ನಿಮ್ಮ ವಾಟ್ಸ್ ಅಪ್ ಹ್ಯಾಕ್ ಮಾಡಲು ಕೆಲವೇ ಸೆಕೆಂಡ್‌ಗಳು ಸಾಕು!
ನೀವು ಏನು ಮಾಡಬೇಕು?
ನಿಮ್ಮ ಸ್ಮಾರ್ಟ್‌ಫೋನ್‌ನ ಇನ್‌ಸ್ಟಂಟ್ ಮೆಸೇಜಿಂಗ್ ಸರ್ವೀಸ್ ವಾಟ್ಸ್ ಅಪ್ ನೀವು ಬಳಕೆ ಮಾಡುತ್ತಿದ್ದೀರಾ? ಹಾಗಾದರೆ ಎಚ್ಚರ ವಹಿಸಿ. ನಿಮ್ಮ ವಾಟ್ಸ್ ಅಪ್ ಹ್ಯಾಕ್ ಮಾಡಲು ಕೇವಲ 30 ಸೆಕೆಂಡ್ ಸಾಕು ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಮೂಲದ ಆನ್‌ಲೈನ್ ಸುರಕ್ಷಾ ಏಜೆನ್ಸಿಯಾದ ಎಮೆರೇಟ್ಸ್ ಸೇಫರ್ ಇಂಟರ್‌ನೆಟ್ ಸೊಸೈಟಿ (ಇ- ಸೇಫ್) ಎಚ್ಚರಿಕೆ ನೀಡಿದೆ.
ಇ-ಸೇಫ್‌ನ ಯುವ ಚಾಂಪಿಯನ್ ಹುಸೈನ್ ಅದೆಲ್ ಅಲ್ ಹಶ್ಮಿ ಇನ್ನೂ ಅಲ್ ಲಿತ್ತಿಹಾದ್ ನ್ಯಾಷನಲ್ ಖಾಸಗಿ ಶಾಲೆಯ ವಿದ್ಯಾರ್ಥಿ. ಹೀಗೆ ವಾಟ್ಸ್ ಅಪ್ ಹ್ಯಾಕ್ ಮಾಡುವ ಲೈವ್ ಡೆಮೊವನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದರು. ವಾಟ್ಸ್ ಆ್ಯಪ್ ಹ್ಯಾಕರ್‌ಗಳು ಹೇಗೆ ಸುಲಭವಾಗಿ ನಮ್ಮ ವಾಟ್ಸ್ ಆ್ಯಪ್ ಮೆಸೇಜ್ ಹ್ಯಾಕ್ ಮಾಡಬಹುದು ಎನ್ನುವುದನ್ನು ಪ್ರದರ್ಶಿಸಿದರು. ಇ-ಸೇಫ್ ಇಂಥ ಹ್ಯಾಕಿಂಗ್ ಬಗ್ಗೆ ಜಾಗೃತಿ ಆಂದೋಲನವನ್ನೂ ಹಮ್ಮಿಕೊಂಡಿದೆ.
ಈ ಬಗ್ಗೆ ಇ-ಸೇಫ್ ಕೈಗೊಂಡಿರುವ ಸಮೀಕ್ಷೆ ಪ್ರಕಾರ, ಶೇಕಡ 70ರಷ್ಟು ವಾಟ್ಸ್ ಆ್ಯಪ್ ಬಳಕೆದಾರರು, ತಮ್ಮ ಕುಟುಂಬದವರು ತಮ್ಮ ಫೋನ್ ಬಳಸಲು ಅವಕಾಶ ನೀಡುತ್ತಾರೆ. ಶೇಕಡ 22ರಷ್ಟು ಮಂದಿ ಸ್ನೇಹಿತರು ಬಳಕೆ ಮಾಡಲೂ ಅವಕಾಶ ಕೊಡುತ್ತಾರೆ ಎನ್ನುವುದು ತಿಳಿದುಬಂದಿದೆ. ಶೇಕಡ 70ರಷ್ಟು ಮಂದಿ ವಾಟ್ಸ್ ಆ್ಯಪ್ ಲಾಗ್ ಔಟ್ ಮಾಡುವುದಿಲ್ಲ ಎನ್ನುವುದೂ ಸಮೀಕ್ಷೆಯಿಂದ ಗೊತ್ತಾಗಿದೆ. ಇದರಿಂದಾಗಿ ವಾಟ್ಸ್ ಆ್ಯಪ್ ಖಾತೆಯನ್ನು ಕಂಪ್ಯೂಟರ್ ಅಥವಾ ಇತರ ಸಾಧನಗಳಿಂದ ಬಳಕೆ ಮಾಡಬಹುದಾಗಿದೆ. ಈ ಹೊಸ ಅನ್ವೇಷಣೆ ಹಿನ್ನೆಲೆಯಲ್ಲಿ, ಇ-ಸೇಫ್, ವಾಟ್ಸ್ ಆ್ಯಪ್ ಇನ್‌ಕಾರ್ಪೊರೇಷನ್‌ಗೆ ಪತ್ರ ಬರೆದು, ಸುರಕ್ಷಾ ನೋಟಿಫಿಕೇಶನ್ ಆರಂಭಿಸುವಂತೆ ಆಗ್ರಹಿಸಿದೆ.