ಇನ್ನು ಫೇಸ್‌ಬುಕ್‌ನಲ್ಲಿ ವೀಡಿಯೊ ಜೊತೆ ಕಮೆಂಟ್ ಮಾಡಿ
ಇನ್ನು ಮುಂದೆ ನಿಮ್ಮ ಸ್ನೇಹಿತರ ಫೇಸ್ಬುಕ್ ಪೋಸ್ಟ್ ಮೇಲೆ ಕಮೆಂಟ್ ಮಾಡಬೇಕೆಂದರೆ ವೀಡಿಯೊವನ್ನು ಅಪ್ಲೋಡ್ ಮಾಡಬಹುದಾಗಿದೆ. ಇದೇ ಶುಕ್ರವಾರ ಫೇಸ್ಬುಕ್ ಈ ಹೊಸ ಫೀಚರನ್ನು ಪರಿಚಯಿಸಿದೆ. ಜನರು ಫೇಸ್ಬುಕ್ ಅಲ್ಲಿ ಹೆಚ್ಚು ವೀಡಿಯೊಗಳನ್ನು ವೀಕ್ಷಿಸುವಂತೆ ಮಾಡುವುದೇ ಈ ಹೊಸ ಫೀಚರ್ ಪರಿಚಯಿಸಿದ ಉದ್ದೇಶ.
ಇದು ಸ್ನಾಪ್ ಚಾಟ್, ಪೆರಿಸ್ಕೋಪ್ ಮತ್ತು ಇತರೆ ಆನ್ ಲೈನ್ ವೀಡಿಯೊ ಮಾರುಕಟ್ಟೆ ಜೊತೆಗೆ ಸ್ಪರ್ಧಿಸುತ್ತಿದೆ. ಇವುಗಳೆಲ್ಲವೂ ತಮ್ಮ ಆನ್ ಲೈನ್ ಬಳಕೆದಾರರ ಸಂಖ್ಯೆ ಏರಿಸಲು ವೀಡಿಯೊಗಳನ್ನೇ ಮುಖ್ಯ ಅಸ್ತ್ರವನ್ನಾಗಿಸುತ್ತಿದ್ದಾರೆ. ಸಿಸ್ಕೋ ವಿಶುವಲ್ ನೆಟ್ವರ್ಕಿಂಗ್ ಇಂಡೆಕ್ಸ್ ಕಳೆದವಾರ ಹೇಳಿರುವ ಪ್ರಕಾರ ವೀಡಿಯೊ ಟ್ರಾಫಿಕ್ 2020ರಲ್ಲಿ ಅಂತರ್ಜಾಲದ ಟ್ರಾಫಿಕ್ ಅನ್ನು ಶೇ. 82ರಷ್ಟು ಆವರಿಸಿಕೊಳ್ಳಲಿದೆ. 2015ರಲ್ಲಿ ಅದು ಶೇ. 70 ಇತ್ತು. ಫೇಸ್ಬುಕ್ ಕಳೆದ ವರ್ಷ ಲೈವ್ ವೀಡಿಯೊ ಸ್ಟ್ರೀಮಿಂಗನ್ನು ಪರಿಚಯಿಸಿತ್ತು ಮತ್ತು ಜನವರಿಯಲ್ಲಿ ಎಲ್ಲಾ ಕಡೆಗೆ ಸಿಗುವಂತೆ ಮಾಡಿದೆ. ನಂತರ ಏಪ್ರಿಲ್ ಅಲ್ಲಿ ಲೈವ್ ಪ್ರಸಾರ, ಪ್ರತಿಕ್ರಿಯೆ ಮತ್ತು ಸ್ನಾಪ್ ಚಾಟ್ ಶೈಲಿಯ ಲೈವ್ ಫಿಲ್ಟರ್ ಗಳನ್ನು ಸೇರಿಸಿದ ನಿಜ ವಿಶ್ವ ನಕ್ಷೆ ರೂಪಿಸಿದೆ.
ಮಾರ್ಚ್‌ನಲ್ಲಿ ಕಂಪೆನಿಯು ವೀಡಿಯೊ ಫಿಲ್ಟರ್ ಆಫ್ ಮಸ್ಕ್ವೆರ್ಡೆಯನ್ನು ಪಡೆದುಕೊಂಡಿರುವುದಾಗಿ ಹೇಳಿತ್ತು. ಈ ಸ್ವಾಧೀನದಿಂದ ಫೇಸ್ಬುಕ್ ವೀಡಿಯೊ ಅನುಭವ ಏರಲಿದೆ ಎಂದೂ ಹೇಳಿತ್ತು. ವ್ಯವಹಾರ ಎಷ್ಟರದ್ದೆಂದು ಅದು ಹೇಳಿರಲಿಲ್ಲ. ಹೊಸ ವೀಡಿಯೊ ಕಮೆಂಟ್ಸ್ ಫೀಚರನ್ನು ಈ ವರ್ಷ ಫೇಸ್ಬುಕ್ ಹ್ಯಾಕಥಾನಲ್ಲಿ ಅಭಿವೃದ್ಧಿಪಡಿಸಲಾಗಿದೆ. ನಾವು ಹೆಚ್ಚು ಜನರೊಡಗೂಡಿದ ಆಪ್ತ ಸಂಭಾಷಣೆಗೆ ಅವಕಾಶ ಮಾಡಿಕೊಡಲು ಬಯಸಿದ್ದೆವು. ಇದು ಕಮೆಂಟ್ಸ್ ಒಳಗೆ ಮಲ್ಟಿಮೀಡಿಯ ಫೀಚರ್ ಸೇರಿಸಿದೆ. ಲಿಂಕ್ಸ್, ಫೋಟೋಗಳು, ಸ್ಟಿಕ್ಕರ್ ಗಳು, ಇಮೋಜಿಗಳು ಮತ್ತು ಈಗ ವೀಡಿಯೊ ಕೂಡ ಕಮೆಂಟ್ಸಲ್ಲಿ ಸೇರಿಸಲಾಗಿದೆ ಎಂದು ಫೇಸ್ಬುಕ್ ಇಂಜಿನಿಯರ್ ಬಾಬ್ ಬಾಲ್ಡ್ ವಿನ್ ಬ್ಲಾಗ್ ಪೋಸ್ಟಲ್ಲಿ ಹೇಳಿದ್ದಾರೆ.
ಕೃಪೆ: money.cnn.com