ಇದನ್ನು ಓದಿದರೆ ನೀವು ಅಪ್ಪಿತಪ್ಪಿಯೂ ನಿಮ್ಮ ಸ್ಮಾರ್ಟ್ ಫೋನ್ ಪಕ್ಕದಲ್ಲಿಟ್ಟು ಮಲಗುವುದಿಲ್ಲ!
ತಮ್ಮ ಮೊಬೈಲ್ ಡಿವೈಸ್ಗಳನ್ನು ಪಕ್ಕದಲ್ಲಿಟ್ಟು ಮಲಗುವವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ ಸಂಶೋಧಕರು. ತಮ್ಮ ಟ್ರಾನ್ಸಿಯೆಂಟ್ ಸ್ಮಾರ್ಟ್ಫೋನನ್ನು ಬಳಿಯಲ್ಲಿಟ್ಟುಕೊಂಡು ಮಲಗಿದ ಇಬ್ಬರು ಮಹಿಳೆಯರಿಗೆ ಕುರುಡುತನ ಬಂದಿರುವುದನ್ನು ಸಂಶೋಧನೆ ಬಹಿರಂಗಪಡಿಸಿದೆ. ಕತ್ತಲಲ್ಲಿ ಸ್ಮಾರ್ಟ್ ಫೋನ್ ನೋಡಿದ ಕಾರಣ ಇವರ ಒಂದು ಕಣ್ಣು ಕುರುಡಾಗಿದೆ.
22 ವರ್ಷದ ಇಂಗ್ಲೆಂಡಿನ ಮಹಿಳೆಗೆ ಮಲಗುವ ಮೊದಲು ಸ್ಮಾರ್ಟ್ ಫೋನ್ ನೋಡುವ ಅಭ್ಯಾಸವಿತ್ತು. ಆಕೆ ತನ್ನ ಎಡಭಾಗದಲ್ಲಿ ಮಲಗುತ್ತಿದ್ದಳು ಮತ್ತು ತನ್ನ ಬಲಕಣ್ಣಿನಿಂದ ಸ್ಕ್ರೀನ್ ಕಡೆಗೆ ನೋಡುತ್ತಿದ್ದಳು. ಆಕೆಯ ಎಡ ಕಣ್ಣು ದಿಂಬಿನ ಹಿಂದೆ ಇರುತ್ತಿತ್ತು ಎಂದು ವರದಿ ಹೇಳಿದೆ. ಮತ್ತೊಬ್ಬ 40 ವರ್ಷದ ಮಹಿಳೆಗೂ ಅದೇ ಸಮಸ್ಯೆ ಕಂಡುಬಂದಿದೆ. ಬೆಳಗಿನ ಜಾವವಾಗುವ ಮೊದಲು ಏಳುತ್ತಿದ್ದ ಮಹಿಳೆ ಸ್ಮಾರ್ಟ್ಫೋನ್ನಲ್ಲಿ ಸುದ್ದಿಗಳನ್ನು ಓದಿಯೇ ಮಂಚದಿಂದ ಮೇಲೇಳುತ್ತಿದ್ದಳು. ವರ್ಷದವರೆಗೆ ಹೀಗೆ ಕತ್ತಲಲ್ಲೇ ಸ್ಮಾರ್ಟ್ ಫೋನ್ ನೋಡಿದ ಕಾರಣ ಆಕೆಯ ಕಣ್ಣಿನ ಕಾರ್ನಿಯಗೆ ಗಾಯವಾಗಿದೆ. ಸ್ಮಾರ್ಟ್ಫೋನ್ ಖರೀದಿಸಿ ಈ ಅಭ್ಯಾಸ ತಂದುಕೊಂಡ ನಂತರವೇ ಆಕೆಯ ಕಣ್ಣಿಗೆ ಸಮಸ್ಯೆಯಾಗಿರುವುದು ಎಂದು ಸಂಶೋಧನೆ ಹೊರಗೆಡವಿದೆ. ಅವರು ತಮ್ಮ ಸ್ಮಾರ್ಟ್ಫೋನ್ಗಳನ್ನು ಮಂಚದ ಮೇಲೆ ಮಲಗಿಯೇ ನೋಡುತ್ತಿದ್ದರು. ಹೀಗಾಗಿ ಒಂದೇ ಕಣ್ಣಿನಲ್ಲಿ ನೋಡಿದ್ದರು ಎಂದು ನೇತ್ರ ತಜ್ಞ ಓಮರ್ ಮಹ್ರೂ ಹೇಳಿದ್ದಾರೆ. ಎರಡೂ ಪ್ರಕರಣಗಳಲ್ಲಿ ಕಣ್ಣಿಗೆ ಬೇರಾವ ಸಮಸ್ಯೆಯೂ ಆಗಿಲ್ಲ. ಒಂದು ರೆಟಿನಾ ಬೆಳಕಿಗೆ ಹೊಂದಿಕೊಂಡಿದ್ದರೆ ಮತ್ತೊಂದು ಕತ್ತಲಿಗೆ ಹೊಂದಿಕೊಂಡಿದೆ. ರೆಟಿನಾ ಬಹಳ ವಿಶಿಷ್ಟವಾದುದು. ಅದು ವಿಭಿನ್ನ ಬೆಳಕಿನ ಮಟ್ಟಕ್ಕೆ ಹೊಂದಿಕೊಳ್ಳುತ್ತದೆ. ಅದು ಕ್ಯಾಮರಾಗಿಂತಲೂ ಹೆಚ್ಚಾಗಿ ಬೆಳಕಿಗೆ ಹೊಂದಿಕೊಳ್ಳುತ್ತದೆ ಎಂದು ಮಹ್ರೂ ಹೇಳಿದ್ದಾರೆ.
