ಬಂಟ್ವಾಳ: ತೊರೆಗೆ ಬಿದ್ದು ವ್ಯಕ್ತಿ ಮೃತ್ಯು
ಬಂಟ್ವಾಳ, ಆ.5: ಆಕಸ್ಮಿಕವಾಗಿ ಕಾಲು ಜಾರಿ ತೊರೆಗೆ ಬಿದ್ದು ಮಧ್ಯವಯಸ್ಕರೊಬ್ಬರು ಮೃತಪಟ್ಟ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕೊಡ್ಮಾಣ್ನ ಪೈಕ ಎಂಬಲ್ಲಿ ಗುರುವಾರ ರಾತ್ರಿ ಸಂವಿಸಿದೆ.
ಮೃತರನ್ನು ಸ್ಥಳೀಯ ನಿವಾಸಿ ಜೋಸೆಫ್ (51) ಎಂದು ಗುರುತಿಸಲಾಗಿದೆ. ಇವರು ಮನೆಯಿಂದ ಪೇಟೆಗೆ ಹಾಲು ಕೊಂಡೊಯ್ಯುತ್ತಿದ್ದ ವೇಳೆ ಮನೆ ಸಮೀಪದ ತೊರೆಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿಯಾದರೂ ಇವರು ಮನೆಗೆ ಬಾರದೆ ಇದ್ದುದರಿಂದ ಮನೆ ಮಂದಿ ಹುಡುಕಾಡಿದಾಗ ತೊರೆಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಕೇಸ್ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
Next Story