ಸಿಎಂಎಂ ಅರೆನಾ-ಮೆಗಾಸ್ಟೋರ್ನಲ್ಲಿ ‘ಸೋಫಾ ಕಾರ್ನಿವಲ್-2016’
ಮಂಗಳೂರು, ಜು.1: ಉರ್ವ, ಚಿಲಿಂಬಿಯ ‘ಸಿಎಂಎಂ ಅರೆನಾ-ಮೆಗಾಸ್ಟೋರ್’ನಲ್ಲಿ ಜು.1ರಿಂದ 7ರತನಕ ‘ಸೋಫಾ ಕಾರ್ನಿವಲ್-2016’ ಏರ್ಪಡಿಸಲಾಗಿದೆ. ಊನಾ, ಅರೆನಾ ಹಾಗೂ ಫರ್ನಿಟೆಕ್ ಬ್ರಾಂಡಿನ ಇತ್ತೀಚಿನ ವಿನ್ಯಾಸದ ಉತ್ತಮ ಸೋಫಾಗಳು, ರಿಕ್ಲೈನರ್ಗಳು ಹಾಗೂ ಲಾಂಜ್ಗಳ 50ಕ್ಕಿಂತಲೂ ಅಧಿಕ ಮಾದರಿಗಳು ಈ ಪ್ರದರ್ಶನದಲ್ಲಿರಲಿವೆ.
ಜು.2 ಮತ್ತು 3ರಂದು ವಿಶೇಷ ಆಕರ್ಷಣೆಯಾಗಿ ಮಕ್ಕಳಿಗೆ ತಮ್ಮ ಮೆಚ್ಚಿನ ಕಾರ್ಟೂನ್ ಸ್ಟಾರ್ಗಳನ್ನು ಭೇಟಿಯಾಗುವ ಅವಕಾಶವಿದೆ. ರಮಝಾನ್ಗಾಗಿ ಹಲವು ವಿಶೇಷ ಸ್ಪಾಟ್ ಆಫರ್ಗಳು ಲಭ್ಯವಿವೆ. ಸಿಎಂಎಂ ಅರೆನಾ-ಮೆಗಾಸ್ಟೋರ್ ಸಂಸ್ಥೆಯು 45,000 ಚದರ ಅಡಿಗಳ ವಿಸ್ತೀರ್ಣದ ವಿಶಾಲವಾದ ಪಾರ್ಕಿಂಗ್ ಸ್ಥಳಾವಕಾಶವಿರುವ ಮನೆ ಮತ್ತು ಕಚೇರಿಗಳಿಗೆ ಉಪಯುಕ್ತವಾಗುವಂತಹ ಎಲ್ಲಾ ಪೀಠೋಪಕರಣಗಳು ದೊರಕುವ ಒಂದೇ ಕೇಂದ್ರವಾಗಿದೆ. ಗೋವಾ, ಕೋಲ್ಹಾಪುರ ಹಾಗೂ ಮಂಗಳೂರುಗಳಲ್ಲಿ 10 ಶಾಖೆಗಳನ್ನು ಹೊಂದಿದೆ.
