ಕೇಂದ್ರ ನೌಕರರ ವೇತನ ಏರಿಕೆ, ಆರ್ಥಿಕತೆಗೆ ವರದಾನವೇ?
ಏಳನೆ ವೇತನ ಆಯೋಗವು ಶಿಾರಸು ಮಾಡಿದ್ದ ವೇತನ ಏರಿಕೆಯು ದೇಶದ ಆರ್ಥಿಕತೆಗೆ ಎಷ್ಟು ಲಾಭದಾಯಕವೆಂಬ ಬಗ್ಗೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂದಿದೆ. ಕೇಂದ್ರ ಸರಕಾರವು ಈ ಶಿಾರಸುಗಳನ್ನು ಅನುಮೋದಿಸಿದ್ದು, ನೂತನ ವೇತನ ಪರಿಷ್ಕರಣೆಯು ತಕ್ಷಣವೇ ಜಾರಿಗೆ ಬರುವಂತೆ ಆದೇಶಿಸಿದೆ ಹಾಗೂ ಇದರಿಂದ ದೇಶದ ಆರ್ಥಿಕತೆಗೆ ಲಾಭವಾಗಲಿದೆಯೆಂಬ ಆಶಾವಾದವನ್ನು ವ್ಯಕ್ತಪಡಿಸಿದೆ.
ಒಂದು ಲೆಕ್ಕಾಚಾರದ ಪ್ರಕಾರ ಕೇಂದ್ರ ನೌಕರರ ವೇತನಕ್ಕಾಗಿ ಸರಕಾರಕ್ಕೆ ತಗಲುತ್ತಿರುವ ವೆಚ್ಚದ ಪ್ರಮಾಣವು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗಿದೆ ಹಾಗೂ ಬಹುತೇಕ ಇಲಾಖೆಗಳಲ್ಲಿ ಅಗತ್ಯಕ್ಕಿಂತ ಕಡಿಮೆ ಸಂಖ್ಯೆಯ ಸಿಬ್ಬಂದಿಯಿದ್ದಾರೆ. ಉದಾಹರಣೆಗೆ, ಕೇಂದ್ರ ಸರಕಾರದ ನೌಕರವರ್ಗದ ಸಂಖ್ಯಾಬಲವು ಕಂದಾಯ ಇಲಾಖೆಯಲ್ಲಿ ಶೇ. 45.5, ಆರೋಗ್ಯ ಇಲಾಖೆಯಲ್ಲಿ ಶೇ. 27.6, ರೈಲ್ವೆಯಲ್ಲಿ ಶೇ. 15.2ರಷ್ಟು ಕಡಿಮೆಯಿದೆ. ಅಷ್ಟೇಕೆ ಕೇಂದ್ರ ಗೃಹ ಸಚಿವಾಲಯದಲ್ಲಿ ಕೇವಲ ಶೇ.7.2ರಷ್ಟು ಸಿಬ್ಬಂದಿ ಸಂಖ್ಯೆಯನ್ನು ಹೊಂದಿರುವುದು ನಮ್ಮ ವ್ಯವಸ್ಥೆಯಲ್ಲಿನ ಲೋಪವನ್ನು ಎತ್ತಿ ತೋರಿಸುತ್ತದೆ. ತೆರಿಗೆಯನ್ನು ಸಂಗ್ರಹಿಸುವುದೇ ಸರಕಾರದ ಮುಖ್ಯ ಕೆಲಸವಾಗಿದೆ. ಹೀಗೆ ತೆರಿಗೆಯ ರೂಪದಲ್ಲಿ ಸಂಗ್ರಹವಾದ ಹಣವನ್ನು ಎಲ್ಲಾ ಪ್ರಜೆಗಳ ಪ್ರಯೋಜನಕ್ಕಾಗಿ ಬಳಸಲಾಗುತ್ತದೆಯೆಂಬುದು ಎಲ್ಲರಿಗೂ ತಿಳಿದಿದೆ. ಆದರೆ ಈ ಅಂಕಿಅಂಶಗಳನ್ನು ಕಂಡಾಗ ಸರಕಾರವು ತನ್ನ ಮುಖ್ಯ ವ್ಯವಹಾರವಾದ ಕಂದಾಯ ಸಂಗ್ರಹದ ಬಗ್ಗೆಯೂ ತೀವ್ರ ನಿರ್ಲಕ್ಷ ವಹಿಸಿರುವುದು ಸ್ಪಷ್ಟವಾಗುತ್ತದೆ.
