ಈ ತೀರ್ಪು ಹೆಚ್ಚೇನೂ ಖುಷಿಪಡುವಂಥದ್ದಲ್ಲ
ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ
ಭಾರತದಲ್ಲಿ ನಡೆಯುವ ಪ್ರತಿಯೊಂದು ಕೋಮುಹತ್ಯೆ ಕೂಡಾ ನಿರ್ಭೀತಿಯ ಕಲೆಯಿಂದ ತೊಯ್ದಿರುತ್ತದೆ. ನಿರ್ಭೀತಿಯೆಂದರೆ ಈ ಹತ್ಯಾ ಕಾಂಡ ಮತ್ತು ಮುಗ್ಧರ ಅತ್ಯಾಚಾರವನ್ನು ಮತ್ತು ಅವರ ಮನೆಗಳನ್ನು ಲೂಟಿ ಮಾಡಿ ಕಿಚ್ಚು ಹಚ್ಚುವ, ಯೋಜನೆ ಹೂಡುವ ಮತ್ತು ಅದನ್ನು ಕಾರ್ಯಗತಗೊಳಿಸುವವರು ಎಲ್ಲಾ ರೀತಿಯ ಶಿಕ್ಷೆಗಳಿಂದ ಪಾರಾಗುತ್ತಾರೆ ಎಂಬ ನಂಬಿಕೆ. ಕಾನೂನು ವ್ಯವಸ್ಥೆಯ ಈ ವೈಫಲ್ಯದಿಂದ ಸಾಮೂಹಿಕ ದ್ವೇಷಾಪರಾಧದ ಸಂತ್ರಸ್ತರಿಗೆ ಉಳಿಯುವ ಸಾಧ್ಯತೆಗಳು ಬಹಳ ಕಡಿಮೆ. ಈ ದಂಗೆಗಳಲ್ಲಿ ಬಹುತೇಕ ಸಂತ್ರಸ್ತರಾಗುವವರು ಧಾರ್ಮಿಕ ಅಲ್ಪಸಂಖ್ಯಾತರಾಗಿರುತ್ತಾರೆ-1984ರ ಹತ್ಯಾಕಾಂಡವನ್ನು ಸಹಿಸಿದ ಸಿಖ್ಖರು, 2006ರಲ್ಲಿ ಕಂದಮಲ್ ಬೆಂಕಿಯಲ್ಲಿ ಉಳಿದ ಕ್ರೈಸ್ತರು ಮತ್ತು 1961ರಲ್ಲಿ ಆರಂಭವಾದ ಜಬಲ್ಪುರ ಕೋಮುದಳ್ಳುರಿಯಿಂದ ಹಿಡಿದು ಅನೇಕ ಬಾರಿ ಇಂತಹ ಹಿಂಸೆಗಳಿಗೆ ಈಡಾಗಿರುವವರು ಮುಸ್ಲಿಮರು. ಅವರ ಗಾಯಗಳು ಎಂದೂ ಮಾಸುವುದಿಲ್ಲ ಯಾಕೆಂದರೆ ಅವರ ಈ ನರಳಾಟಕ್ಕೆ ಕಾರಣರಾದವರು ಸ್ವತಂತ್ರವಾಗಿ ತಿರುಗಾಡುತ್ತಿದ್ದಾರೆ. ನಮ್ಮ ಪ್ರಜಾಪ್ರಭುತ್ವದ ಈ ಹೇಯ ನೈಜತೆಯೇನೂ ಅನಿರೀಕ್ಷಿತವಾದು ದೇನಲ್ಲ. ಅದು ಕೋಮು ಮತ್ತು ಅಲ್ಪಸಂಖ್ಯಾತ ವಿರೋಧಿ ಸಾಂಸ್ಥಿಕ ಪಕ್ಷಪಾತವನ್ನು ಅಪರಾಧಿ ನ್ಯಾಯ ವ್ಯವಸ್ಥೆಯಲ್ಲೇ ಸ್ಥಾಪಿಸಿದ್ದು. ಇದು ಪೊಲೀಸ್, ನ್ಯಾಯಾಂಗ ಮತ್ತು ನ್ಯಾಯಾಲಯದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತದೆ. