ಸುಬ್ರಹ್ಮಣ್ಯನ್ ಸ್ವಾಮಿ ಸ್ವತಹ ಒಬ್ಬ ‘ದೇಶಭಕ್ತ’ರೇ ?
ಸುಬ್ರಹ್ಮಣ್ಯ ಸ್ವಾಮಿಯ ‘ದೇಶಭಕ್ತಿಯ ಸ್ಯಾಂಪಲ್‌ಗಳು’
ಸುಬ್ರಹ್ಮಣ್ಯನ್ ಸ್ವಾಮಿಯವರು ಈಗ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯಂ ಅವರನ್ನು ಗುರಿಯಾಗಿಸುತ್ತಿದ್ದಾರೆ. ಅವರ ದೇಶಭಕ್ತಿಯನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ಸ್ವಾಮಿಯ ದೇಶ ಭಕ್ತಿ ಅದಕ್ಕಿಂತ ಉತ್ತಮವೇ ?
ನಿಕ್ಸನ್ ಅವರ ಬೀಜಿಂಗ್ ಪರ ನಿಲುವು ಹಾಗೂ ಚೀನಾದೊಂದಿಗಿನ ಮೈತ್ರಿಯ ಹಿನ್ನೆಲೆಯಲ್ಲಿ ಚೀನಾಗೆ ವಿಶ್ವ ಬ್ಯಾಂಕಿನ ಐಡಿಎ ಮಾದರಿಯ ರಿಯಾಯಿತಿ ಸಾಲ ಪಡೆಯುವಲ್ಲಿ ಸಹಕರಿಸಲು ಚೀನಾದ ತಲಾ ಆದಾಯ ಕಡಿಮೆಯೆಂದು ತೋರಿಸಿದಡ್ವೈಟ್ ಪರ್ಕಿನ್ಸ್ ಅವರ ನೇತೃತ್ವದ ಹಾರ್ವರ್ಡ್ ಆರ್ಥಿಕ ತಜ್ಞರ ತಂಡದ ಭಾಗವಾಗಿದ್ದರು ಸುಬ್ರಹ್ಮಣ್ಯನ್ ಸ್ವಾಮಿ. ಇದರಿಂದಾಗಿ ಭಾರತಕ್ಕೆ ದೊರಕಬೇಕಾದ ಐಡಿಎ ಸಾಲ ಅರ್ಧದಷ್ಟು ಕಡಿಮೆಯಾಗಿ ಉಳಿದರ್ಧ ಚೀನಾದ ಪಾಲಾಗಿತ್ತು. ಇದರಿಂದಾಗಿ ಭಾರತ ಬಹಳಷ್ಟು ಬೆಲೆ ತೆರಬೇಕಾಗಿ ಬಂದಿತ್ತು. ಚೀನಾದ ಹಿರಿಯ ನಾಯಕರು ಸ್ವಾಮಿಯನ್ನು ಸನ್ಮಾನಿಸಿದರು ( ಬೇರೇನು ಮಾಡಲಾಯಿತು ಎಂಬುದು ನಮಗೆ ತಿಳಿದಿಲ್ಲ).
