ಗುಜರಾತ್ಗೆ ಬಂತು ಆರೆಸ್ಸೆಸ್ ಭಾರತ ಮಾದರಿ
ಭಾರತದಲ್ಲಿ ಇಂದಿನ ಹಸು ರಾಜಕೀಯವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಸುದೀರ್ಘ ಕಾಲ ಆರೆಸ್ಸೆಸ್ ಸರಸಂಚಾಲಕರಾಗಿದ್ದ ಎಂ.ಎಸ್.ಗೋಳ್ವಾಲ್ಕರ್ 1952ರಲ್ಲಿ ಬರೆದ ಒಂದು ಲೇಖನದಿಂದ ಆರಂಭಿಸಬೇಕು. ಆ ವರ್ಷದ ಆರಂಭದಲ್ಲಿ ಆರೆಸ್ಸೆಸ್ನ ರಾಜಕೀಯ ಸಂಘಟನೆ ಭಾರತೀಯ ಜನಸಂಘ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ ಮೂರು ಲೋಕಸಭಾ ಸ್ಥಾನವನ್ನಷ್ಟೇ ಗೆದ್ದಿತ್ತು. ಸಂಘಟನೆಯ ಕಾರ್ಯಕರ್ತರು ಸ್ಥೆರ್ಯ ಕಳೆದುಕೊಳ್ಳದಂತೆ ತಡೆಯಲು ಗೋಲ್ವಾಳ್ಕರ್ ಪತ್ರಿಕೆಗಳ ಮೂಲಕ ಒಂದು ಸಾರ್ವಜನಿಕ ಮನವಿ ಮಾಡಿಕೊಂಡರು. ಯುವ ಹಿಂದೂಗಳು ತಮ್ಮ ನಂಬಿಕೆಯ ಮೂಲಭೂತ ಮೌಲ್ಯ ಹಾಗೂ ಆದರ್ಶಗಳನ್ನು ಪುನರುಜ್ಜೀವನಗೊಳಿಸಬೇಕು ಎಂದು ಕರೆ ನೀಡಿದರು.
ಹಿಂದೂಗಳನ್ನು ಇದಕ್ಕೆ ಯಾವ ವಿಚಾರಗಳು ಪ್ರೇರೇಪಿಸಬಲ್ಲವು ಎಂದು ಯೋಚಿಸಿದ ಗೋಳ್ವಾಲ್ಕರ್, ಮಾತೃಭೂಮಿಯ ಗೌರವ ಹಾಗೂ ಗತವೈಭವವನ್ನು ಕಾಪಾಡುವ ಸಲುವಾಗಿ ಹಿಂದೂಗಳು ಬಲಿದಾನಕ್ಕೂ ಸಿದ್ಧರಾಗುವಂತೆ ಮಾಡಲು ಯಾವುದರಿಂದ ಸಾಧ್ಯ? ನಮ್ಮ ರಾಷ್ಟ್ರೀಯ ಬದುಕಿನಲ್ಲಿ ಅಂಥ ಗೌರವ ಇರುವುದು ಗೋಮಾತೆಗೆ ಮಾತ್ರ ಎನ್ನುವುದು ಗೋಳ್ವಾಲ್ಕರ್ ಅವರ ಅಚಲ ನಂಬಿಕೆಯಾಗಿತ್ತು. ಭೂಮಾತೆಯ ಜೀವಂತ ರೂಪ ಎಂಬಂಥ ಪವಿತ್ರ ಹಾಗೂ ಪೂಜ್ಯ ಸ್ಥಾನ ಹೊಂದಿದ್ದ ಹಸು ಸಂತತಿಯಷ್ಟೇ ಇದಕ್ಕೆ ಸೂಕ್ತ ಅಸವಾಗಬಲ್ಲದು ಎನ್ನುವುದು ಗೋಳ್ವಾಲ್ಕರ್ ಅವರ ಸ್ಪಷ್ಟ ಅಭಿಪ್ರಾಯ. ಇಂಥ ರಾಷ್ಟ್ರೀಯ ಗೌರವದ ಸಂಕೇತವಾದ ಹಸುವಿನ ಮೇಲೆ ನಡೆಯುವ ಯಾವುದೇ ದಾಳಿಯನ್ನು ತಡೆಯಲು ಹಾಗೂ ಮಾತೃಭೂಮಿಯ ಮೇಲಿನ ಪೂಜ್ಯ ಭಾವನೆಯನ್ನು ಉದ್ದೀಪಿಸಲು ಇದನ್ನು ಪ್ರಬಲ ಅಸವಾಗಿ ಅವರು ಕಂಡುಕೊಂಡರು. ಸ್ವರಾಜ್ಯ ಭಾರತದ ರಾಷ್ಟ್ರೀಯ ಪುನರುತ್ಥಾನಕ್ಕೆ ಗೋಹತ್ಯೆ ನಿಷೇಧಕ್ಕೆ ಆದ್ಯತೆ ನೀಡುವುದೊಂದೇ ಮಾರ್ಗ ಎನ್ನುವುದು ಅವರ ಪ್ರತಿಪಾದನೆಯಾಗಿತ್ತು.
