ನಕಲಿ ದಾಲ್ಚಿನಿ ಸಾಗಾಟಕ್ಕೆ ನಿಷೇಧ
ಮಂಗಳೂರು, ಆ.8: ದೇಶದ ನಾನಾ ಬಂದರು ಮತ್ತು ವಿಮಾನ ನಿಲ್ದಾಣಗಳಲ್ಲಿ ವಿದೇಶದಿಂದ ನಕಲಿ ದಾಲ್ಚಿನಿ ಸಾಗಾಟಕ್ಕೆ ನಿಷೇಧ ಹೇರಲಾಗಿದೆ.
ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ದಾಲ್ಚಿನಿ ಕೃಷಿಕ ಲಿಯೋನಾರ್ಡ್ ಜಾನ್ ಮಾತನಾಡಿ, ನಕಲಿ ದಾಲ್ಚಿನಿ ಸಾಗಾಟ ನಿಷೇಧಕ್ಕೆ ಮೊದಲು ದಾಲ್ಚಿನಿ ಬೆಳೆಗಾರರಿಗೆ ಅನ್ಯಾಯವಾಗುತ್ತಿತ್ತು. ಈ ವಿಚಾರವನ್ನು ಮಾಧ್ಯಮಗಳು ಸಂಬಂಧಪಟ್ಟವರಿಗೆ ಮನವರಿಕೆ ಮಾಡಿಕೊಟ್ಟ ಪರಿಣಾಮ ಈಗ ಬಂದರು ಮತ್ತು ವಿಮಾನ ನಿಲ್ದಾಣಗಳಲ್ಲಿ ದಾಲ್ಚಿನಿ ಸಾಗಾಟಕ್ಕೆ ಅವಕಾಶ ಇಲ್ಲದಾಗಿದೆ. ಇದು ಮಾಧ್ಯಮಗಳಿಂದ ಸಿಕ್ಕಿದ ಯಶಸ್ಸು ಎಂದು ಅಭಿಪ್ರಾಯಪಟ್ಟರು.
Next Story