ಹಮಾಲರ ಹುದ್ದೆಗೆ ಅರ್ಜಿ ಸಲ್ಲಿಸಿದ Mphil ಪದವೀಧರರು !
ಮುಂಬೈ, ಜೂ. 20: ಮಹಾರಾಷ್ಟ್ರದಲ್ಲಿ ಹಮಾಲರ ( ಪೋರ್ಟರ್ ) 5 ಹುದ್ದೆಗಳಿಗೆ ಮಹಾರಾಷ್ಟ್ರ ಲೋಕಸೇವಾ ಆಯೋಗಕ್ಕೆ 2,424 ಅರ್ಜಿಗಳು ಬಂದಿವೆ !
ಇದನ್ನು ಕೇಳಿ ನಿಮ್ಮ ಹುಬ್ಬೇರಿದರೆ ಇದಕ್ಕಿಂತಲೂ ಆಶ್ಚರ್ಯದ ವಿಷಯವಿದೆ. ಈ ಐದು ಹಮಾಲರ ಹುದ್ದೆಗಳಿಗೆ 984 ಪದವೀಧರರು ಹಾಗು 5 ಎಂ ಫಿಲ್ ಪದವಿ ಪಡೆದವರು ಅರ್ಜಿ ಸಲ್ಲಿಸಿದ್ದಾರೆ. ಈ ಹುದ್ದೆಗೆ ಬೇಕಾದ ಕನಿಷ್ಠ ಶೈಕ್ಷಣಿಕ ಅರ್ಹತೆ ನಾಲ್ಕನೇ ಕ್ಲಾಸು ಪಾಸು !
ಅರ್ಜಿ ಸಲ್ಲಿಸಿದವರಲ್ಲಿ 253 ಮಂದಿ ಸ್ನಾತಕೋತ್ತರ ಪದವೀಧರರು , 9 ಮಂದಿ ಸ್ನಾತಕೊತ್ತರ ಡಿಪ್ಲೋಮಾ ಮಾಡಿದ್ದರೆ, 109 ಮಂದಿ ಡಿಪ್ಲೋಮಾ ಮಾಡಿದ್ದಾರೆ ಎಂದು ಎಂಪಿಎಸ್ಸಿ ಕಾರ್ಯದರ್ಶಿ ರಾಜೇಂದ್ರ ಮಂಗ್ರುಲ್ಕರ್ ಹೇಳಿದ್ದಾರೆ.
Next Story