ಸಂಪ್ರದಾಯವಾದಿ ಹಿಂದೂಗಳು ಹಸುಗಳನ್ನು ಪೂಜಿಸುತ್ತಾರೆ. ಆದರೆ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಅದರ ಮಾಂಸ ಸೇವಿಸುತ್ತಾರೆ. ಭಾರತ ಹಿಂದೂರಾಷ್ಟ್ರ ಎಂದು ಒಪ್ಪಿಕೊಳ್ಳುವಂತೆ ಅಲ್ಪಸಂಖ್ಯಾತರನ್ನು ದಂಡಿಸಲು ಆರೆಸ್ಸೆಸ್ ಹಾಗೂ ಗೋಳ್ವಾಲ್ಕರ್ಗೆ ಗೋಪೂಜೆ ಪ್ರಮುಖ ಅಸವಾಯಿತು. 1950ರ ದಶಕದಲ್ಲಿ ನೆಹರೂ ಹಾಗೂ ಕಾಂಗ್ರೆಸ್ನ ಪ್ರಭೆ ಎಷ್ಟು ದಟ್ಟವಾಗಿತ್ತು ಎಂದರೆ, ಆರೆಸ್ಸೆಸ್ನ ಯಾವ ಆಂದೋಲನಗಳೂ ಚಾಲನೆ ಪಡೆಯುವಂತೆಯೇ ಇಲ್ಲ ಎಂಬಷ್ಟಿತ್ತು. ಆದರೆ ನೆಹರೂ ಸಾವಿನ ಬಳಿಕ, ಆರೆಸ್ಸೆಸ್ ಗೋಸಂರಕ್ಷಣೆಗೆ ರಾಷ್ಟ್ರವ್ಯಾಪಿ ಆಂದೋಲನ ಪ್ರಾರಂಭವಾಯಿತು. 1966ರಲ್ಲಿ ಉಗ್ರ ಹಿಂದೂವಾದಿ ಪಡೆ ಸಂಸತ್ತಿಗೆ ಮುತ್ತಿಗೆ ಹಾಕಿತು. ಈ ಗುಂಪನ್ನು ಚದುರಿಸಲು ಪೊಲೀಸರು ಪ್ರತಿದಾಳಿ ನಡೆಸಿದರು. ಇದರಿಂದ ಉದ್ರಿಕ್ತರಾದ ಪ್ರತಿಭಟನಾಕಾರರು ಮತ್ತಷ್ಟು ಕಿಡಿಗೇಡಿ ಕೃತ್ಯಕ್ಕೆ ಇಳಿದು ಮನೆ ಹಾಗೂ ಹಲವು ಕಟ್ಟಡಗಳಿಗೆ, ನೂರಾರು ವಾಹನಗಳಿಗೆ ಬೆಂಕಿ ಹಚ್ಚಿದರು. ಹಿಂದೂ ಮೂಲಭೂತವಾದಿಗಳ ಈ ದಾಳಿ, 2001ರ ಡಿಸೆಂಬರ್ನಲ್ಲಿ ಜಿಹಾದಿ ಮುಸ್ಲಿಮರು ಪಾರ್ಲಿಮೆಂಟ್ ಭವನದ ಮೇಲೆ ದಾಳಿ ನಡೆಸಲು ಪ್ರೇರಣೆ ಒದಗಿಸಿದ ಘಟನೆ.ೋಳ್ವಾಲ್ಕರ್ ಅವರನ್ನು ಪೂಜಿಸುವಂತೆ ಬೋಸುವ ಆರೆಸ್ಸೆಸ್ ಗರಡಿಯಲ್ಲಿ ಪಳಗಿದವರು ನರೇಂದ್ರ ಮೋದಿ. ಗೋಳ್ವಾಲ್ಕರ್ ಅವರನ್ನು ಹೊಗಳುವ ಹಲವು ಲೇಖನಗಳನ್ನೂ ಮೋದಿ ಬರೆದಿದ್ದಾರೆ. ಈ ಮಧ್ಯೆ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, ಆರೆಸ್ಸೆಸ್ ಹಾಗೂ ವಿಶ್ವ ಹಿಂದೂ ಪರಿಷತ್ತನ್ನು ರಾಜ್ಯ ರಾಜಕೀಯದಿಂದ ಮೂಲೆಗುಂಪು ಮಾಡಲು ಕೂಡಾ ಬಹಳಷ್ಟು ಶ್ರಮಿಸಿದ್ದರು.ರಲ್ಲಿ ಅವರು ಪ್ರಧಾನಿ ಹುದ್ದೆಯ ಅಭಿಯಾನ ಆರಂಭಿಸುವ ವೇಳೆಗೆ, ಕನಿಷ್ಠ ಸಾರ್ವಜನಿಕರ ದೃಷ್ಟಿಯಲ್ಲಾದರೂ, ಆರೆಸ್ಸೆಸ್ನಿಂದ ಅಂತರ ಕಾಯ್ದುಕೊಂಡಿದ್ದರು. ಹಿಂದಿನ ಪಂಥೀಯ ಇತಿಹಾಸವನ್ನು ಮರೆತು, ರಾಜ್ಯದಲ್ಲಿ ಆಗಿರುವ ಕೈಗಾರಿಕೆ ಹಾಗೂ ಕೃಷಿ ಪ್ರಗತಿ ಆಧಾರದಲ್ಲಿ ಮತದಾರರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು. ತಾವು ಪ್ರಧಾನಿಯಾಗಿ ಆಯ್ಕೆಯಾದರೆ ಈ ಗುಜರಾತ್ ಮಾದರಿಯನ್ನು ದೇಶಾದ್ಯಂತ ವಿಸ್ತರಿಸುವುದಾಗಿ ಭರವಸೆ ನೀಡಿದ್ದರು. ಗುಜರಾತ್ನಲ್ಲಿ ಮೋದಿ ಗೆಲುವಿಗೆ ಆರೆಸ್ಸೆಸ್ ಬೆಂಬಲ ಬೇಕಿರಲಿಲ್ಲ. ಆದರೆ ಇಡೀ ದೇಶದಲ್ಲಿ ಇದನ್ನು ವಿಸ್ತರಿಸಲು, ಆರೆಸ್ಸೆಸ್ ಮುಂದೆ ಮಂಡಿಯೂರಲೇಬೇಕಾಯಿತು. ಆರಂಭಿಕ ಹಿಂಜರಿಕೆಯ ಬಳಿಕ, ಗೋಳ್ವಾಲ್ಕರ್ ನಿರ್ವಹಿಸಿದ ಹುದ್ದೆಯಲ್ಲಿದ್ದ ಮೋಹನ್ ಭಾಗವತ್, ತಮ್ಮ ಸಂಘಟನೆ ಶಕ್ತಿಯನ್ನು ಮೋದಿ ಬೆಂಬಲಕ್ಕೆ ವಿನಿಯೋಗಿಸಲು ನಿರ್ಧರಿಸಿದರು. ಆರೆಸ್ಸೆಸ್ ಹಾಗೂ ವಿಎಚ್ಪಿ ತಳಮಟ್ಟದ ಕಾರ್ಯಕರ್ತರು ದೇಶಾದ್ಯಂತ ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶದಂಥ ಪ್ರಮುಖ ರಾಜ್ಯಗಳಲ್ಲಿ ಉತ್ಸಾಹಭರಿತರಾಗಿ ಇದಕ್ಕೆ ಸ್ಪಂದಿಸಿದರು. ಮೋದಿಗೆ ಸ್ಥಾನಗಳನ್ನು ಗೆದ್ದುಕೊಡುವಲ್ಲಿ ಹಿಂದುತ್ವ ಪಡೆ ಪ್ರಮುಖ ಪಾತ್ರ ವಹಿಸಿತು.