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಭಾರತದ ಕೋಮುಹಿಂಸೆ ಬಗ್ಗೆ ಇದ್ದ ನಿರ್ಭಯತೆಯ ಇತಿಹಾಸ ಕೇವಲ ಭಾಗಶಃ ತುಂಡರಿಸಲ್ಪಟ್ಟಿತು. ಸಾವಿರಾರು ಜನರ ಹತ್ಯೆ ಮತ್ತು ಅತ್ಯಾಚಾರದ ನಂತರವೂ ಅಪರಾಧಿ ನ್ಯಾಯವ್ಯವಸ್ಥೆ ಹಿಂದಿನಂತೆಯೇ ನಡೆದುಕೊಂಡಿತು. ದಳ್ಳುರಿಯ ನಂತರ ದಾಖಲಾದ ಅರ್ಧಕ್ಕಿಂತಲೂ ಅಧಿಕ ಅಪರಾಧಿ ದೂರುಗಳು ದಳ್ಳುರಿ ಸಂಭವಿಸಿದ ಒಂದು ವರ್ಷದ ಒಳಗಾಗಿ ಯಾವುದೇ ವಿಚಾರಣೆಯಿಲ್ಲದೆ ಮುಚ್ಚಲ್ಪಟ್ಟವು. ಆದರೆ ಜಾತ್ಯತೀತ ಪ್ರಜಾಪ್ರಭುತ್ವವನ್ನು ರಕ್ಷಿಸಲು ಅಸಾಧಾರಣ ಮೈತ್ರಿಯೊಂದು ಸೃಷ್ಟಿಯಾಯಿತು, ಅದು ಕೇವಲ ಮಾನವಹಕ್ಕು ರಕ್ಷಕರನ್ನು ಒಳಗೊಂಡಿದ್ದಲ್ಲ, ಆದರೆ ನ್ಯಾಯವಾದಿ ಜೆಎಸ್ ವರ್ಮಾ ಅವರ ನೈತಿಕ ನಾಯಕತ್ವ ಹೊಂದಿರುವ ಮತ್ತು ಅವರ ಜೊತೆಗೆ ನ್ಯಾಯಾಧೀಶರುಗಳಾದ ರುಮಾ ಪೌಲ್ ಮತ್ತು ಅರಿಜಿತ್ ಪಸಾಯಟ್, ಸಾಹಸಿ ಪೊಲೀಸ್ ಅಧಿಕಾರಿ ರಾಹುಲ್ ಶರ್ಮಾ ಮತ್ತು ಝಕೀಯಾ ಜಾಫ್ರಿ ಮತ್ತು ಬಲ್ಕೀಸ್ ಬಾನುವಿನಂಥ ಎಲ್ಲಾ ಸಮಸ್ಯೆಗಳನ್ನು ಎದುರಿಸಿ ನ್ಯಾಯಕ್ಕಾಗಿ ಹೋರಾಡಿದ ಹಲವಾರು ಸಂತ್ರಸ್ತರ ಬೆಂಬಲದೊಂದಿಗೆ ಜೊತೆಯಾದ ರಾಷ್ಟ್ರೀಯ ಮಾನವಹಕ್ಕು ಮಂಡಳಿ. ಈ ಮೈತ್ರಿಯ ಫಲವಾಗಿ ವಿಚಾರಣೆಯಿಲ್ಲದೆ ಮುಚ್ಚಲ್ಪಟ್ಟಿದ್ದ ಎರಡು ಸಾವಿರ ಪ್ರಕರಣಗಳನ್ನು ರದ್ದುಪಡಿಸಲಾಯಿತು; ಕೆಲವು ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಕೆಳನ್ಯಾಯಾಲಯಗಳಿಗೆ ವಾಗ್ದಂಡನೆಯನ್ನು ನೀಡುತ್ತಾ ಕೇವಲ ಧ್ವನಿಮುದ್ರಣಗಳಂತೆ ವರ್ತಿಸದೆ ಪ್ರಜ್ಞಾಪೂರ್ವಕವಾಗಿ ಕಾರ್ಯಾಚರಿಸುವಂತೆ ಸೂಚಿಸಿತ್ತು. ಹೊರರಾಜ್ಯದ ಅಧಿಕಾರಿಗಳನ್ನು ಹೊಂದಿದ್ದ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾ ಯಿತು ಮತ್ತು