ಕರಾವಳಿ ಫಾರ್ಮಸಿ ಕಾಲೇಜಿಗೆ ಶೇ.100 ಫಲಿತಾಂಶ
ಮಂಗಳೂರು,ಜು.15:ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವದ್ಯಾನಿಲಯವು 2016ನೆ ಜೂನ್ ತಿಂಗಳಿನಲ್ಲಿ ನಡೆಸಿದ ಎಂ.ಫಾರ್ಮ ಅಂತಿಮ ವರ್ಷದ ಪರೀಕ್ಷೆಯಲ್ಲಿ ನಗರದ ವಾಮಂಜೂರಿನಲ್ಲಿರುವ ಕರಾವಳಿ ಕಾಲೇಜ್ ಆಫ್ ಫಾರ್ಮಸಿಯ ಎಂ.ಫಾರ್ಮಾ ವಿಭಾಗವು ಶೇ.100 ಫಲಿತಾಂಶ ದಾಖಲಿಸಿದೆ.
ಎಂ. ಫಾರ್ಮ ಫಾರ್ಮಸ್ಯೂಟಿಕ್ಸ್, ಕ್ವಾಲಿಟಿ ಅಶ್ಯೂರೆನ್ಸ್, ಹಾಗೂ ಫಾರ್ಮಕೋಲಜಿ ವಿಭಾಗಗಳಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಎಂ. ಫಾರ್ಮ ಫಾರ್ಮಸ್ಯೂಟಿಕ್ಸ್ ವಿಭಾಗದಲ್ಲಿ ಪೂಜಾ ಶೆಟ್ಟಿ ಹಾಗೂ ಸೌಜನ್ಯಾ ಶೇ. 96 ಅಂಕಗಳನ್ನು ಪಡೆದು ಪ್ರಥಮ ಸ್ಥಾನಿಯಾಗಿರುತ್ತಾರೆ. ಫಾರ್ಮಕೋಲಜಿ ವಿಭಾಗದಲ್ಲಿ ಓಂನಾಥ್ ಶೇ.86 ಅಂಕಗಳನ್ನು ಪಡೆದು ಪ್ರಥಮ ಸ್ಥಾನಿಯಾಗಿರುತ್ತಾರೆ.
ಕ್ವಾಲಿಟಿ ಅಶ್ಯೂರೆನ್ಸ್ ವಿಭಾಗದ ಸುನೀಲ್ ಕುಮಾರ್ ಮೌರ್ಯ ಶೇ. 88 ಅಂಕಗಳನ್ನು ಅಂಕವನ್ನು ಪಡೆದು ಪ್ರಥಮ ಸ್ಥಾನಿಯಾಗಿರುತ್ತಾರೆ. ಕರಾವಳಿ ಕಾಲೇಜ್ ಆಫ್ ಫಾರ್ಮಸಿ ಫಾರ್ಮ ಡಿ ಮತ್ತು ಪೋಸ್ಟ್ ಬಾಚ್ಯುಲರೇಟ್ ಫಾರ್ಮ ಡಿ ಕೋರ್ಸ್ಗಳನ್ನು ಮಂಗಳೂರಿನಲ್ಲಿ ಪ್ರಾರಂಭಿಸಿದ ಮೊದಲನೇ ಕಾಲೇಜೆಂಬ ಹೆಗ್ಗಳಿಕೆಯನ್ನು ಹೊಂದಿದೆ ಎಂದು ಪ್ರಕಟನೆ ತಿಳಿಸಿದೆ.