದ ಓಟದಲ್ಲಿ ಮುಂದುವರಿದ ದೇಶದೊಡನೆ ಸ್ಪರ್ಸಲು ಆತ್ಮವಿಶ್ವಾಸ ಗಳಿಸುವುದು ಮತ್ತು ಮೇಲ್ಜಾತಿ ವರ್ಗದವರೊಡನೆ ಸಮಾನತೆ ಸಾಸುವುದು ಮತ್ತು ಉದ್ಯೋಗಾವಕಾಶ ಗ್ಯಾರಂಟಿಗಾಗಿ ಎಲ್ಲದಕ್ಕೂ ಇಂಗ್ಲಿಷ್ ಭಾಷೆಯೇ ರಹದಾರಿ ಎನ್ನುವ ಗೃಹಿಕೆಯೂ ಬೇಕು ಬೇಕೆಂದೇ ನಿರ್ಮಾಣ ಮಾಡಲಾಗಿದೆ ಎಂಬ ಭ್ರಮೆಯ ಬಗ್ಗೆ ಎಚ್ಚರಿಸುತ್ತಾ ಪರ್ಯಾಯ ಶೋಧವನ್ನು ವಿಶ್ಲೇಷಿಸುತ್ತಾರೆ.
ಉದ್ಯೋಗಾವಕಾಶಗಳು ನಿರ್ಧಾರವಾಗುವುದು ವೃತ್ತಿ ಕೌಶಲ್ಯದಿಂದ. ಭಾಷಾ ಕೌಶಲ್ಯ ಅದು ಸಣ್ಣ ಭಾಗ ಮಾತ್ರ ಎಂದು ಎಲ್ಲಾ ನೆಲೆಯಿಂದಲೂ ಈ ಭಾಷಾ ಯಜಮಾನ್ಯತೆಯನ್ನು ವಿಸತ ನೆಲೆಯಿಂದ ಚರ್ಚಿಸಿದ್ದಾರೆ.
ಇನ್ನು ‘‘ಅಂಬೇಡ್ಕರ್ ಮತ್ತು ಸಣ್ಣ ರಾಜ್ಯಗಳು’’ ಎಂಬ ಲೇಖನದಲ್ಲಿ 1955ರಲ್ಲೇ ಭಾರತವು ಏಕತೆಯನ್ನು ಸಾಸಿ ಉಳಿಸಿಕೊಳ್ಳಬೇಕಾದರೆ ರಾಜ್ಯ-ರಾಜ್ಯಗಳ ನಡುವೆ ಸಮಾನತೆ ಇರಬೇಕು. ಧಾರ್ಮಿಕವಾಗಿ, ಸಾಮಾಜಿಕವಾಗಿ ಬಹುಸಂಖ್ಯೆಯಲ್ಲಿ ಇಲ್ಲದವರು ಹಾಗೂ ದೊಡ್ಡ ರಾಜ್ಯ ನಿರ್ಮಾಣವಾದಾಗ ಅವರ ಬಲಮುಷ್ಠಿಯಲ್ಲಿ ಸಣ್ಣ ರಾಜ್ಯಗಳು ಹಿಂಸೆಗೊಳಗಾಗುವ ಅಪಾಯದ ಬಗ್ಗೆ ಎಚ್ಚರಿಸಿದ್ದನ್ನು ಪ್ರಾಯೋಗಿಕ ವಿಮರ್ಶೆಗೆ ಒಡ್ಡುತ್ತಾರೆ.
‘‘ರಜನಿ ಬಕ್ಷಿ’’ಯವರ ವ್ಯಕ್ತಿತ್ವ ಚಿತ್ರಣದಲ್ಲಿ ಅವರ ವ್ಯಕ್ತಿತ್ವದ ಹಲವು ಮಗ್ಗಲುಗಳನ್ನು ಅನ್ವೇಶಿಸುತ್ತಾ ಅವರ ‘‘ಬಾಪು ಕುಟಿ’’ ಕೃತಿಯಲ್ಲಿ ಗಾಂಜೀಯ ನಂಬಿಕೆ ಮತ್ತು ಪ್ರಯೋಗಶೀಲತೆಯನ್ನು ರಜನಿ ಬಕ್ಷಿಯವರು ನಿರೂಪಿಸಿದ ರೀತಿಯಲ್ಲೇ ಅವರ ವಿಸ್ತೃತವಾದ ಓದು, ಸೂಕ್ಷ್ಮಗ್ರಹಿಕೆ ಹಾಗೂ ಎತ್ತರದಲ್ಲಿ ಚಿಂತಿಸುವಂತೆ ಮಾಡುವ ವಿಶ್ಲೇಷಣೆ ಇಂದಿನ ಕಾಲದಲ್ಲಿ ಕಾಡುತ್ತಿರುವ ಹಲವು ಪ್ರಶ್ನೆಗಳಿಗೆ ಪರ್ಯಾಯ ಸಾಧ್ಯತೆ ಬಗ್ಗೆ ಉತ್ತರವಿದೆ ಎಂದು ಅಭಿಪ್ರಾಯಪಡುತ್ತಾರೆ.