ಅಲ್ಲದೆ ಈ ಮಳಿಗೆಯಲ್ಲಿ ಸಿಎಂಎಂ ಅರೆನಾ ಬ್ರಾಂಡ್ನ ಮನೆ ಪೀಠೋಪಕರಣ ಗಳು-ಬೆಡ್ರೂಂ ಸೆಟ್ಸ್, ಪ್ರಾಚೀನ-ಆಧುನಿಕ ವಿನ್ಯಾಸದ ಆಕರ್ಷಕ ಮೇಜು ಹಾಗೂ ವಾರ್ಡ್ರೋಬ್ಗಳು, ಅಪೂರ್ವ ವಿನ್ಯಾಸದ ಮರ-ಲೆದರ್-ಫ್ಯಾಬ್ರಿಕ್-ಪಿವಿಸಿ ಅಥವಾ ಇತರ ವಿವಿಧ ಸಾಮಗ್ರಿಗಳ ಸಂರಚನೆಯ, ಕಲಾಚತುರತೆಯ, ಗಾತ್ರದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲು ಸಾಧ್ಯವಿರುವ ಸೋಫಾಗಳು, ಡೈನಿಂಗ್ ಸೆಟ್ಗಳು, ಸೇಫ್ಗಳು, ಡೆಸ್ಕ್ನಿಂದ ಹಿಡಿದು ಕಾನ್ಫರೆನ್ಸ್ ಸೆಟಪ್ಗಳು, ರಿಸೆಪ್ಶನ್ ಟೇಬಲ್ಗಳು, ಸ್ಟಡಿ ಡೆಸ್ಕ್, ಫಿಲ್ಲಿಂಗ್ ಕ್ಯಾಬಿನೆಟ್ಗಳು, ಪೆಡೆಸ್ಟಾಲ್ಗಳು, ಸ್ಟೋರೇಜ್, ಓಪನ್ ಆಫೀಸ್ ಮೊಡ್ಯುಲ್ಗಳು ಹಾಗೂ ಕುರ್ಚಿಗಳಂತಹ ಯೋಗ್ಯ, ವಿವಿಧ ಶ್ರೇಣಿಯ ಕಚೇರಿ ಪೀಠೋಪಕರಣಗಳು ಇಲ್ಲಿ ಲಭ್ಯವಿದೆ. ಇಲೆಕ್ಟ್ರಾನಿಕ್ ಹಾಗೂ ಇತರ ಅಪ್ಲಾಯನ್ಸ್, ಯೋಗ್ಯ ಬೆಲೆ ಹಾಗೂ ಉತ್ತಮ ಬ್ರಾಂಡ್ಗಳು, ಅಗ್ರ ಬ್ರಾಂಡ್ಗಳ ಸೆಟ್ಗಳು, ಮೊಡ್ಯುಲರ್ ಕಿಚನ್ಗಳು ಲಭ್ಯವಿವೆ.
‘ಊನಾ’ ಬ್ರಾಂಡಿನ ಗೃಹಾಲಂಕಾರಿಕ ಸಾಮಗ್ರಿಗಳು, ಹೋಮ್ ಫರ್ನಿಶಿಂಗ್, ಟೇಬಲ್ವೇರ್ ಮುಂತಾದುವುಗಳ ಅತ್ಯುತ್ತಮ ಗುಣಮಟ್ಟದ ಸರಕುಗಳು ಲಭ್ಯವಿವೆ. ಕ್ರೊಕರಿ, ಕಲ್ಟರಿ, ಗ್ಲಾಸ್ವೇರ್, ಬೆಡ್ ಲಿನೆನ್, ನ್ಯಾಪ್ಕಿನ್ಸ್, ಕ್ಯಾಂಡಲ್ಸ್, ಬಾಸ್ಕೆಟ್ಸ್, ಮಿರರ್ಸ್ ಮತ್ತು ಇನ್ನಿತರ ಗೃಹೋಪಯೋಗಿ ವಸ್ತುಗಳು, ಇಲೆಕ್ಟ್ರಿಕಲ್ಸ್ ಹಾಗೂ ಲೈಟಿಂಗ್ಗಳು ದೊರೆಯುವಂತಹ ಅತ್ಯುತ್ತಮವಾದ ಮಳಿಗೆಯಾಗಿದೆ. ಆಧುನಿಕ ವಿನ್ಯಾಸಗಳ ಲೋಹ-ಒರ್ನೆಟ್ ಕ್ರಿಸ್ಟಲ್ಗಳ ಲ್ಯಾಂಪ್ಗಳು, ಶೇಡ್ಗಳು, ವಾಲ್ ಫಿಟ್ಟಿಂಗ್ಗಳು, ಪೆಂಡೆಂಟ್ ಲೈಟ್ಗಳು, ಶ್ಯಾಂಡಿಲಿಯರ್ಗಳು ಲಭ್ಯವಿದೆ. ಮನೆಯನ್ನು ಮಾತ್ರವಲ್ಲ ಪೀಠೋಪಕರಣಗಳನ್ನು ಶುಚಿಯಾಗಿಡಲು ಮತ್ತು ಹೊಳೆಯುವಂತೆ ಮಾಡುವ ಸಾಮಗ್ರಿಗಳು ಇಲ್ಲಿ ದೊರೆಯುತ್ತವೆ.
ಹೆಚ್ಚಿನ ಮಾಹಿತಿಗಾಗಿ www.cmmarena.com, sm.mangalore@cmmgroup.inನ್ನು ಸಂಪರ್ಕಿ ಸಬಹುದು ಎಂದು ಪ್ರಕಟನೆ ತಿಳಿಸಿದೆ.