ನಿಮ್ಮ ಉದ್ಯಮ ಬೆಳೆಸಲು ಫೇಸ್ ಬುಕ್ ನೀಡುತ್ತಿದೆ ಹೊಸ ಫೀಚರ್ ಗಳು
ಅಂತರ್ಜಾಲದಲ್ಲಿ ಬ್ಯುಸಿನೆಸ್ ಗೆ ಉತ್ತಮ ವೇದಿಕೆಯಾಗುವ ಪ್ರಯತ್ನದಲ್ಲಿ ಫೇಸ್ ಬುಕ್ ಈಗ ತನ್ನ ಪುಟಗಳಲ್ಲಿ ಹೊಸ ಫೀಚರ್ ಗಳನ್ನು ಪರಿಚಯಿಸಿದೆ. ಭಾರತ ಸೇರಿದಂತೆ ತನ್ನ ಬೆಳೆಯುತ್ತಿರುವ ಮಾರುಕಟ್ಟೆಯಲ್ಲಿ ಫೇಸ್ಬುಕ್ ಈ ಪ್ರಯತ್ನ ಮಾಡಿದೆ. ಈ ಮಾರುಕಟ್ಟೆಗಳಲ್ಲಿ ಶೇ. 57ರಷ್ಟು ಮಂದಿ ತಮ್ಮ ಉದ್ಯಮ ನಡೆಸಲು ಫೇಸ್ಬುಕ್ ಆಶ್ರಯ ಪಡೆಯುತ್ತಿದ್ದಾರೆ. ಹೀಗಾಗಿ ಫೇಸ್ಬುಕ್ ನ ಶಾಪ್ ಸೆಕ್ಷನ್ ನಲ್ಲಿ ಹೊಸ ದಾರಿಯಲ್ಲಿ ಉದ್ಯಮ ಮಾಡಲು ಅವಕಾಶ ಕೊಡುತ್ತದೆ. ತಮ್ಮ ಪುಟದಲ್ಲಿ ಮಾರುವ ಉತ್ಪನ್ನಗಳನ್ನು ಮಾರಲು ಫೇಸ್ಬುಕ್ ಅವಕಾಶ ಕೊಟ್ಟಿದೆ. ಶಾಪ್ ಸೆಕ್ಷನ್ ನಲ್ಲಿ ಬಳಕೆದಾರ ತನ್ನ ಉತ್ಪನ್ನಗಳನ್ನು ಪ್ರದರ್ಶಿಸುವ ಅವಕಾಶವಿದೆ.
ಸರ್ವಿಸ್ ಸೆಕ್ಷನಲ್ಲಿ ಸರ್ವಿಸ್ ಉದ್ಯಮವು ತಮ್ಮ ಕೊಡುಗೆಗಳನ್ನು ತಮ್ಮ ಪುಟದಲ್ಲಿ ಪ್ರದರ್ಶಿಸಬಹುದಾಗಿದೆ. ಭಾರತದ ಸಣ್ಣ ಮತ್ತು ಮಧ್ಯಮ ಉದ್ಯಮದ ಕಡೆಗೆ ನೋಡಿದರೆ, ಸುಮಾರು 1.99 ಶತಕೋಟಿ ವ್ಯವಹಾರಗಳನ್ನು ದೇಶದ ಉದ್ಯಮ ಮತ್ತು ಜನರ ನಡುವೆ ನಡೆಯುತ್ತದೆ. ಭಾರತದಲ್ಲಿ ಕಳೆದ ವರ್ಷದ ಅಕ್ಟೋಬರಲ್ಲೇ ಎರಡು ಮಿಲಿಯ ಎಸ್‌ಎಂಬಿ ಪುಟಗಳಿದ್ದವು. "ಶಾಪ್ಸ್ ಮತ್ತು ಸರ್ವಿಸಸ್ ಸೆಕ್ಷನ್ ಅನ್ನು ಫೇಸ್ ಬುಕ್ ಪುಟದಲ್ಲಿ ಕೊಡುವುದರಿಂದ ಜಾಗತಿಕವಾಗಿ ಉದ್ಯಮಗಳು ನೇರವಾಗಿ ಜನರ ಜೊತೆಗೆ ಸಂಪರ್ಕ ನಿಭಾಯಿಸಲು ನೆರವಾಗಲಿದೆ. ಜನರನ್ನು ಹೆಚ್ಚು ದೃಶ್ಯರೂಪದಲ್ಲಿ ತಲುಪಬಹುದು" ಎಂದು ಫೇಸ್ಬುಕ್ ಉತ್ಪನ್ನ ಮಾರ್ಕೆಟಿಂಗ್ ಮ್ಯಾನೇಜರ್ ಹೇಳುತ್ತಾರೆ.
ಫೇಸ್ಬುಕ್ ಉಚಿತವಾಗಿ ಈ ಪುಟವನ್ನು ಪರಿಚಯಿಸುತ್ತದೆ. ಸರ್ವಿಸ್ ಸೆಕ್ಷನಲ್ಲಿ ಜನರಿಗೆ ತಾವು ಬಯಸಿದ ಸೇವೆಯ ಮಾಹಿತಿ ಸುಲಭವಾಗಿ ಸಿಗಲಿದೆ. ಜಾಗತಿಕವಾಗಿ ಒಂದು ಶತಕೋಟಿಗೂ ಹೆಚ್ಚು ಮಂದಿ ಯಾವುದೋ ಒಂದು ಉದ್ಯಮದ ಜೊತೆಗೆ "ಫೇಸ್ಬುಕ್‌ನಲ್ಲಿ ಸಂಪರ್ಕ ಹೊಂದಿದ್ದಾರೆ. ಫೇಸ್ಬುಕ್ ಪುಟಗಳನ್ನು ಹೆಚ್ಚು ಮೌಲ್ಯಯುತವಾಗಿಸುವ ನಿಟ್ಟಿನಲ್ಲಿ ಶಾಪ್ಸ್ ಮತ್ತು ಸರ್ವಿಸಸ್ ಸೆಕ್ಷನ್ ಉತ್ತಮ ಹೆಜ್ಜೆ. 20 ದಶಲಕ್ಷಕ್ಕೂ ಅಧಿಕ ಉದ್ಯಮಗಳಿಗೆ ಈ ಪುಟ ಪ್ರತೀ ತಿಂಗಳು ನೆರವಾಗಲಿದೆ" ಎಂದು ಮತ್ತೊಬ್ಬ ಫೇಸ್ಬುಕ್ ಉತ್ಪನ್ನ ಮಾರ್ಕೆಟಿಂಗ್ ಮ್ಯಾನೇಜರ್ ರಿಯಾನ್ ಎಬಾಂಕ್ಸ್ ಹೇಳಿದ್ದಾರೆ.
ಕೃಪೆ: zeenews.india.com