ಒಂದು ಕೈಯಿಂದ ಕಸಿದು, ಇನ್ನೊಂದು ಕೈಗೆ ದಾನ
ಸರಕಾರದ ಸಿಬ್ಬಂದಿಗೆ ಅಕ ವೇತನ ನೀಡಿಕೆಯಿಂದ ಆರ್ಥಿಕತೆಗೆ ಲಾಭವೆಂಬ ಕೆಲವು ಉನ್ನತ ಅಕಾರಿಗಳ ತರ್ಕವು ಅತ್ಯಂತ ಅಸಂಬದ್ಧವಾದುದಾಗಿದೆ. ಉನ್ನತ ಸ್ಥಾನಗಳಲ್ಲಿನ ನಮ್ಮ ನೀತಿ ನಿರೂಪಕರ ಚಿಂತನಾಲಹರಿಯು ಎಷ್ಟೊಂದು ತಿಳಿಗೇಡಿತನದಿಂದ ಕೂಡಿದೆಯೆಂಬುದನ್ನು ಈ ಹೇಳಿಕೆಯು ತೋರಿಸಿಕೊಟ್ಟಿದೆ. ಈ ತರ್ಕದ ಪ್ರಕಾರ ಒಂದು ವೇಳೆ ವೇತನ ಏರಿಕೆಯು ಅಕವಾದಲ್ಲಿ, ಒಟ್ಟು ಆಂತರಿಕ ಉತ್ಪನ್ನ(ಜಿಡಿಪಿ) ಕೂಡಾ ಹೆಚ್ಚಾಗಲಿದೆಯೆಂದಾಯಿತು.
ಆದರೆ ಜಿಡಿಪಿಯನ್ನು ಸೃಷ್ಟಿಸದಿದ್ದರೂ, ಅತ್ಯಂತ ಆವಶ್ಯಕವಾದ ರಸ್ತೆಗಳು, ವಿದ್ಯುತ್ ಸ್ಥಾವರಗಳು, ಶಾಲೆಗಳು ಹಾಗೂ ಆಸ್ಪತ್ರೆಗಳಂತಹ ಅತ್ಯಂತ ಆವಶ್ಯಕತೆಯ ಮೂಲಸೌಕರ್ಯಗಳು ಹಾಗೂ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣ ನಿರಾಕರಿಸಿದಲ್ಲಿ ಎಂತಹ ಪರಿಸ್ಥಿತಿ ಉದ್ಭವಿಸಬಹುದೆಂದು ನೀವೇ ಯೋಚಿಸಿ. ಅಕ ವೇತನದಿಂದ ಅದನ್ನು ಪಡೆಯುವವರಿಗಷ್ಟೇ ಪ್ರಯೋಜನವಾದೀತು.
ವೇತನ ಏರಿಕೆಯಿಂದ ಈಗ ಕೇಂದ್ರ ಸರಕಾರದ ನೌಕರರಿಗೆ ಮಾತ್ರವೇ ಪ್ರಯೋಜನವಾಗಿದೆ. ಶೀಘ್ರದಲ್ಲೇ ಎಲ್ಲಾ ರಾಜ್ಯಗಳು ಹಾಗೂ ಸಾರ್ವಜನಿಕರಂಗದ ಘಟಕಗಳು ಹಾಗೂ ಭಾರತೀಯ ಕೈಗಾರಿಕಾ ಒಕ್ಕೂಟ ಮತ್ತು ಭಾರತೀಯ ವಾಣಿಜ್ಯ ಮಂಡಳಿಯ ಸದಸ್ಯರು ಕೂಡಾ ಇದೇ ದಾರಿಯನ್ನು ಅನುಸರಿಸಲಿದ್ದಾರೆ. (ಒಟ್ಟು 2.30 ಕೋಟಿ ನೌಕರರು). ಕೇಂದ್ರ ಸರಕಾರ ನೀಡಿರುವ ಸಂದೇಶವನ್ನು ಸ್ಪಷ್ಟವಾಗಿ ಅರಿತುಕೊಂಡಿರುವ ಭಾರತೀಯ ಕೈಗಾರಿಕಾ ಒಕ್ಕೂಟ ಹಾಗೂ ಭಾರತೀಯ ವಾಣಿಜ್ಯ ಮಂಡಳಿಯ ಒಕ್ಕೂಟದ ಸದಸ್ಯರು, ವೇತನ ಏರಿಕೆಯಿಂದ ಖರೀದಿ ಪ್ರಮಾಣವು ಏರಿಕೆಯಾಗುವ ನಿರೀಕ್ಷೆಯಿಂದ ಅವರೂ ಹರ್ಷಚಿತ್ತರಾಗಿದ್ದಾರೆ.
ಖ್ಯಾತ ಕೈಗಾರಿಕಾ ಹಾಗೂ ಬ್ಯಾಂಕಿಂಗ್ ವಿಶ್ಲೇಷಕರು ಕೂಡಾ ಸರಕಾರದ ವೇತನ ಪರಿಷ್ಕರಣೆಯ ನಿರ್ಧಾರಕ್ಕೆ ಜೈ ಎಂದಿದ್ದಾರೆ. ಈ ನಡೆಯಿಂದಾಗಿ, ಆರ್ಥಿಕತೆಯಲ್ಲಿ ಖರೀದಿಗೆ ಉತ್ತೇಜನ ದೊರೆಯಲಿದ್ದು, ದೇಶದ ಜಿಡಿಪಿಯಲ್ಲಿ ಏರಿಕೆಯಾಗಲಿದೆಯೆಂದು ಅವರು ಅಭಿಪ್ರಾಯಿಸಿದ್ದಾರೆ.
ಸರಕಾರಿ ನೌಕರರಿಗೆ ಸುಮಾರು 1 ಲಕ್ಷ ಕೋಟಿ ಮೊತ್ತದ ವೇತನ ಏರಿಕೆಯು, ಗ್ರಾಹಕರ ಖರೀದಿಯ ಬೇಡಿಕೆಗಳಿಗೆ ಬಲವಾದ ಉತ್ತೇಜನವನ್ನು ನೀಡಲಿದೆ ಹಾಗೂ ದೇಶದ ಆರ್ಥಿಕತೆಯನ್ನು ಮೇಲೆತ್ತಲು ನೆರವಾಗಲಿದೆಯೆಂದು ಭಾರತೀಯ ವಾಣಿಜ್ಯ ಹಾಗೂ ಕೈಗಾರಿಕಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ. ದಿಲ್‌ದಾರ್ ಸಿಂಗ್ ತಿಳಿಸಿದ್ದಾರೆ.
ವೇತನ ವೆಚ್ಚದಲ್ಲಿ ಏರಿಕೆ
ಅಹ್ಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆ್ ಮ್ಯಾನೆಜ್‌ಮೆಂಟ್ ನಡೆಸಿದ ಅಧ್ಯಯನ ವರದಿಯು, ಸರಕಾರಿ ವಲಯದಲ್ಲಿನ ವೇತನವು, ಖಾಸಗಿ ವಲಯದ ವೇತನಕ್ಕಿಂತ ಗಣನೀಯವಾಗಿ ಅಕವೆಂಬುದನ್ನು ಕಂಡುಕೊಂಡಿದೆಯೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳುತ್ತಾರೆ. ಹೀಗಾಗಿ, ಹಾಲಿ ವೇತನ ಏರಿಕೆಯು ಅದರ ಲಾನುಭವಿಗಳಿಂದ ಯಾವುದೇ ಪ್ರತಿಭಟನೆಗೆ ಕಾರಣವಾಗದೆಂದು ಅವರು ಯೋಚಿಸಿದಂತಿದೆ.