ಕೆಲವು ಪ್ರಕರಣಗಳನ್ನು ಗುಜರಾತ್‌ನಿಂದ ಹೊರಗಿನ ನ್ಯಾಯಾಲಯಗಳಿಗೆ ವರ್ಗಾಯಿಸಲಾಯಿತು. ಆದರೂ 64 ಮಂದಿಯನ್ನು ಬಲಿಪಡೆದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ಬಗ್ಗೆ ಇತ್ತೀಚೆಗೆ ಹೊರಬಿದ್ದ ಎಸ್‌ಐಟಿ ವಿಶೇಷ ನ್ಯಾಯಾಲಯದ ತೀರ್ಪು ಪ್ರಸಕ್ತ ಆವರಿಸಿರುವ ಸಾಂಸ್ಥಿಕ ಪಕ್ಷಪಾತದ ವಾತಾವರಣದಲ್ಲಿ ಸಂಪೂರ್ಣ ನ್ಯಾಯಪಡೆಯಲು ಇರುವ ಸಾಧ್ಯತೆಯ ಮಿತಿಗಳನ್ನು ತೆರೆದಿಟ್ಟಿದೆ. ನ್ಯಾಯಾಲಯದ ವಿಶ್ಲೇಷಣೆಯನ್ನು ಒಪ್ಪುವುದಾದರೆ ಇದು ಗೋಧ್ರಾದಲ್ಲಿ ರೈಲಿನ ಬೋಗಿಗಳಿಗೆ ಬೆಂಕಿಹಚ್ಚಿ ಹಿಂದೂಗಳನ್ನು ಹತ್ಯೆ ಮಾಡಿದ ಕಾರಣದಿಂದ ಉದ್ರೇಕವಾಗಿದ್ದ ಗುಂಪಿನಲ್ಲಿದ್ದ ಹನ್ನೊಂದು ಮಂದಿ ಒಮ್ಮಿಂದೊಮ್ಮೆಲೆ ನಡೆಸಿದ ಹತ್ಯಾಕಾಂಡ. ಘಟನೆಯಲ್ಲಿ ಗುಂಪಿನಿಂದ ಸಜೀವ ದಹನಕ್ಕೊಳಪಟ್ಟ ಸಂಸದ ಎಹಸಾನ್ ಜಾಫ್ರಿ ಗುಂಡು ಹಾರಿಸಿದಾಗ ಈ ಗುಂಪು ಮತ್ತಷ್ಟು ಪ್ರಚೋದನೆಗೊಳಪಟ್ಟಿತು. ಇದರಲ್ಲಿ ಯಾವ ಹಂತದಲ್ಲೂ ಘಟನೆಯನ್ನು ಯೋಜಿಸಿದ ಅಥವಾ ಹತ್ಯಾಕಾಂಡ ನಡೆಸುವ ಪಿತೂರಿಯಿರಲಿಲ್ಲ ಮತ್ತು ಈ ಗುಂಪನ್ನು ಬಿಜೆಪಿ ನಾಯಕರು ಅಥವಾ ಪೊಲೀಸರು ಪ್ರಚೋದಿಸಲಿಲ್ಲ. ಜಾಫ್ರಿಯವರ ಗುಂಡು ಹಾರಾಟದಿಂದ ಪ್ರಚೋದನೆಗೊಂಡು ಹಿಂಸೆಗೆ ಮುಂದಾದ ಗುಂಪನ್ನು ತಡೆಯಲು ಅಥವಾ ಚದುರಿಸಲು ಸ್ಥಳದಲ್ಲಿದ್ದ ಇಪ್ಪತ್ತು ಪೊಲೀಸರ ಬಳಿ ಸರಿಯಾದ ಸಾಧನಗಳು ಇರಲಿಲ್ಲ. 14 ವರ್ಷಗಳ ವಿಚಾರಣೆಯ ವೇಳೆ ಆರೋಪಿಗಳು ಉತ್ತಮ ನಡವಳಿಕೆ ಹೊಂದಿದ್ದರು ಮತ್ತು ಸುಧಾರಿಸಲು ಮತ್ತು ಪುನರ್ವಸತಿಗೆ ಇನ್ನೊಂದು ಅವಕಾಶಕ್ಕೆ ಅರ್ಹರಾಗಿದ್ದರು. ಬದುಕುಳಿದವರ ಮತ್ತು ಹಲವು ನಾಗರಿಕ ತನಿಖೆಯ ಹೇಳಿಕೆ ಮತ್ತು ನ್ಯಾಯಾಧೀಶ ಪಿಬಿ ದೇಸಾಯಿಯವರ ಅಂತಿಮ ಮಾತಿನಲ್ಲಿ ಬಹಳ ವ್ಯತ್ಯಾಸವಿದೆ. ಗುಲ್ಬರ್ಗ್ ಸೊಸೈಟಿಯಂತಹ ದೊಡ್ಡಮಟ್ಟದ ಹತ್ಯಾಕಾಂಡ ನಡೆಸಲು ಸರಿಯಾದ ಯೋಜನೆ ಮತ್ತು ಶಸ್ತ್ರಾಸ್ತ್ರಗಳ ಅಗತ್ಯವಿದೆ. ಒಂದು ಯೋಜಿತ ಪಿತೂರಿಯಿಲ್ಲದಿದ್ದರೆ ಇಂತಹ ಹತ್ಯಾಕಾಂಡವನ್ನು ನಡೆಸಲು ಸಾಧ್ಯವೆ ಇಲ್ಲ. ಎಲ್ಲಾ ಕಡೆಗಳಲ್ಲೂ ಈ ಗುಂಪುಗಳನ್ನು ಬಿಜೆಪಿ, ವಿಎಚ್‌ಪಿ ಮತ್ತು ಬಜರಂಗದಳ ಮುನ್ನಡೆಸಿದ್ದವು. ರೈಲಿನಲ್ಲಿ ಹಿಂದೂಗಳನ್ನು ಹತ್ಯೆ ಮಾಡಿದ ವರದಿಯನ್ನು ಪ್ರಸಾರ ಮಾಡಿದ ರೀತಿ ಮತ್ತು ಅವರ ದೇಹಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ದಿದ್ದು ಈ ಗುಂಪುಗಳನ್ನು ಆಕ್ರೋಶಿತಗೊಳಿಸಿತ್ತು. ಅಲ್ಲಿ ಕಡಿಮೆ ಸಂಖ್ಯೆಯಲ್ಲಿ ಸರಿಯಾದ ಶಸ್ತ್ರಾಸ್ತ್ರಗಳನ್ನು ನೀಡದೆ ನಿಯೋಜಿಸಲಾಗಿದ್ದು ಕೇವಲ ಕಾಕತಾಳೀಯವಾಗಿರಲಿಲ್ಲ. ವರದಿಗಳ ಪ್ರಕಾರ ಎಹಸಾನ್ ಜಾಫ್ರಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೂ ಕೂಡಾ ಕರೆ ಮಾಡಿ ಸಹಾಯ ಯಾಚಿಸಿದ್ದರು ಆದರೆ ಅದು ಬರಲೇ ಇಲ್ಲ. ಈ ಎರಡು ಹೇಳಿಕೆಗಳು ಭಾರತದಲ್ಲಿ ಕೋಮು ಹಿಂಸೆ ಪದೇಪದೆ ನಡೆಯುತ್ತದೆ ಎಂಬುದಕ್ಕೆ ಎರಡು ಸಾಧ್ಯತೆಗಳನ್ನು ತೆರೆದಿಡುತ್ತದೆ. ಒಂದರ ಪ್ರಕಾರ ಧಾರ್ಮಿಕ ಅಲ್ಪಸಂಖ್ಯಾತರು ಈ ರೀತಿಯ ದಂಗೆಗಳಲ್ಲಿ ಅತೀಹೆಚ್ಚು ಸಾವನ್ನಪ್ಪಿದರೂ, ಅತ್ಯಾಚಾರ ಅಥವಾ ಲೂಟಿಗೊಳಪಟ್ಟರೂ, ಹಿಂದೂಗಳನ್ನು ರೈಲಿನಲ್ಲಿ ಬೆಂಕಿಹಚ್ಚಿ ಕೊಲ್ಲುವ, ದೇವಾಲಯಗಳನ್ನು ಧ್ವಂಸಮಾಡುವ, ಹಿಂದೂ ಹೆಣ್ಮಕ್ಕಳ ಮೇಲೆ ಲೈಂಗಿಕ ಕಾಮನೆ ತೋರಿ ಸುವ, ಹಸುಗಳನ್ನು ಕೊಲ್ಲುವ, ಮತಾಂತರಮಾಡುವ ಮತ್ತು ದಾಳಿ ನಡೆಸುವ ಗುಂಪಿನ ಮೇಲೆ ಗುಂಡು ಹಾರಿಸುವ ಮೂಲಕ ಹಿಂಸೆಗೆ ಪ್ರಚೋದನೆ ನೀಡುವವರೂ ಅವರೇ. ಇದು ತಕ್ಷಣದ ಹಿಂಸೆಗೆ ದಾರಿ ಮಾಡಿಕೊಡುತ್ತದೆ ಮತ್ತು ಪೊಲೀಸ್ ಇಲಾಖೆ ದಂಗೆಯನ್ನು ತಡೆಯಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸಿದರೂ ಹಿಂದೂಗಳ ಗುಂಪಿನ ಪ್ರಮಾಣ ಬಹಳ ದೊಡ್ಡದಾಗಿದ್ದ ಕಾರಣ ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ಇನ್ನೊಂದು ಹೇಳಿಕೆಯ ಪ್ರಕಾರ ಕೋಮುದಳ್ಳುರಿಯಲ್ಲ ಕೇವಲ ವ್ಯವಸ್ಥಿತವಾಗಿ ಯೋಜಿಸಿದ ಕೋಮು ಹತ್ಯಾಕಾಂಡ. ಮತ್ತು ಆಡಳಿತವು ಸೇನೆಯನ್ನು ಕರೆಸುವ ಮೂಲಕ ಯಾವುದೇ ರೀತಿಯ ದಂಗೆಯನ್ನು ಯಾವುದೇ ಮಟ್ಟದಲ್ಲಿದ್ದರೂ ಕೇವಲ ಇಪ್ಪತ್ತನಾಲ್ಕು ಗಂಟೆಗಳ ಒಳಗೆ ನಿಯಂತ್ರಿಸಬಹುದು. ಕಾರ್ಯಕರ್ತರು ಆರೋಪಮುಕ್ತರಲ್ಲ, ಆದರೆ ದ್ವೇಷಾಪರಾಧದಲ್ಲಿ ಅವರ ಪಾಲು ಇಂಥಾ ಹತ್ಯಾಕಾಂಡವನ್ನು ಸಂಘಟಿಸುವ ಸಂಸ್ಥೆಗಳು ಮತ್ತು ರಾಜಕೀಯ ನಾಯಕರು ಹಾಗೂ ಯಾವುದೇ ಕ್ರಮಕೈಗೊಳ್ಳದೆ ಇಂಥಾ ಘಟನೆಗಳಿಗೆ ಪ್ರಚೋದನೆ ನೀಡುವ ಪೊಲೀಸ್ ಮತ್ತು ನಾಗರಿಕ ಅಧಿಕಾರಿಗಳಷ್ಟು ಇವರ ಪಾಲಿಲ್ಲ. ನ್ಯಾಯಾಧೀಶ ದೇಸಾಯಿಯವರಿಂದ ಶಿಕ್ಷೆಗೊಳಪಟ್ಟವರು ಕೇವಲ ಈ ಕಾರ್ಯಕರ್ತರು, ಇವರು ನಿಜವಾಗಿಯೂ ಇನ್ನೊಂದು ಅವಕಾಶಕ್ಕೆ ಅರ್ಹರಾಗಿದ್ದಾರೆ. ಆದರೆ ನ್ಯಾಯಾಲಯ ಅವರನ್ನು ಸಂಪೂರ್ಣವಾಗಿ ನಿರ್ದೋಷಿಗಳೆಂದು ಬಿಡುಗಡೆ ಮಾಡಿದೆ. ಎಹಸಾನ್ ಅವರ ವಿಧವೆ ಪತ್ನಿ ಝಕೀಯಾ ಜಾಫ್ರಿ ನ್ಯಾಯಾಲಯದ ಈ ತೀರ್ಪಿನಿಂದ ಅಸಂತುಷ್ಟರಾಗಿದ್ದು ‘‘ನನ್ನ ಗಂಡ ಒಬ್ಬ ಉತ್ತಮ ಮತ್ತು ಸಭ್ಯ ವ್ಯಕ್ತಿಯಾಗಿದ್ದರು. ನಾನು ನ್ಯಾಯಕ್ಕಾಗಿ ನನ್ನ ಹೋರಾಟವನ್ನು ಅವರಿಗಾಗಿ ಮತ್ತು ಅವರಂತಹ ಸಾವಿರಾರು ಮಂದಿಗಾಗಿ ಮುಂದುವರಿಸುತ್ತೇನೆ ಎಂದು ಘೋಷಿಸಿದ್ದಾರೆ.
ಕೃಪೆ: scroll.in