ಕೇರಳದ ಪ್ರಸಿದ್ಧ ಕವಿ, ನಾಟಕಾಚಾರ್ಯ ಕಾವಾಲಂ ನಾರಾಯಣ ಪಣಿಕ್ಕರ್ ನಿಧನ
ತಿರುವನಂತಪುರಂ,ಜೂನ್ 27: ಸರಳ ಸಂಭಾಷಣೆಗಳಿಂದ ಪ್ರೇಕ್ಷಕರ ಮನಗೆದ್ದ ನಾಟಕಕಾರ ಕವಿ, ಗೀತರಚನಾಕಾರ ಕಾವಾಲಂ ನಾರಾಯಣ ಪಣಿಕ್ಕರ್ ತಿರುವನಂತಪುರಂ ತನ್ನ ಮನೆಯಲ್ಲಿ ನಿಧನರಾಗಿದ್ದಾರೆ. ಮಳೆಯಾಲಂ ಸಾಂಸ್ಕೃತಿಕ ರಂಗದಲ್ಲಿ ಕಳೆದ ಏಳು ದಶಕಗಳಿಂದ ಅವರು ಸಕ್ರಿಯರಾಗಿದ್ದರು. ಕೆಲವು ದಿವಸಗಳಿಂದ ಅನಾರಾಗ್ಯಪೀಡಿತರಾಗಿದ್ದ ಕಾವಾಲಂರಿಗೆ ನಿಧನರಾಗುವ ವೇಳೆಗೆ 88 ವರ್ಷ ವಯಸ್ಸಾಗಿತ್ತು. ಶಾರದಾ ಮಣಿ ಮೃತರ ಪತ್ನಿ, ಹಿನ್ನೆಲೆ ಗಾಯಕ ಕಾವಾಲಂ ಶ್ರೀಕುಮಾರ್, ದಿವಂಗತ ಕಾವಾಲಂ ಹರಿಕೃಷ್ಣನ್ ಪುತ್ರರಾಗಿದ್ದಾರೆ. ಮೃತದೇಹ ಸಂಸ್ಕಾರ ಕಾರ್ಯವು ರಾಜ್ಯಸರಕಾರದ ಅಧಿಕೃತಗೌರವಗಳೊಂದಿಗೆ ಮಂಗಳವಾರ ನಡೆಯಲಿದೆ. ಅವರು ಪ್ರಸಿದ್ಧ ಚಾಲಿಯಲ್ ಮನೆತನದಲ್ಲಿ 1928ರಲ್ಲಿ ಜನಿಸಿದ್ದರು. ಕೆಲವು ಕಾಲ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು. 1961ರಲ್ಲಿ ಕೇರಳ ಸಂಗೀತ ನಾಟಕ ಅಕಾಡಮಿ ಕಾರ್ಯದರ್ಶಿಯಾಗಿ ಆಯ್ಕೆ ಆಗಿದ್ದ ಅವರು ಬಳಿಕ ಹತ್ತುವರ್ಷ ಕಾಲ ಆ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು. 1980ರಲ್ಲಿ ಸೋಪಾನಂ ಎಂಬ ರಂಗಕಲೆ ಅಧ್ಯನ ಕೇಂದ್ರವನ್ನು ಸ್ಥಾಪಿಸಿದರು. ನೆಡಿಮುಡಿ ವೇಣು ಮುಂತಾದ ಪ್ರಸಿದ್ಧ ನಟರ ಬೆಳವಣಿಗೆಯಲ್ಲಿ ಈ ಕೇಂದ್ರ ಪ್ರಮುಖ ಪಾತ್ರವಹಿಸಿತ್ತು.
ಮಳೆಯಾಲಂ ಸಿನೆಮಾ ರಂಗಕ್ಕೆ ಸರಳ ಪದ್ಯರಚನೆ ಮಾಡಿಕೊಟ್ಟು ಜನಪ್ರಿಯರಾಗಿದ್ದರು. ಎರಡು ಸಲ ಅತ್ಯುತ್ತಮ ಹಾಡು ರಚನಕಾರ ರಾಜ್ಯಪ್ರಶಸ್ತಿ ಅವರನ್ನು ಅರಸಿ ಬಂದಿತ್ತು.ಮೂವತ್ತಕ್ಕೂ ಅಧಿಕ ನಾಟಕಗಳನ್ನು ಬರೆದಿದ್ದಾರೆ.