ನರೇಂದ್ರ ಮೋದಿ 2014ರ ಮೇ ತಿಂಗಳಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಜನಸಂಘದ ಉತ್ತರಾಕಾರಿಯಾದ ಬಿಜೆಪಿ ಮೊದಲ ಬಾರಿ ಲೋಕಸಭೆಯಲ್ಲಿ ಬಹುಮತ ಪಡೆದಾಗ ಆ ಸರಕಾರದ ನೇತೃತ್ವ ವಹಿಸಿಕೊಂಡರು. ಈ ಮಹತ್ವದ ಚುನಾವಣೆಯಲ್ಲಿ ಅಭಿವೃದ್ಧಿಯ ವಿಷಯವನ್ನು ಮುಂದಿಟ್ಟುಕೊಂಡು ಗೆದ್ದಿರುವುದಾಗಿ ಮೋದಿ ನಂಬಿದರು. ಆದರೆ ಖ್ಯಾತ ರಾಜಕೀಯ ವಿಶ್ಲೇಷಕ ಚಂದ್ರಬಾನ್ ಪ್ರಸಾದ್ ಹೇಳುವಂತೆ, ಮೇಲ್ವರ್ಗದವರು ಹಾಗೂ ಸಂಪ್ರದಾಯವಾದಿಗಳನ್ನು ಒಳಗೊಂಡ ಹಿಂದೂ ಸಮಾಜದ ಒಂದು ಭಾಗ ಇದನ್ನು ಹಿಂದೂ ರಾಷ್ಟ್ರದ ಪರವಾದ ಜನಮತ ಎಂದು ಪರಿಗಣಿಸಿದರು. ಆದ್ದರಿಂದ ಆರೆಸ್ಸೆಸ್ ವಿಚಾರವಾದಿ ಎಂ.ಎಸ್.ಗೋಳ್ವಾಲ್ಕರ್ ಪ್ರತಿಪಾದಿಸಿದಂತೆ ಹಸುವನ್ನು ಏಕೈಕ ಪೂಜ್ಯ ವಸ್ತುವಾಗಿ ಪರಿಗಣಿಸಲಾಯಿತು.ಗೋ ಳ್ವಾಲ್ಕರ್ 1973ರಲ್ಲಿ ನಿಧನರಾದರು. ಆದರೆ ಅವರ ಯೋಚನೆಗಳನ್ನು ಮಾತ್ರ ಕ್ರಾಂತಿಕಾರಿ ಹಿಂದೂಗಳು ಜೀವಂತ ಉಳಿಸಿಕೊಂಡರು. ಇತ್ತೀಚೆಗೆ 'ಮಿಂಟ್' ಪ್ರಕಟಿಸಿದ ಒಂದು ಲೇಖನದಲ್ಲಿ ಹೇಳಿದಂತೆ ಭಾರತೀಯ ಗೋರಕ್ಷಾ ದಳದ ಬಹುತೇಕ ಬ್ರಾಹ್ಮಣ ಸದಸ್ಯರು ಹಸು ಎನ್ನುವುದು ಮಾತೃಸಮಾನ. ಆದ್ದರಿಂದ ಅದರ ರಕ್ಷಣೆ ಅನಿವಾರ್ಯ ಎಂಬ ಪ್ರತಿಜ್ಞೆ ಕೈಗೊಂಡಿದ್ದಾರೆ. ಇದೀಗ ಅವರ ಸರಕಾರ ಕೇಂದ್ರದಲ್ಲಿ ಅಕಾರದಲ್ಲಿರುವುದರಿಂದ, ಇಂಥ ಕಾರ್ಯಕರ್ತರು ಮುಸ್ಲಿಮರು ಗೋಮಾಂಸ ಭಕ್ಷಕರು ಮತ್ತು ಜಾನುವಾರು ಸಾಗಾಣೆ ಮಾಡುವವರು ಎಂಬ ಸಂಶಯದಿಂದ ಅವರ ಮೇಲೆ ದಾಳಿ ಮಾಡುವುದು ಹೆಚ್ಚಿದೆ. ಮೋದಿ ಅಕಾರ ವಹಿಸಿಕೊಂಡ ಬಳಿಕ, ಉತ್ತರಪ್ರದೇಶ, ಜಾರ್ಖಂಡ್, ಹಿಮಾಚಲ ಪ್ರದೇಶಗಳಲ್ಲೂ ಇಂಥ ಹತ್ಯೆಗಳು ನಡೆದಿವೆ. ಹೊಸದಾಗಿ ಚುನಾಯಿತವಾದ ಬಿಜೆಪಿ ಸರಕಾರಗಳಂತೂ ಗೋಮಾಂಸ ನಿಷೇಧ ಹಾಗೂ ಹಸು ಸಂರಕ್ಷಣೆಯನ್ನುಪ್ರಥಮ ಆದ್ಯತೆಯಾಗಿ ಗುರುತಿಸಿಕೊಂಡಿವೆ.