ಯಾರಾದರೂ ಕೋಣೆಯನ್ನು ಬಿಟ್ಟು ಸ್ವಲ್ಪ ಕಡಿಮೆ ಬೆಳಕಿರುವ ಕೋಣೆಗೆ ಹೋದ ಕೂಡಲೇ ನಿಧಾನವಾಗಿ ಅದಕ್ಕೆ ಹೊಂದಿಕೊಳ್ಳುತ್ತದೆ. ಹಾಗೆಯೇ ಹೊರಾಂಗಣದಿಂದ ತಕ್ಷಣ ಒಳಗೆ ಬರುವಾಗ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಈ ಎರಡು ಮಹಿಳೆಯರ ಅನುಭವ ಅಪರೂಪದ್ದಾಗಿದೆ. ಅದರಲ್ಲಿ ಬದಲಾವಣೆಯನ್ನು ಗುರುತಿಸಲು ಸ್ಪಷ್ಟವಾಗಿ ಸಾಧ್ಯವಾಗಿದೆ. ಈ ಸಮಸ್ಯೆಯ ಆಳಕ್ಕೆ ಹೋಗಲು ಸಂಶೋಧಕರು ಇಬ್ಬರು ರೋಗಿಗಳನ್ನು ವಿಭಿನ್ನ ಸ್ಮಾರ್ಟ್ ಫೋನನ್ನು ಎಡ ಕಣ್ಣಿನಿಂದಲೇ ನೋಡಲು ಹೇಳಿದ್ದರು ಮತ್ತು ಬಲ ಕಣ್ಣನ್ನು ಹಲವು ಸಂದರ್ಭಗಳಲ್ಲಿ ಪ್ರತ್ಯೇಕಿಸಿದ್ದರು. ಆಗ ಕಣ್ಣು ತಾತ್ಕಾಲಿಕವಾಗಿ ಕುರುಡಾಗುವುದು ಕಂಡುಬಂದಿದೆ. ಬೆಳಕು ಹೆಚ್ಚಿರುವ ಸ್ಕ್ರೀನನ್ನು ನೋಡುವಾಗ ಇದು ಕಂಡುಬಂದಿದೆ. ಈ ಬಗ್ಗೆ ಹೆಚ್ಚಿನ ವಿವರ ತಿಳಿದುಕೊಳ್ಳಲು ಮಹ್ರೂ ಕತ್ತಲೆ ಕೋಣೆಗೆ ಹೋಗಿ ಒಂದು ಕಣ್ಣನ್ನು ಮುಚ್ಚಿಕೊಂಡು ಸ್ಮಾರ್ಟ್ಫೋನನ್ನು 20 ನಿಮಿಷ ನೋಡಿ ಸ್ಕ್ರೀನ್ ಆಫ್ ಮಾಡಿದರು. ಸ್ವಲ್ಪ ವಿಚಿತ್ರ ಎಂದು ಅನಿಸಿತ್ತು. ಏನಾಗುತ್ತದೆ ಎಂದು ತಿಳಿಯದೆ ಇದ್ದರೆ ಬಹಳ ಅಪಾಯಕಾರಿ ಎನ್ನುತ್ತಾರೆ ಮಹ್ರೂ. ಹೆಚ್ಚು ಬೆಳಕಿಲ್ಲದಾಗ ಫ್ಲಾಷ್ ಬೀಳುವಾಗ ರೆಟಿನಾ ಸ್ಕ್ರೀನ್ ನೋಡುತ್ತದೆ ಮತ್ತು ಹೊಸ ಬೆಳಕಿನ ಸೆಟ್ಟಿಂಗ್ಗಳನ್ನು ಹೊಂದಿಕೊಳ್ಳಲು ಧೀರ್ಘ ಸಮಯ ತೆಗೆದುಕೊಳ್ಳುತ್ತದೆ. ಮಹ್ರೂ ಪ್ರಕಾರ ಹಲವು ಇತರ ರೋಗಿಗಳು ಕೂಡ ಸ್ಮಾರ್ಟ್ಫೋನ್ ಬಳಕೆಯ ಕಾರಣ ಇದೇ ಅನುಭವ ಪಡೆದಿದ್ದಾಗಿ ಹೇಳಿದ್ದಾರೆ.
ಕೃಪೆ: timesofindia.indiatimes.com