ಜು.16ರಂದು ಮಂಗಳೂರಿನಲ್ಲಿ ಕೆಸಿಎಫ್ನ ಅಂತಾರಾಷ್ಟ್ರೀಯ ಸಮಾವೇಶ
ಮಂಗಳೂರು, ಜು.15: ಅನಿವಾಸಿ ಮುಸ್ಲಿಮ್ ಕನ್ನಡಿಗರ ಸಾಂಸ್ಕೃತಿಕ ವೇದಿಕೆ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್)ನ ವಾರ್ಷಿಕ ಅಂತಾರಾಷ್ಟ್ರೀಯ ಸಮಾವೇಶವು ಜು.16ರಂದು ಮಂಗಳೂರಿನಲ್ಲಿ ನಡೆಯಲಿದೆ.
ಜು.16ರಂದು ಮಂಗಳೂರಿನ ಬಲ್ಮಠ- ಲೈಟ್ ಹೌಸ್ಹಿಲ್ನಲ್ಲಿರುವ ಹೋಟೆಲ್ ಬ್ರಿಗೇಡ್ ರಾಯಲ್ನಲ್ಲಿ ಬೆಳಗ್ಗೆ 8 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಂಘಟನೆಯ ಸೌದಿ ಅರೇಬಿಯ, ಕತಾರ್, ಕುವೈಟ್, ಬಹ್ರೈನ್, ಒಮಾನ್, ಮಲೇಷ್ಯಾ ಮತ್ತು ಲಂಡನ್ನ ಆಯ್ದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಶೈಕ್ಷಣಿಕ ಹಾಗೂ ಜನಪರ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗುವ ಮುಂದಿನ ಕಾರ್ಯಕ್ರಮಗಳ ಬಗ್ಗೆ ಕಾರ್ಯಕ್ರಮದಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಕೆಸಿಎಫ್ನ ಅಂತಾರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷ ಎಮ್ಮೆಸ್ಸೆಂ ಝೈನೀ ಕಾಮಿಲ್ ಸಖಾಫಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story