ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷರಾಗಿ ಅಝೀಝ್ ಪರ್ತಿಪ್ಪಾಡಿ
ಮಂಗಳೂರು, ಆ.1ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷರಾಗಿ ಅಝೀಝ್ ಪರ್ತಿಪ್ಪಾಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಖಾಸಗಿ ಹೊಟೇಲಿನಲ್ಲಿ ಜರಗಿದ ಸಂಘದ 35ನೆ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
2000ನೆ ಇಸವಿಯಿಂದ 2011ರವರೆಗೆ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿಯೂ ಅಝೀಝ್ ಪರ್ತಿಪ್ಪಾಡಿ ಸೇವೆ ಸಲ್ಲಿಸಿದ್ದರು.
Next Story