ನಿಮ್ಮನ್ನು ಟ್ರ್ಯಾಕ್ ಮಾಡಲಾಗುತ್ತಿದೆಯೇ ಎಂದು ನಿಮ್ಮ ಫೋನ್ ಕವರ್ ಮೂಲಕವೇ ಪತ್ತೆ ಹಚ್ಚಿ
ಹ್ಯಾಕಿಂಗ್ ವಿರುದ್ಧ ಸಮರ ಹೂಡಿದ ನಾಯಕ ಎಡ್ವರ್ಡ್ ಸ್ನೋಡೆನ್ ವೃತ್ತಿಯನ್ನು ಬದಲಿಸುತ್ತಿರುವ ಹಾಗಿದೆ. ಜಾಗತಿಕವಾಗಿ ಅಂತರ್ಜಾಲ ಪಾರದರ್ಶಕತೆಯನ್ನು ಸಾಧಿಸುವ ತಮ್ಮ ಕನಸಿನ ಜೊತೆಗೆ ಸ್ನೋಡನ್ ಈಗ ಉತ್ಪನ್ನ ವಿನ್ಯಾಸಗೊಳಿಸುವ ಜಗತ್ತಿಗೆ ಪ್ರವೇಶಿಸಿದ್ದಾರೆ. ಫೋನ್ ಸಾಧನದಿಂದ ಏನಾದರೂ ಪ್ರಸಾರವಾಗುತ್ತಿದೆಯೇ ಎಂದು ಪತ್ತೆ ಹಚ್ಚುವ ಫೋನ್ ಕವರನ್ನು ಇತ್ತೀಚೆಗೆ ಅವರು ಹೊರತಂದಿದ್ದಾರೆ.
ಈ ಕವರಿನಲ್ಲಿ ವೈರ್‌ಗಳಿದ್ದು ಐಫೋನ್ ಒಳಭಾಗಕ್ಕೆ ಸಂಪರ್ಕಹೊಂದುತ್ತದೆ. ಸಿಮ್ ಕಾರ್ಡ್ ಸ್ಲಾಟನ್ನು ಬಳಸಿಕೊಂಡು ಆಂತರಿಕ ಆಂಟೆನಾಗಳಿಗೆ ಕಳುಹಿಸಿದ ವಿದ್ಯುತ್ ಸಂಕೇತಗಳನ್ನು ನಿಭಾಯಿಸುತ್ತದೆ. ಹ್ಯಾಕರ್ ಆಂಡ್ರ್ಯೂ ಬರ್ನಿ ಹುವಾಂಗ್ ಜೊತೆಗೆ ಅವರು ಎಂಐಟಿ ಮೀಡಿಯಾ ಲ್ಯಾಬ್‌ನ ಫಾರ್ಬಿಡನ್ ರೀಸರ್ಚ್ ಕಾರ್ಯಕ್ರಮದಲ್ಲಿ ವಿನ್ಯಾಸವನ್ನು ಅವರು ಪರಿಚಯಿಸಿದರು. ಈ ಕವರಿನಲ್ಲಿ ಈಗ ಆರಂಭಿಕ ಹಂತದಲ್ಲಿದ್ದು, ತಮ್ಮ ಸ್ಥಳ ತಿಳಿಸಲು ಬಯಸದ ಪತ್ರಕರ್ತರಿಗಾಗಿಯೇ ವಿನ್ಯಾಸ ಮಾಡಲಾಗಿದೆ. ಸರ್ಕಾರಗಳು ಸ್ಮಾರ್ಟ್ ಫೋನುಗಳ ಮೇಲೆ ರಹಸ್ಯವಾಗಿ ಕಾವಲು ಾಯುವುದನ್ನು ಇದು ತಪ್ಪಿಸಲಿದೆ.
ಸರ್ಕಾರಗಳು ಪತ್ರಕರ್ತರು, ಕಾರ್ಯಕರ್ತರು ಮತ್ತು ಹಕ್ಕುಗಳ ಕಾರ್ಯಕರ್ತರ ವಿವರಗಳನ್ನು ಕದ್ದಾಲಿಸುತ್ತಾರೆ. ಅದರಿಂದ ರಕ್ಷಿಸಲು ಇದು ಬಳಕೆಯಾಗಲಿದೆ ಎಂದು ಕಾರ್ಯಕ್ರಮದಲ್ಲಿ ಅವರು ಅಭಿಪ್ರಾಯಪಟ್ಟರು. ಇದಕ್ಕಾಗಿ ಸ್ಪೇರ್ ಭಾಗಗಳು ಮತ್ತು ಐಫೋನ್ 6 ಬ್ಲೂಪ್ರಿಂಟ್ ಪಡೆಯಲು ಅವರು ಚೀನಾದ ಶೇನ್ಷೆನ್‌ನ ತಾಂತ್ರಿಕ ಮಾರುಕಟ್ಟೆಗೆ ಅವರು ಹೋಗಿದ್ದಾರೆ. ಫೋನ್ ಬಳಸಿ ರಾಜ್ಯ ವ್ಯಕ್ತಿಗಳ ಮಾಹಿತಿಯನ್ನು ಕದ್ದಾಲಿಸದಂತೆ ತಡೆಯುವದು ಈ ವಿನ್ಯಾಸದ ಉದ್ದೇಶ. ಹಾರ್ಡ್‌ವೇರ್ ಸಂಬಂಧಿತ ಸಂಕೇತಗಳನ್ನು ನಕಲಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಫೋನ್ ಸುರಕ್ಷಿತವಾಗಿರುತ್ತದೆ ಎಂದು ಖಚಿತಪಡಿಸಿಕೊಳ್ಳಬಹುದು ಎನ್ನುವುದು ತಯಾರಕರ ಅಭಿಪ್ರಾಯ. ಇರಾಕ್ ಮತ್ತು ಸಿರಿಯಾದ ಯುದ್ಧಪೀಡಿತ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರಿಗೆ ಈ ಸಾಧನ ಬಹಳ ಉಪಯುಕ್ತ.
ಕೃಪೆ: www.indiatimes.com