ಕಾನ್ಪುರ ಕೊಹ್ನಾದಲ್ಲಿ ಭೀಕರ ದುರಂತ: ಸೆಲ್ಫಿ ತೆಗೆಯುತ್ತಿದ್ದ 7 ಬಾಲಕರು ಗಂಗಾ ನದಿಗೆ ಬಿದ್ದು ಸಾವು!
ಕಾನ್ಪುರ,ಜೂನ್ 23: ಕಾನ್ಪುರದ ಕೊಹ್ನಾದಲ್ಲಿ ಸೆಲ್ಫಿತೆಗೆಯಲು ಹೋದ ಏಳು ಬಾಲಕರು ಗಂಗಾ ನದಿಗೆ ಬಿದ್ದು ಮೃತರಾದ ಘಟನೆ ವರದಿಯಾಗಿದೆ. ಕೊಹ್ನಾದ ಅಣೆಕಟ್ಟಿನ ಸಮೀಪ ಗಂಗಾನದಿಯಲ್ಲಿ ಸೆಲ್ಫಿ ತೆಗೆಯುತ್ತಿದ್ದ ವೇಳೆ ನದಿಗೆ ಬಿದ್ದು ಶಿವಮ್, ರೋಹಿತ್, ಗೊಲು, ಸಂದೀಪ್, ಸಚಿನ್, ಸತ್ಯಮ್ ಹಾಗೂ ಮಕ್ಸೂದ್ ಅಹ್ಮದ್ ಮೃತರಾದ ಬಾಲಕರೆಂದು ಪೊಲೀಸರು ತಿಳಿಸಿದ್ದಾರೆ.
ಮಕ್ಸೂದ್ ಅಹ್ಮದ್ ಜೂಹಿ ಎಂಬಲ್ಲಿನ ಬಾಲಕನಾಗಿದ್ದರೆ ಉಳಿದ ಬಾಲಕರು ವಿನೋವಾ ನಗರದ ನಿವಾಸಿ ಗಣ್ ಮೊಹಲ್ಲಾದವರು. ಗಂಗಾ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಇವರು ಸೆಲ್ಫಿ ತೆಗೆಯುತ್ತಿದ್ದ ವೇಳೆ ಜಾರಿ ಬಿದ್ದಿದ್ದರು. ಆರು ಬಾಲಕರ ಶವವನ್ನು ಮೇಲಕ್ಕೆತ್ತಲಾಗಿದ್ದು ಸತ್ಯಮ್ನ ಮೃತದೇಹ ಇನ್ನೂ ಪತ್ತೆಯಾಗಿಲ್ಲ.
Next Story