ಬಂಗಾಳದಲ್ಲಿ ಐಎಎಫ್ ಹಾಕ್ ವಿಮಾನ ಪತನ
ಚಾಲಕರು ಪಾರು
ಕೋಲ್ಕತಾ, ಆ.4: ಭಾರತೀಯ ವಾಯು ಪಡೆಯ ಹಾಕ್ ಅತ್ಯಾಧುನಿಕ ತರಬೇತಿ ವಿಮಾನವೊಂದು ಇಂದು ಪಶ್ಚಿಮ ಬಂಗಾಳದ ವಾಯು ಪಡೆಯ ನೆಲೆಯಿಂದ ಗಗನಕ್ಕೇರಿದ ಬಳಿಕ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿದೆ. ಆದಾಗ್ಯೂ, ಅದರೊಳಗಿದ್ದ ಪೈಲೆಟ್‌ಗಳಿಬ್ಬರೂ ಸುರಕ್ಷಿತವಾಗಿ ಜಿಗಿದು ಪಾರಾಗಿದ್ದಾರೆ.
ಪಶ್ಚಿಮ ಮಿಡ್ನಾಪುರದ ಕಲೈಕುಂದ ವಿಮಾನ ನೆಲೆಯಿಂದ ಬೆಳಗ್ಗೆ 11ರ ವೇಳೆ ಹಾರಿದೊಡನೆಯೇ ವಿಮಾನದಲ್ಲಿ ದೋಷ ಕಾಣಿಸಿಕೊಂಡಿತು. ಅದು ವಾಯು ನೆಲೆಯ ಆವರಣದೊಳಗೆಯೇ ನೆಲಕ್ಕಪ್ಪಳಿಸಿತು.
Next Story