ಕೇಂದ್ರ ಸರಕಾರಿ ನೌಕರರ ವೇತನದಲ್ಲಿ ಶೇ. 23.5 ಏರಿಕೆಯಿಂದ, ಪಾವತಿ ಬಾಕಿ ಸೇರಿದಂತೆ 2016-17ರಲ್ಲಿ 1.14 ಲಕ್ಷ ಕೋಟಿ ರೂ.ವೆಚ್ಚ ತಗಲುವುದೆಂದು ಅಂದಾಜಿಸಲಾಗಿದೆ.
ವೇತನ ಏರಿಕೆಯು ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಡಲಿದೆಯೆಂದು ಕೈಗಾರಿಕೆ ಹಾಗೂ ವಾಣಿಜ್ಯ ಲಾಬಿಗಳು ಮಾತ್ರವೇ ಹೇಳುತ್ತಿಲ್ಲ ಅರುಣ್ ಜೇಟ್ಲಿ ಹಾಗೂ ನೀಲೋತ್ಪಲ್ ಬಸು ಅವರಂತಹ ಸಿಪಿಎಂ ನಾಯಕರು ಕೂಡಾ ಇದೇ ರಾಗ ಹಾಡುತ್ತಿದ್ದಾರೆ. 64.80 ಕೋಟಿ ಭಾರತೀಯರು ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮವು ನಿಗದಿಪಡಿಸಿದ ಬಡತನ ರೇಖೆಗಿಂತ ಕೆಳಗಿನ ಮಟ್ಟದಲ್ಲಿ ಜೀವಿಸುತ್ತಿದ್ದಾರೆ. ಆದರೆ ಯಾರ ಹಿತವನ್ನು ಬಲಿಗೊಟ್ಟು ಈ ಬೆಳವಣಿಗೆಯನ್ನು ಸಾಸಲಾಗುತ್ತಿದೆಯೆಂಬ ಪ್ರಶ್ನೆಯನ್ನು ಈಗ ನಾವೆಲ್ಲರೂ ಕೇಳಬೇಕಾಗಿದೆ. ಜೇಟ್ಲಿಯ ವಾದ ಹೇಗಿದೆಯೆಂದರೆ, ಮನೆಯ ಯಜಮಾನನೊಬ್ಬ ತನ್ನ ಬೆಳೆಯುತ್ತಿರುವ ಮಕ್ಕಳ ಹಾಲಿನ ವೆಚ್ಚವನ್ನು ಕಡಿತಗೊಳಿಸಿ, ಅದರಲ್ಲಿ ಉಳಿದ ಹಣವನ್ನು ತನ್ನ ಧೂಮಪಾನ ಹಾಗೂ ಕುಡಿತಕ್ಕಾಗಿ ಖರ್ಚು ಮಾಡುವಂತಿದೆ.
ಕೇಂದ್ರ ಸರಕಾರದ ಉದ್ಯೋಗಿಗಳಿಗೆ ಪಾವತಿಸಲು 1.8 ಲಕ್ಷ ಕೋಟಿ ರೂ. ಮೊತ್ತವನ್ನು ಒದಗಿಸಲಾಗಿದೆ. ಇದು ಸರಕಾರದ ಒಟ್ಟು ವೆಚ್ಚದ ಶೇ.10.5ರಷ್ಟಾಗಿದೆ. ಎಲ್ಲ ಸ್ತರಗಳಲ್ಲಿ ಸರಕಾರದ ಅಂದಾಜು ವೇತನ ವೆಚ್ಚವು 10.4 ಲಕ್ಷ ಕೋಟಿ ರೂ.ಗಳಾಗಿದ್ದು, 2013-14ನೆ ಸಾಲಿನ ಜಿಡಿಪಿಯ ಶೇ.10ರಷ್ಟಿದೆ.