ಕೆ. ಸತ್ಯನಾರಾಯಣ ಅವರ ‘‘ವೈವಿಧ್ಯ’’ ಸಂಕಲನದ ಬರಹಗಳನ್ನು ಓದಿದಾಗ ಅವರ ವಿಪುಲವಾದ ಓದಿನ ವ್ಯಾಪ್ತಿ ವ್ಯಕ್ತದ ವಿಚಾರಗಳನ್ನು ಗೃಹಿಸಲು, ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ ಅನಿಸುತ್ತದೆ. ‘‘ದೊಸ್ತೊವಸ್ಕಿ-ಕೆಲವು ಹೊಸ ವಿಚಾರಗಳು’’ ಲೇಖನದಲ್ಲಿ ದೊಸ್ತೊವಸ್ಕಿ ಯುದ್ಧ ಪ್ರೀತಿಸುತ್ತಿದ್ದರು ಎಂಬ ಅಂಶವನ್ನು ಇತಿಹಾಸ ತಜ್ಞ ಏಟ್ಞ ಓಟಜ್ಞನ ಱಕ್ಟೃಟಛಿಠಿ ಚ್ಞ ಛಿಟಟ್ಝಛಿ ಖಠ್ಠಿಜಿಛಿ ಜ್ಞಿ ಘೆಜ್ಞಿಛಿಠಿಛಿಛ್ಞಿಠಿ ಇಛ್ಞಿಠ್ಠ್ಟಿ ಘೆಠಿಜಿಟ್ಞಚ್ಝಜಿಞೞೞದಿಂದ ಪಡೆದು ಅದನ್ನು ಸಂಪೂರ್ಣ ಸ್ವೀಕರಿಸದೇ ಅದರ ಮಿತಿಯನ್ನು ಗುರುತಿಸುತ್ತಾರೆ. ಶಾಂತಿವಾದಿಯೊಬ್ಬ ದೊಸ್ತೊವಸ್ಕಿಯ ಯುದ್ಧದ ಬಗೆಗಿನ ಉತ್ಸಾಹವನ್ನು ಪ್ರಶ್ನಿಸಿದಾಗ ‘‘ಯುದ್ಧದ ನಂತರ ಮನುಷ್ಯ ಸಂಬಂಧಗಳಲ್ಲಿ ಎಷ್ಟೊಂದು ಮಹತ್ವವಾದದ್ದು ಹಾಗೂ ಹೊಸತು ಸಂಭವಿಸುತ್ತದೆಂದು ಯೋಚಿಸಿದರೆ ಇಡೀ ಯುರೋಪ್ ಹೊಸ ಹುಟ್ಟು ಪಡೆಯುತ್ತದೆಂದು ವಾದಿಸಿದ್ದ’’ ಎನ್ನುವ ದೊಸ್ತೊವಸ್ಕಿಯ ರಾಷ್ಟ್ರಪ್ರೇಮವನ್ನು ಪರಿಶೀಲನೆಗೆ ಒಡ್ಡುತ್ತಾರೆ. ಹಾಗೇನೆ ಇತರ ಭಾಷೆ, ಸಂಸ್ಕೃತಿಯ ಕೃತಿಗಳ ಓದು ತಮ್ಮ ಬರವಣಿಗೆಗೆ ಬಳಸಿಕೊಳ್ಳುತ್ತಾರೆ.
‘‘ಈ ಕಾಲದ ಬಾಬರ್’’ ಲೇಖನದಲ್ಲಿ (1483-1530) ನಲವತ್ತೇಳು ವರ್ಷ ಬದುಕಿದ ಬಾಬರನ ಆತ್ಮಕಥೆ ‘‘ಬಾಬರನಾಮಾ’’ದಲ್ಲಿ ಆ ಕಾಲದ ದೇಶದ ಸ್ಥಿತಿ ಹಾಗೂ ರಾಜಕಾರಣ ಮತ್ತು ಬಾಬರ್‌ನ ಮನೋಧರ್ಮದ ಪಾರದರ್ಶಕತೆಯನ್ನು ಪರೀಕ್ಷೆಗೆ ಒಳಪಡಿಸುತ್ತಾರೆ.
ಯಾವುದೇ ಸಾಹಿತ್ಯದ ಓದು ಅವುಗಳ ಕಾಲದೇಶ ಸಂದರ್ಭದ ಆಚೆಗೂ ವಿಸ್ತರಿಸಬಹುದಾಗಿದೆ ಮತ್ತು ಅದರ ಸಂವೇದನೆ ಕೇವಲ ಅದರ ಚೌಕಟ್ಟಿನಲ್ಲಿ ಮಾತ್ರ ಪರಿಭಾವಿಸದೇ ನಿರಂತರ ಅನುಸಂಧಾನದಲ್ಲಿ ಗುರುತಿಸಬಹುದಾಗಿದೆ ಎಂದು ಅಭಿಪ್ರಾಯಪಡುವ ಕೆ.ಸತ್ಯನಾರಾಯಣ ಅವರು ‘‘ಸಿಂಗರ್ ಪ್ರಪಂಚ್’’ದಲ್ಲಿನ ಕಥೆಗಳು ಎಲ್ಲೇ ನಡೆಯಲಿ ಅವುಗಳು ಒಂದು ಸ್ಥಳ ಪುರಾಣಗಳಂತೆ ಕಾಣುತ್ತವೆ ಮತ್ತು ಈ ಕಾರಣಕ್ಕೆ ಅವು ವಿಶ್ವಪುರಾಣವು ಆಗುತ್ತವೆ. ಸಿಂಗರ್ ವರ್ಣಿಸುವ ಕೊಳಕು, ಕ್ಲೆಬ್ಯ ಓದುವಾಗ ತನಗೆ ವಾರಣಾಸಿ, ಅಯೋಧ್ಯೆಯ ಬೀದಿಗಳು ನೆನಪಾಗುತ್ತವೆ ಎಂದು ಅಭಿಪ್ರಾಯಪಡುತ್ತಾರೆ.
