ದಲಿತ ಮಹಿಳೆಗೆ ಬಲವಂತವಾಗಿ ಮೂತ್ರ ಕುಡಿಸಿದ ದುಷ್ಕರ್ಮಿಗಳು
ದರ್ಭಾಂಗ,ಜು.30: ನಾಲ್ಕು ಮಂದಿಯ ಗುಂಪೊಂದು ದಲಿತ ಮಹಿಳೆಯೊಬ್ಬಳನ್ನು ಮಾಟಗಾತಿಯೆಂದು ನಿಂದಿಸಿ, ಆಕೆಗೆ ಬಲವಂತವಾಗಿ ಮೂತ್ರವನ್ನು ಕುಡಿಸಿದ ಮಾಡಿದ ಘಟನೆ ಬಿಹಾರದ ದರ್ಭಾಂಗ ಜಿಲ್ಲೆಯ ಪಿಪ್ರಾ ಗ್ರಾಮದಿಂದ ಶನಿವಾರ ವರದಿಯಾಗಿದೆ.ವಾಮಾಚಾರದಲ್ಲಿ ತೊಡಗಿದ್ದಾಳೆಂದು ನಿಂದಿಸಿದ ಈ ಗುಂಪು ದಲಿತ ಮಹಿಳೆಗೆ ಹಿಗ್ಗಾಮಗ್ಗಾ ಥಳಿಸಿದ ಆನಂತರ ಗುಂಪು ಆಕೆಯನ್ನು ಬಲವಂತವಾಗಿ ಮೂತ್ರ ಕುಡಿಯುವಂತೆ ಮಾಡಿತೆಂದು ಉಪವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಓ) ಆಂಜನಿ ಕುಮಾರ್ ತಿಳಿಸಿದ್ದಾರೆ.ಘಟನೆಯ ಬಳಿಕ ಮಹಿಳೆಯು ಗ್ರಾಮವನ್ನು ತೊರೆದಿದ್ದಾಳೆ ಹಾಗೂ ಆಕೆಯ ಬುಧವಾರ ಈ ಬಗ್ಗೆ ದೂರು ನೀಡಿದ್ದಾಳೆಂದು ಅವರು ಹೇಳಿದ್ದಾರೆ. ಗ್ರಾಮದ ಕೆಲವು ಮಕ್ಕಳು ಅನಾರೋಗ್ಯಕ್ಕೀಡಾದ ಬಳಿಕ ಈ ಘಟನೆ ನಡೆದಿದೆ. ದಲಿತ ಮಹಿಳೆಯು ವಾಮಾಚಾರ ಮಾಡಿದ್ದರಿಂದಲೇ ಮಕ್ಕಳು ಅಸ್ವಸ್ಥರಾಗಿದ್ದಾರೆಂದು ಭಾವಿಸಿ ಆಕೆಯ ಮೇಲೆ ದೌರ್ಜನ್ಯವೆಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
Next Story