ವಾಟ್ಸ್‌ಅಪ್‌ನ 10 ಅತ್ಯಂತ ವಿಶೇಷ ಹೊಸ ಫೀಚರ್‌ಗಳು
ಕಳೆದ ಕೆಲವು ವರ್ಷಗಳಲ್ಲಿ ವಾಟ್ಸಪ್ ಜಾಗತಿಕವಾಗಿ ಬಹಳಷ್ಟು ದೇಶಗಳ ಪ್ರಮುಖ ಸಂಪರ್ಕ ಮಾಧ್ಯಮವಾಗಿದೆ. ಆಪ್ ಪಡೆಯುವ ಕಾಲ ಕಾಲೀನ ಅಪ್‌ಡೇಟ್‌ಗಳು ಬಳಕೆದಾರರ ವ್ಯಾಪ್ತಿ ಏರಲು ಕಾರಣವಾಗಿದೆ. ಕಳೆದ ಕೆಲವು ತಿಂಗಳಲ್ಲಿ ವಾಟ್ಸಪಲ್ಲಿ ಹಲವು ಹೊಸ ಫೀಚರ್‌ಗಳು ಬಂದಿವೆ. ಆ 10 ಫೀಚರ್‌ಗಳು ಹೀಗಿವೆ:
1. ಕಾಲ್ ಬ್ಯಾಕ್
ವಾಟ್ಸಪ್ ಕರೆಗಳಲ್ಲಿ ಕಾಲ್ ಬ್ಯಾಕ್ ಮಾಡುವ ಫೀಚರ್ ಇಲ್ಲ ಎಂದುಕೊಂಡಿದ್ದೀರಾ? ಹೊಸ ಅಪ್‌ಡೇಟ್ ಬಳಿಕ ಅದು ಬಂದಿದೆ. ಕರೆ ರದ್ದಾದ ಮೇಲೆ ಆ ಅವಕಾಶ ಆಪ್ ಸ್ಕ್ರೀನ್ ಮೇಲೆ ಬರುತ್ತದೆ. ಈಗ ಆಂಡ್ರಾಯ್ಡಾ ಆಪ್ ಅಲ್ಲಿ ಮಾತ್ರ ಈ ಅವಕಾಶವಿದೆ. ಆಪ್‌ನ ಹೊಸ ಆವೃತ್ತಿಯಲ್ಲಿ ಇದು ಸಿಗಲಿದೆ. ಅಗತ್ಯವಿದ್ದವರು ಆಫ್‌ನ ಎಪಿಕೆ ಫೈಲನ್ನು ಎಪಿಕೆಮಿರರ್ ವೆಬ್‌ತಾಣದಿಂದ ಡೌನ್ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ.
2. ಧ್ವನಿ ಮೇಲ್
ಇದು ಕೂಡ ಆಂಡ್ರಾಯ್ಡಾಗೆ ಮಾತ್ರ ಇರುವ ಅವಕಾಶ. ಮೈಕ್ ಐಕಾನ್ ಮೇಲೆ ಧೀರ್ಘ ಒತ್ತಿದರೆ ಸಂದೇಶ ರೆಕಾರ್ಡ್ ಆಗಿ ಬಳಕೆದಾರರಿಗೆ ಸಿಗುತ್ತದೆ. ಇದೂ ಗೂಗಲ್ ಪ್ಲೇ ಸ್ಟೋರಲ್ಲಿ ಇಲ್ಲ. ಅಗತ್ಯವಿದ್ದವರು ಆಫ್‌ನ ಎಪಿಕೆ ಫೈಲನ್ನು ಎಪಿಕೆಮಿರರ್ ವೆಬ್‌ತಾಣದಿಂದ ಡೌನ್ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿಕೊಳ್ಳಿ.
3. ಕೋಟ್ಸ್
ಬಹಳ ಹಿಂದೆ ಬಂದ ಸಂದೇಶಕ್ಕೆ ಉತ್ತರ ನೀಡಬೇಕಿದ್ದರೆ, ಆ ನಿರ್ದಿಷ್ಟ ಸಂದೇಶಕ್ಕೇ ಮರು ಉತ್ತರ ಕೊಡಬಹುದು. ಇತ್ತೀಚೆಗೆ ವಾಟ್ಸಪ್ ಈ ಅವಕಾಶ ಕೊಟ್ಟಿದೆ. ಯಾವ ಸಂದೇಶಕ್ಕೆ ಉತ್ತರಿಸಬೇಕೋ, ಅದನ್ನು ಆಯ್ಕೆ ಮಾಡಿಕೊಂಡು ಮೇಲೆ ಬರುವ ರಿಪ್ಲೈ ಐಕಾನ್ ಒತ್ತಿ ಸಂದೇಶ ಬರೆಯಿರಿ. ಇದು ಏಕಾಂತ ಮಾತುಕತೆ ಮತ್ತು ಗ್ರೂಪ್ ಚಾಟ್ ಎರಡರಲ್ಲೂ ಸಿಗಲಿದೆ.