ಮುಸ್ಲಿಮರು ಸಂತ್ರಸ್ತರಾಗಿರುವವರೆಗೂ, ಪ್ರತಿಭಟನಾಕಾರರನ್ನು ಹುಸಿ ಜಾತಿವಾದಿಗಳು ಅಥವಾ ರಾಷ್ಟ್ರವಿರೋಗಳು ಎಂದು ಹಣೆಪಟ್ಟಿ ಕಟ್ಟಲು ಅವಕಾಶವಿದೆ. ಆದರೆ ಇದೀಗ ಪ್ರಧಾನಿಯವರ ತವರು ರಾಜ್ಯದಲ್ಲಿ ಗೋರಕ್ಷಕರ ಆಕ್ರೋಶ, ಸತ್ತ ದನದ ಚರ್ಮ ಸುಲಿಯುತ್ತಿದ್ದ ಬಡ ದಲಿತರ ಮೇಲೆ ತಿರುಗಿದೆ. ದಲಿತರ ಮೇಲೆ ದೌರ್ಜನ್ಯ ಎಸಗಿದ ಯುವಕರ ಧಾರ್ಷ್ಟ್ಯ ಎಷ್ಟಿದೆ ಎಂದರೆ, ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವಷ್ಟು.
ಸೈದ್ಧಾಂತಿಕವಾಗಿ ದಲಿತರು ಹಿಂದೂ ಸಮಾಜದ ಭಾಗ. ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ದಲಿತರ ಬಗ್ಗೆ ಬಾರಿ ಕಳಕಳಿ ವ್ಯಕ್ತಪಡಿಸುತ್ತಾ ಬಂದಿರುವ ಹಿನ್ನೆಲೆಯಲ್ಲಿ, ಇತ್ತೀಚಿನ ಘಟನೆ ಬಿಜೆಪಿಗೆ ಅಪಮಾನ ತಂದೊಡ್ಡಿದೆ. ಇಷ್ಟಾಗಿಯೂ ಹಲವು ವಿಧದಲ್ಲಿ ದಲಿತರನ್ನು ಹೊರತುಪಡಿಸಿ ಇತರ ಭಾರತೀಯರ ಮೇಲೆ ಗೋಸಂರಕ್ಷಣೆ ಹೆಸರಿನಲ್ಲಿ ದಾಳಿ ನಡೆಯುತ್ತಿದ್ದರೂ ಬಾಯಿ ಮುಚ್ಚಿಕೊಂಡಿತ್ತು.ಕಾಶ್ಮೀರದಲ್ಲಿ ಗೋಮಾಂಸ ಭಕ್ಷಣೆ ಆರೋಪದಲ್ಲಿ ಒಬ್ಬ ಬಿಜೆಪಿ ಶಾಸಕ ಮತ್ತೊಬ್ಬ ಶಾಸಕನ ಮೇಲೆ ದಾಳಿ ಮಾಡಿದಾಗಲೂ ಅಮಿತ್ ಶಾ ವೌನವಾಗಿದ್ದರು. ಪಕ್ಷದ ಶಾಸಕರ ಇಂಥ ಕೃತ್ಯಕ್ಕೆ ವೌನ ಸಮ್ಮತಿ ನೀಡುವ ಇಂಥ ಕ್ರಮ ಹಿಂದುತ್ವ ಕಾರ್ಯಕರ್ತರು ತಮ್ಮ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಲು ಕುಮ್ಮಕ್ಕು ನೀಡುವಂಥದ್ದು.
ಗುಜರಾತ್ನ ಆರ್ಥಿಕ ಪ್ರಗತಿ ಮಾದರಿಯನ್ನು ಇಡೀ ದೇಶಕ್ಕೆ ವಿಸ್ತರಿಸುವ ನಿರೀಕ್ಷೆಯನ್ನು ಮೋದಿ ಮೂಡಿಸಿದ್ದರು. ಆದರೆ ವಾಸ್ತವವಾಗಿ ಸಂಘ ಪರಿವಾರ ತನ್ನ ಧಾರ್ಮಿಕ ಬಹುಸಂಖ್ಯಾತ ನೀತಿಯ ಭಾರತೀಯ ಮಾದರಿಯನ್ನು, ಗುಜರಾತ್ ಸೇರಿದಂತೆ ಇಡೀ ದೇಶಕ್ಕೆ ವಿಸ್ತರಿಸುತ್ತಿದೆ.