1970 ರಲ್ಲಿ ಚೀನಾ ಘೋಷಿಸಿದ ತನ್ನ ಜನಸಂಖ್ಯೆಯ ತಲಾ ಆದಾಯದಿಂದ ಆ ದೇಶವನ್ನು ಮಧ್ಯಮ ಆದಾಯದ ದೇಶವೆಂದು ಗುರುತಿಸಲಾಗಿತ್ತು. ಅವರು ಈಳಂ ಅನ್ನು ಬೆಂಬಲಿಸಿದರು. ನಂತರ ಒಮ್ಮೆಗೇ ಏನೋ ಬದಲಾವಣೆಯಾಯಿತು. ಸುಬ್ರಹ್ಮಣ್ಯನ್ ಸ್ವಾಮಿ ಹಾರ್ವರ್ಡ್ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದಾಗ ಈಳಂ ಹಾಗೂ ಎಲ್‌ಟಿಟಿಇ ಬೆಂಬಲಿಗರಾಗಿದ್ದರೆಂದು ಉಗ್ರವಾದ ವಿಚಾರಗಳಲ್ಲಿ ಪರಿಣತರಾಗಿರುವ ಹಾಗೂ ‘ಇಂಡಿಯಾಸ್ ಇನ್ವಾಲ್ವ್ ಮೆಂಟ್ ಇನ್ ಶ್ರೀಲಂಕಾ’’ ಇದರ ಲೇಖಕ ರೋಹನ್ ಗುಣರತ್ನೆ ಬರೆದಿದ್ದರು. ಭಾರತಕ್ಕೆ ಮರಳಿದ ನಂತರ ಬಹಳ ಕಾಲದ ವರೆಗೆ ಅವರು ಎಲ್‌ಟಿಟಿಇಯನ್ನು ಬೆಂಬಲಿಸುವುದನ್ನು ಮುಂದುವರಿಸಿದ್ದರು.
ಅವರು ಕೆಲ ಕಾಲ ಚಂದ್ರ ಸ್ವಾಮಿಯ ಚೇಲಾ ಕೂಡ ಆಗಿದ್ದರು. ರಾಜೀವ್ ಗಾಂಧಿ ಹತ್ಯೆಯಲ್ಲಿ ಅವರ ಶಂಕಿತ ಶಾಮೀಲಾತಿಯ ವಿಚಾರದಲ್ಲಿ ಮಿಲಾಪ್ ಚಂದ್ ಜೈನ್ ಆಯೋಗ ಸಾಕಷ್ಟು ಸಮಯ ವ್ಯಯ ಮಾಡಿತ್ತು. ಆ ಸಮಯದಲ್ಲಿ ಸುಬ್ರಹ್ಮಣ್ಯನ್ ಸ್ವಾಮಿ ಕುಖ್ಯಾತ ಶಸ್ತ್ರಾಸ್ತ್ರ ಉದ್ಯಮಿ ಅದ್ನಾನ್ ಖಶೋಗ್ಗಿಯ ಸ್ನೇಹಿತರಾಗಿದ್ದರು. ಈತ ಚಂದ್ರ ಸ್ವಾಮಿಯ ಸ್ನೇಹಿತ ಕೂಡ ಆಗಿದ್ದರು. ನ್ಯೂಯಾರ್ಕ್ ನಗರದ ಟ್ರಂಪ್ ಟವರ್ಸ್ ನಲ್ಲಿರುವ ಖಶೊಗ್ಗಿಯ ಅಪಾರ್ಟ್ ಮೆಂಟ್ ನಲ್ಲಿ ಈ ಮೂವರು ಸ್ನೇಹಿತರು ಆಗಾಗ ಸಂಧಿಸುತ್ತಿದ್ದರು.
ಸ್ವಾಮಿ ಕೆಲ ಕಾಲ ಜಯಲಲಿತಾರೊಂದಿಗೂ ಸ್ನೇಹದಿಂದಿದ್ದರು ಹಾಗೂ ನಂತರ ಅವರ ವಿರುದ್ಧ ಎದ್ದು ನಿಂತಿದ್ದರು. ಅವರು ಮೋದಿಯ ವಿರುದ್ಧ ಕೂಡ ಎದ್ದು ನಿಲ್ಲುವರೇನು ? ಮೋದಿಯವರಿಗೆ ತಮ್ಮ ವಿರೋಧಿಗಳನ್ನು ಮಟ್ಟ ಹಾಕಲು ತಮ್ಮದೇ ವಿಧಾನವಿದೆಯೆಂಬುದು ಪ್ರಾಯಶಃ ಸ್ವಾಮಿಯವರಿಗೆ ತಿಳಿದಿರಬಹುದು.