4. ಹೊಸ ಫಾಂಟ್‌ಗಳು
ವಾಟ್ಸಪ್‌ನಲ್ಲಿ ಅದೇ ಫಾಂಟ್ ಬಳಸಿ ಮಾತಾಡಿ ಸಾಕಾಗಿದ್ದರೆ ಕಂಪನಿ ಹೊಸ ಫೀಚರ್ ಕೊಟ್ಟಿದೆ. ಈಗ ನೀವು ಫಾಂಟನ್ನು ಬೋಲ್ಡ್, ಇಟಾಲಿಕ್‌ನಲ್ಲಿ ಬದಲಿಸಬಹುದು. ಸಿಂಬಲ್‌ಗಳನ್ನು ಬಳಸಿ ಈ ಬದಲಾವಣೆ ಮಾಡಬಹುದು.
5. ಎನ್‌ಕ್ರಿಪ್ಷನ್
ಈ ಹೊಸ ಅಪ್‌ಡೇಟ್ ಅನ್ನು ಎರಡೂ ಕಡೆಯಲ್ಲಿ ಮಾಡಿಕೊಂಡರೆ ನಿಮ್ಮ ಸಂದೇಶಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಷನ್ ಆಗಿಬಿಡುತ್ತದೆ. ಇದರಿಂದ ಸಂದೇಶವನ್ನು ಕೇವಲ ಕಳುಹಿಸಿದಾತ ಮತ್ತು ಪಡೆದುಕೊಂಡಾತ ಮಾತ್ರ ಓದಬಹುದು. ವಾಟ್ಸಪ್ ಕರೆಗಳೂ ಹೀಗೇ ಎನ್‌ಕ್ರಿಪ್ಟೆಡ್ ಆಗಿವೆ. ಹೀಗಾಗಿ ವಾಟ್ಸಪ್ ಕರೆಗಳನ್ನು ಮೂರನೆಯವರು ಕೇಳಲು ಸಾಧ್ಯವಿಲ್ಲ.
6. ಸಂಗೀತ ಕಳುಹಿಸುವುದು
ವಾಟ್ಸಪ್ ಸಂಗೀತ ಹಂಚಿಕೆ ಫೀಚರ್ ಕೂಡ ಹೊಸದು. ಇದರ ಮೂಲಕ ತಮ್ಮ ಸಾಧನದಲ್ಲಿರುವ ಸಂಗೀತವನ್ನು ಹಂಚಿಕೊಳ್ಳಬಹುದು.
7. ಉಲ್ಲೇಖ ಮತ್ತು ಗ್ರೂಪ್ ಆಹ್ವಾನ
ಮತ್ತೊಂದು ಫೀಚರ್ ಎಂದರೆ ವಾಟ್ಸಪ್ ಉಲ್ಲೇಖಗಳು. ಗ್ರೂಪ್ ಸಂಭಾಷಣೆಯಲ್ಲಿ ಇದು ಉತ್ತಮ. ಇದರಲ್ಲಿ ಹೆಸರನ್ನು ಭಿನ್ನ ಬಣ್ಣದಲ್ಲಿ ತೋರಿಸಬಹುದು. ಗುಂಪಿನಲ್ಲಿ ಪ್ರತ್ಯೇಕವಾಗಿ ಒಬ್ಬನ ಬಳಿ ಮಾತನಾಡಲು ಈ ಬಣ್ಣ ಬಳಸಬಹುದು. ಗ್ರೂಪ್ ಆಹ್ವಾನದ ಮೂಲಕ ಗುಂಪಿಗೆ ಇತರರನ್ನು ಕೇವಲ ಟಾಪ್ ಮಾಡಿ ಮಾತುಕತೆಗೆ ಕರೆಯಬಹುದು.
8. GIF ಸಪೋರ್ಟ್
ವಾಟ್ಸಪ್ ಕೂಡ GIF ಸಪೋರ್ಟ್ ನೀಡಲು ಉದ್ದೇಶಿಸಿದೆ. ಈಗ ವಿಚಾಟ್, ಲೈನ್‌ಗಳಲ್ಲಿ ಇವು ಇವೆ.
9. ಬಿಗ್ ಎಮೋಜಿ
ಶೀಘ್ರವೇ ವಾಟ್ಸಪ್ ದೊಡ್ಡ ಎಮೊಜಿ ಬಳಕೆಗೆ ಅವಕಾಶ ವಾಡಿಕೊಡಲಿದೆ ಎಂದು ಸುದ್ದಿಯಾಗಿದೆ.
10. ವಿಡಿಯೋ ಕಾಲಿಂಗ್
ವಾಟ್ಸಪ್‌ಲ್ಲಿ ಮೇನಲ್ಲಿ ವಿಡಿಯೋ ಕಾಲಿಂಗ್ ಒಮ್ಮೆ ಕಂಡಿತ್ತು. ಆದರೆ ನಂತರ ಮರೆಯಾಗಿದೆ. ಆದರೆ ಕಂಪೆನಿ ಹೊಸ ಫೀಚರನ್ನು ಶೀಘ್ರ ತರುವ ನಿರೀಕ್ಷೆಯಿದೆ.
ಕೃಪೆ: timesofindia.indiatimes.com