ಇದಲ್ಲದೇ ಕಾರಂತರ ‘‘ಮರಳಿ ಮಣ್ಣಿಗೆ’’ ಮತ್ತು ಭೈರಪ್ಪನವರ ‘‘ಗ್ರಹಭಂಗ’’ ತುಲನಾತ್ಮಕ ದೃಷ್ಟಿಯಲ್ಲಿ ಪರಿಶೀಲಿಸುತ್ತಾ ಗ್ರಹಭಂಗದ ಪಾತ್ರಗಳು ವಾಸ್ತವಕ್ಕೆ ಕಟ್ಟು ಬಿದ್ದು ಹೊಸ ವಾಸ್ತವದ ಸಾಧ್ಯತೆಯನ್ನು ಕಳಕೊಂಡು ಬಿಟ್ಟರೆ ‘‘ಮರಳಿ ಮಣ್ಣಿಗೆ’’ ವಾಸ್ತವದ ಕವಚ ಕಳೆದುಕೊಂಡು ಸ್ವತಂತ್ರವಾಗಿವೆ. ಎಲ್ಲ ಅನುಭವಗಳನ್ನು ಒಳಗೊಳ್ಳುತ್ತಾ ತಾನೇ ಒಂದು ಹೊಸ ವಾಸ್ತವವಾಗುತ್ತದೆ ಎಂದು ಪರಿಶೀಲಿಸುತ್ತಾರೆ.
ಇದಲ್ಲದೇ ತಮ್ಮದೇ ದೃಷ್ಟಿಯಲ್ಲಿ ಬೇರೆ ಬೇರೆ ಕಾಲದ ಚಿತ್ತಾಲ, ಶಾಂತಿನಾಥ ದೇಸಾಯಿ, ವೀಣಾ ಶಾಂತೇಶ್ವರ, ದೇವನೂರ ಮಹಾದೇವ, ಬೆಸಗರಹಳ್ಳಿ ರಾಮಣ್ಣ ಮುಂತಾದ ಬೇರೆ ಬೇರೆ ಹಿನ್ನೆಲೆಯ ಲೇಖಕರ ಬರಹಗಳು, ವ್ಯಕ್ತಿತ್ವಗಳು ಕೆ.ಸತ್ಯನಾರಾಯಣ ಅವರ ಹುಡುಕಾಟಕ್ಕೆ ಪಕ್ಕಾಗಿವೆ.
ಹಾಗೇನೆ ಕೆ.ಎಸ್.ನರಸಿಂಹ ಸ್ವಾಮಿ ಅವರ ‘‘ಮೈಸೂರು ಮಲ್ಲಿಗೆ’’ ಕವನ ಸಂಗ್ರಹಕ್ಕೆ ಬೇರೆ ಬೇರೆ ಲೇಖಕರು ಸ್ಪಂದಿಸಿದ ರೀತಿಯನ್ನು ಸಂಗ್ರಹಿಸಿ ಪ್ರತಿಕ್ರಿಯಿಸಿದ್ದಾರೆ.
ಒಟ್ಟಿನಲ್ಲಿ ಇನ್ನಿಲ್ಲದಂತೆ ಚಿಂತಿಸುವ, ವಿಶ್ಲೇಷಿಸುವ ಈ ಮೂಲಕ ಒಳನೋಟ ಕೊಡುವ ಅವರ ಬರಹಗಳು ಇಡೀ ಸಂಗ್ರಹಕ್ಕೆ ಒಂದು ರೀತಿಯ ತಾತ್ವಿಕ ಚೌಕಟ್ಟು ರೂಪಿಸಿವೆ. ಅವರ ಸಾಹಿತ್ಯಿಕ, ಸಾಂಸ್ಕೃತಿಕ ಕಾಳಜಿಗಳು ಅವರ ಅಧ್ಯಯನಶೀಲತೆ ತೋರಿಸುತ್ತಾ, ಯಾವುದರ ಬಗ್ಗೆಯೂ ಹಗುರ ತೀರ್ಮಾನ ತೋರಿಸದೇ ಅನುಭವದ ಕ್ಷಣಿಕತೆಯನ್ನು ನಿರಂತರದಲ್ಲಿ ಹುಡುಕುವಂತಹ ಮನೋಧರ್ಮದಂತಹದ್ದು.