ತಂದೆಯನ್ನು ಕೋಲಿನಿಂದ ಹೊಡೆದು ಕೊಂದ ಪುತ್ರ
ಜಮ್ಮು,ಆ.10: ಇಲ್ಲಿನ ಕಠುವಾ ಜಿಲ್ಲೆಯ ರಾಜ್ಬಾಗ್ ಠಾಣೆ ವ್ಯಾಪ್ತಿಯ ಬಖ್ತಾ ಗ್ರಾಮದಲ್ಲಿ ಪುತ್ರನೊಬ್ಬ ತನ್ನ ವಯೋವೃದ್ಧ ತಂದೆಯನ್ನು ಕೋಲಿನಿಂದ ಹೊಡೆದು ಕೊಂದು ಹಾಕಿದ ಘಟನೆ ವರದಿಯಾಗಿದೆ. ಈ ಘಟನೆಯ ನಂತರ ಈ ಪ್ರದೇಶದಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು ಎಂದು ವರದಿ ತಿಳಿಸಿದೆ.
ಮನೆಯಲ್ಲಿ ತಂದೆ ಮತ್ತು ಮಗ ಇಬ್ಬರೇ ವಾಸವಿದ್ದರು. ಮಗನಿಗೆ ಮದ್ಯಪಾನದ ಚಟವಿತ್ತು. ಮಂಗಳವಾರ ತಡರಾತ್ರಿ ಮದ್ಯದ ಅಮಲಿನಲ್ಲಿ ತೂರಾಡುತ್ತಾಬಂದ ಮಗ ತಂದೆಯೊಂದಿಗೆ ಜಗಳ ತೆಗೆದು ಮಾರಣಾಂತಿಕವಾಗಿ ಹೊಡೆದು ಕೊಂದು ಹಾಕಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು ವಯೋವೃದ್ಧ ವ್ಯಕ್ತಿಯನ್ನು ಆಸ್ಪತ್ರೆಗೆ ತಲುಪಿಸಿದ್ದರು. ಆಸ್ಪತ್ರೆಯಲಿ ವೈದ್ಯರು ