ಪೆರಾಜೆ ಗ್ರಾ.ಪಂ. ವತಿಯಿಂದ ವನಮಹೋತ್ಸವ
ಬಂಟ್ವಾಳ, ಜು. 11: ಪೆರಾಜೆ ಗ್ರಾಮ ಪಂಚಾಯತ್ ವತಿಯಿಂದ ಶನಿವಾರ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಗೆ ಸಸಿಗಳ ವಿತರಿಸಲಾಯಿತು.
ಈ ಸಂದರ್ದಲ್ಲಿ ಗ್ರಾಪಂ ಅಧ್ಯಕ್ಷೆ ಪುಷ್ಪ, ಜಿಪಂ ಸದಸ್ಯೆ ಮಂಜುಳಾ ಮಾವೆ, ತಾಪಂ ಸದಸ್ಯೆ ಮಂಜುಳಾ ಕುಶಲ ಎಂ., ಜಿಪಂ ಉಪ ಕಾರ್ಯದರ್ಶಿ ಉಮೇಶ್ ಎನ್.ಆರ್., ಸಚ್ಛತಾ ಆಂದೋಲದ ಜಿಲ್ಲಾ ಸಂಯೋಜಕಿ ಮಂಜುಳಾ ಪೆರಾಜೆ, ಪೆರಾಜೆ ಗ್ರಾಪಂ ಉಪಾಧ್ಯಕ್ಷ, ಸದಸ್ಯರು, ಮಾಣಿ ಗ್ರಾಪಂ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.
Next Story