ಅಪಾಯದಲ್ಲಿ 90ಕೋಟಿ ಆಂಡ್ರಾಯ್ಡ್ ಫೋನ್‌ಗಳು
ನ್ಯೂಯಾರ್ಕ್,ಆ.9: ಅಮೆರಿಕನ್ ಕಂಪೆನಿ ನಿರ್ಮಿಸಿದ ಚಿಪ್‌ಗಳನ್ನು ಉಪಯೋಗಿಸುವ 90 ಕೋಟಿ ಆಂಡ್ರಾಯ್ಡ್ ಫೋನ್‌ಗಳಲ್ಲಿರುವ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆ ಇದೆ ಎಂದು ಸಂಶೋಧಕರು ಪತ್ತೆಹಚ್ಚಿದ್ದಾರೆ ಎಂದು ವರದಿಯಾಗಿದೆ. ಅಮೆರಿಕನ್ ಕಂಪೆನಿ ನಿರ್ಮಿತ ಚಿಪ್‌ಗಳಲ್ಲಿ ಬಳಕೆಯಾದ ಸಾಫ್ಟ್‌ವೇರ್‌ಗಳಲ್ಲಿ ವೈರಸ್ ಬೆದರಿಕೆ ಸೃಷ್ಟಿಯಾಗಿರುವುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ.
ಗ್ರಾಫಿಕ್ಸನ್ನು ನಿರ್ವಹಿಸುವ ಸಾಫ್ಟ್‌ವೇರ್‌ಗಳಲ್ಲಿ ಈ ಬೆದರಿಕೆಗಳು ಸೃಷ್ಟಿಯಾಗಿದ್ದು, ಕೋಡ್‌ಗಳಲ್ಲಾಗಿರುವ ಪ್ರಮಾದವು ಈವರೆಗೂ ಹಾಕರ್‌ಗಳ ಗಮನಕ್ಕೆ ಬಂದಿಲ್ಲ. ಕೆಲವೇ ತಿಂಗಳಲ್ಲಿ ಹ್ಯಾಕರ್‌ಗಳು ಇದನ್ನು ಭೇದಿಸುವ ಸಾಧ್ಯತೆಯಿದೆಯೆಂದು ಸಂಶೋಧನೆ ನಡೆಸಿದ ಚೆಕ್‌ಪಾಯಿಂಟ್ ರಿಸರ್ಚ್ ಹೇಳಿದೆ.
ಬ್ಲಾಕ್‌ಬೆರಿ ಪ್ರೀವ್, ಗೂಗಲ್ ನೆಕ್ಸ್ ಆಂಡ್ ಎಕ್ಸ್, ನೆಕ್ಸಸ್ ಆರ್. ನೆಕ್ಸಸ್‌ಆರ್‌ಪಿ, ಎಚ್.ಟಿ.ಸಿ. ಸೆವೆನ್ ಮುಂತಾದ ಆಂಡ್ರಾಯ್ಡ್ನ ಅಮೆರಿಕನ್ ಪ್ರತಿಗಳು ಇರುವ ಫೋನ್‌ಗಳ ಮಾಹಿತಿಗಳು ಸೋರಿಕೆಯಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ.