ಕಾಸರಗೋಡಿನಲ್ಲಿ ಮತ್ತೆ ನಕಲಿ ನೋಟುಗಳ ಹಾವಳಿ
ಕಾಸರಗೋಡು, ಜು.14: ಕಾಸರಗೋಡಿನಲ್ಲಿ ಮತ್ತೆ ನಕಲಿ ನೋಟುಗಳ ಹಾವಳಿ ಕಂಡುಬರತೊಡಗಿದೆ. ಎರಡು ವಾರಗಳ ಅವಧಿಯಲ್ಲಿ 500 ರೂ.ನ ಎರಡು ನಕಲಿ ನೋಟುಗಳು ಪತ್ತೆಯಾಗಿವೆ. ಹೊಸ ಬಸ್ಸು ನಿಲ್ದಾಣ ಪಕ್ಕದ ಅಂಗಡಿಯೊಂದರಲ್ಲಿ ನಕಲಿ ನೋಟು ಪತ್ತೆಯಾಗಿದೆ. ಅಸಲಿ ನೋಟುಗಳಷ್ಟೇ ನಿಖರವಾಗಿರುವ ಈ ನೋಟುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಮಾತ್ರ ಇದನ್ನು ಪತ್ತೆಹಚ್ಚಲು ಸಾಧ್ಯ. ನಕಲಿ ನೋಟುಗಳ ಭಾರೀ ಜಾಲವೇ ಇದರ ಹಿಂದೆ ಕಾರ್ಯಾಚರಿಸುತ್ತಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
Next Story