ಸರಕಾರದ ಮೂರು ಮಟ್ಟಗಳಲ್ಲಿ ಒಟ್ಟಾಗಿ 185 ಲಕ್ಷ ಉದ್ಯೋಗಿಗಳಿದ್ದಾರೆ. ಕೇಂದ್ರ ಸರಕಾರದಲ್ಲಿ 34 ಲಕ್ಷ ಹಾಗೂ ಎಲ್ಲ ರಾಜ್ಯ ಸರಕಾರಗಳಲ್ಲಿ ಒಟ್ಟಾಗಿ 72.2 ಲಕ್ಷ ಉದ್ಯೋಗಿಗಳಿದ್ದಾರೆ. ರೈಲ್ವೆ ಸೇರಿದಂತೆ ಸಾರ್ವಜನಿಕರಂಗದ ಸಂಸ್ಥೆಗಳಲ್ಲಿ 58.1 ಲಕ್ಷ ಸಿಬ್ಬಂದಿಯಿದ್ದಾರೆ. ಶ್ರೀಸಾಮಾನ್ಯರೊಂದಿಗೆ ಅತ್ಯಕವಾಗಿ ಒಡನಾಟವಿರುವ ಮೂರನೆ ಸ್ತರದ ಅಂದರೆ ಸ್ಥಳೀಯಾಡಳಿತ ಮಟ್ಟದ ಉದ್ಯೋಗಿಗಳ ಸಂಖ್ಯೆ ಮಾತ್ರ ಕೇವಲ 20.5 ಲಕ್ಷ...!
ಭಾರತದಲ್ಲಿ ಪ್ರತೀ 1 ಲಕ್ಷ ಜನರಿಗೆ 457.6 ಮಂದಿ ಸರಕಾರಿ ನೌಕರರಿದ್ದಾರೆ. ಇದಕ್ಕೆ ತೀರಾ ವ್ಯತಿರಿಕ್ತವಾಗಿ ಅಮೆರಿಕದಲ್ಲಿ 1 ಲಕ್ಷ ನಾಗರಿಕರಿಗೆ 7,681 ಸರಕಾರಿ ಸಿಬ್ಬಂದಿಯಿದ್ದಾರೆ. 30.10 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಕೇಂದ್ರ ಸರಕಾರದಲ್ಲಿ, ಪ್ರತಿ 257 ಮಂದಿ ಸಿಬ್ಬಂದಿ 1 ಲಕ್ಷ ನಾಗರಿಕರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಅಮೆರಿಕದಲ್ಲಿ ಈ ಸಂಖ್ಯೆ 840 ಆಗಿದೆ.
