ಕಾಸರಗೋಡು: ವಿಷ ಸೇವಿಸಿ ತಾಯಿ-ಮಗಳು ಆತ್ಮಹತ್ಯೆ
ಕಾಸರಗೋಡು, ಜು.9: ತಾಯಿ ಮತ್ತು ಮಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಬಂದಡ್ಕ ಕುತ್ತಿಕೋಲುವಿನಲ್ಲಿ ನಡೆದಿದೆ.
ಕುತ್ತಿಕೋಲ್ನ ಅಂಬಿಕಾ (45) ಮತ್ತವರ ಪುತ್ರಿ ಅಂಜನಾ (20) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಅಂಜನಾ ರಾಜಾಪುರ ಬಡ್ಸ್ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಮನೆಯಲ್ಲಿ ತಾಯಿ ಮತ್ತು ಮಗಳು ಇಬ್ಬರೇ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ತಂಪು ಪಾನೀಯದಲ್ಲಿ ವಿಷ ಬೆರೆಸಿ ಸೇವಿಸಿ ಈ ಕೃತ್ಯ ನಡೆಸಲಾಗಿದೆ. ಅಂಗವಿಕಲೆಯಾಗಿದ್ದ ಅಂಜನಾರಿಗೆ ವಿಷ ನೀಡಿ ಬಳಿಕ ತಾಯಿ ಅಂಬಿಕಾ ಕೂಡಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ .
ಅಂಜನಾ ಚಿಕ್ಕಂದಿರುವಾಗಲೇ ಅವರ ತಂದೆ ಮನೆ ತೊರೆದು ಹೋಗಿದ್ದರು. ಇದರಿಂದ ತಾಯಿ ಅಂಬಿಕಾ ಕೂಲಿ ಕೆಲಸಕ್ಕೆ ತೆರಳಿ ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ. ಬೇಡಡ್ಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.
Next Story