ಶೀತ ಮತ್ತು ಕೆಮ್ಮನ್ನು ನಿಗ್ರಹಿಸಲು 7 ಮನೆ ಮದ್ದುಗಳು
ಹವಾಮಾನದಲ್ಲಿ ಬದಲಾವಣೆಯಾಗಿರುವ ಕಾರಣ ಮಕ್ಕಳಿಗೆ ವೈರಲ್ ಕೆಮ್ಮು, ಶೀತ ಮೊದಲಾದ ಸಾಮಾನ್ಯ ರೋಗಗಳು ಬರುವ ಸಾಧ್ಯತೆಯಿದೆ. ಇದರಿಂದ ಅವರನ್ನು ಕಾಪಾಡಲು ಸುಲಭ ಔಷಧಿಗಳಿವೆ.
1. ಸ್ಟೀಮ್:
ನಿಮ್ಮ ಚಿಕ್ಕ ಮಕ್ಕಳು ಶೀತದಿಂದ ಅಥವಾ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರೆ ಸ್ಟೀಮ್ ಕೊಡಿ. ಬಿಸಿ ನೀರು ಇರುವಲ್ಲಿ ಮಗುವನ್ನು ನಿಲ್ಲಿಸಿ. ಇಲ್ಲದೆ ಇದ್ದರೆ ಬೌಲ್ ಒಂದರಲ್ಲಿ ಬಿಸಿ ನೀರಿಟ್ಟು ಅದರ ಹೊಗೆಯನ್ನು ಉಸಿರಾಡಲು ಹೇಳಿ.
2. ಜೇನು:
ಮಗುವಿನ ಬೆರಳನ್ನು ಜೇನಿಗೆ ಅದ್ದಿ ಅದನ್ನು ಚೀಪಲು ಹೇಳಿ. ಐದು ವರ್ಷಕ್ಕಿಂತ ಹಿರಿಯ ಮಗುವಾಗಿದ್ದಲ್ಲಿ ದಾಲ್ಚಿನ್ನಿ ಪೌಡರನ್ನು ಬೆರೆಸಿ ಕೊಡಿ.
3. ಕಾರಂ ಬೀಜಗಳು:
ಅಜ್ವೈನ್ ಅಥವಾ ಕಾರಂ ಬೀಜಗಳನ್ನು ಕುದಿಯುವ ನೀರಿಗೆ ಹಾಕಿ ಮತ್ತು ತುಳಸಿ ಎಲೆಗಳನ್ನು ಬೆರೆಸಿ ಕುಡಿಯಲು ಕೊಡಿ. ಇದು ಹೃದಯಕ್ಕೆ ಆರಾಮ ಕೊಡುತ್ತದೆ.
4. ಮಸಾಜ್:
ಚಿಕ್ಕ ಮಕ್ಕಳಿಗೆ ಮಸಾಜ್ ಉತ್ತಮ ಕೆಲಸ ಮಾಡುತ್ತದೆ. ಹೃದಯ, ಬೆನ್ನು ಮತ್ತು ಕುತ್ತಿಗೆಗೆ ಮಸಾಜ್ ಮಾಡಿದರೆ ಶೀತದಿಂದ ವಿರಾಮ ಸಿಗಲಿದೆ. ಕೈ ಮತ್ತು ಪಾದಗಳನ್ನೂ ಮಸಾಜ್ ಮಾಡಿ.
5. ಮಗುವನ್ನು ಹೈಡ್ರೇಟ್ ಮಾಡಿ:
ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಮಗು ಬಳಲುತ್ತಿದ್ದರೆ ಹೈಡ್ರೇಟೆಡ್ (ದೇಹಕ್ಕೆ ತೇವಾಂಶ ಕೊಡುವುದು) ಮಾಡಿ. ಕುಡಿಯುವ ನೀರನ್ನು ನಿತ್ಯವೂ ಕೊಡುವುದು ಸಾಮಾನ್ಯ ಶೀತದ ವಿರುದ್ಧ ಹೋರಾಡಲು ನೆರವಾಗುತ್ತದೆ. ಗಂಟಲಿನ ಉರಿಯೂತವೂ ಕಡಿಮೆಯಾಗಲಿದೆ. ಬಿಸಿ ಸೂಪ್ ಮತ್ತು ತಾಜಾ ಹಣ್ಣಿನ ರಸ ಕುಡಿಯಲು ಕೊಡಿ.
6. ಉಪ್ಪಲ್ಲಿ ಬಾಯಿ ತೊಳೆಯುವುದು:
ಬಿಸಿ ನೀರಿಗೆ ಒಂದು ಚಮಚ ಉಪ್ಪು ಬೆರೆಸಿ ಬಾಯಿ ತೊಳೆಯಲು ಹೇಳಿ. ಇದರಿಂದ ಗಂಟಲಿಗೆ ಸಮಾಧಾನ ಸಿಗಲಿದೆ. ದಿನಕ್ಕೆರಡು ಬಾರಿ ಇದನ್ನು ಮಾಡಬಹುದು.
7.ಅರಿಶಿಣ ಹಾಲು:
ಅರಿಶಿಣದಲ್ಲಿ ರೋಗನಿರೋಧಕ ಶಕ್ತಿಯಿದೆ. ಹೀಗಾಗಿ ಕೆಮ್ಮು ಅಥವಾ ಶೀತವಿದ್ದಾಗ ಬಿಸಿ ಹಾಲಿಗೆ ಅರಿಶಿಣ ಹುಡಿ ಬೆರೆಸಿ ರಾತ್ರಿ ಮಲಗುವಾಗ ಸೇವಿಸಲು ಕೊಡಿ. ಇದರಿಂದ ಗಂಟಲು ವುತ್ತು ಮೂಗಿಗೆ ಆರಾಮ ಸಿಗುತ್ತದೆ.
ಕೃಪೆ: http://timesofindia.indiatimes.com/