ಈಗ ಆಡಳಿತ ವ್ಯವಸ್ಥೆಯ ಎರಡನೆ ಸ್ತರವಾದ ಸರಕಾರಿ ಉದ್ಯೋಗಿಗಳ ಕಡೆ ಗಮನಹರಿಸೋಣ. ಬಿಹಾರದಲ್ಲಿ ಪ್ರತಿ 1 ಲಕ್ಷ ಜನರಿಗೆ 457.6 ಮಂದಿ, ಮಧ್ಯಪ್ರದೇಶದಲ್ಲಿ 826.6, ಉತ್ತರಪ್ರದೇಶದಲ್ಲಿ 801.7, ಒಡಿಶಾ 1,192 ಹಾಗೂ ಚತ್ತೀಸ್‌ಗಢ 1,174.6 ಮತ್ತು ಜಮ್ಮುಕಾಶ್ಮೀರ 3586 ಸರಕಾರಿ ಉದ್ಯೋಗಿಗಳಿದ್ದಾರೆ. ಬಡತನಕ್ಕೂ ಹಾಗೂ ಸಾರ್ವಜನಿಕ ಉದ್ಯೋಗಿಗಳ ಸಂಖ್ಯೆಗೂ ಯಾವುದೇ ಸಂಬಂಧವಿಲ್ಲ. ಉದಾಹರಣೆಗೆ ಗುಜರಾತ್‌ನಲ್ಲಿ ಪ್ರತಿ 1 ಲಕ್ಷ ಮಂದಿಗೆ ಕೇವಲ 826.5 ಮಂದಿ ಹಾಗೂ ಪಂಜಾಬ್‌ನಲ್ಲಿ 1,263.3 ಮಂದಿಯಿದ್ದಾರೆ.
ಕೆಲವು ಆಂತರಿಕ ಕ್ಷೋಭೆಯಿಂದ ಪೀಡಿತವಾದ ರಾಜ್ಯಗಳು ಈ ವಿಷಯದಲ್ಲಿ ಉತ್ತಮ ಸ್ಥಿತಿಯಲ್ಲಿವೆ. ಉದಾಹರಣೆಗೆ ಪ್ರತಿ 1 ಲಕ್ಷ ಜನಸಂಖ್ಯೆಗೆ ಮಿರೆರಾಂನಲ್ಲಿ 3,950.3 ಸರಕಾರಿ ಉದ್ಯೋಗಿಗಳಿದ್ದಾರೆ. ನಾಗಾಲ್ಯಾಂಡ್‌ನಲ್ಲಿ 3,906 ಹಾಗೂ ಜಮ್ಮುಕಾಶ್ಮೀರದಲ್ಲಿ 3,586 ಸರಕಾರಿ ಉದ್ಯೋಗಿಗಳಿದ್ದಾರೆ. ಪುಟ್ಟ ರಾಜ್ಯವಾದ ಸಿಕ್ಕಿಂನಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಗೆ 6,394.9 ಸರಕಾರಿ ನೌಕರರಿದ್ದಾರೆ. ಆದರೆ ಯಾವುದೇ ರಾಜ್ಯ ಕೂಡಾ ಅಂತಾರಾಷ್ಟ್ರೀಯ ಮಟ್ಟದ ಸನಿಹಕ್ಕೆ ಬಂದಿಲ್ಲ.
ಇನ್ನು ಸರಕಾರದ ಆದಾಯವನ್ನು ಹೆಚ್ಚಿಸಲು ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರೆಯುತ್ತಿಲ್ಲ. ಹಣಕಾಸು ಸಚಿವಾಲಯದ ಚಿಂತನ ವೇದಿಕೆಯಾದ ರಾಷ್ಟ್ರೀಯ ಹಣಕಾಸು ನಿರ್ವಹಣಾ ಸಂಸ್ಥೆಯು, ದೇಶದಲ್ಲಿರುವ ಒಟ್ಟು ಕಪ್ಪುಹಣದ ಮೊತ್ತವು ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಶೇ.75ರಷ್ಟಿದೆ ಎಂದು ಅಂದಾಜಿಸಿದೆ. ಅಂದರೆ, ಪ್ರಸ್ತುತ ಬರೋಬ್ಬರಿ 150-200 ಲಕ್ಷ ಕೋಟಿ ರೂ.ನಷ್ಟು ತೆರಿಗೆಗಳು ಸಂಗ್ರಹವಾಗುತ್ತಿಲ್ಲ. ಸರಕಾರವು ಅಕ ತೆರಿಗೆ ಸಂಗ್ರಹಿಸುವ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿರುವ ಹಾಗೆ ಕಾಣಿಸುತ್ತಿಲ್ಲ. ಆದರೆ ಹಾಗೆ ಮಾಡಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ.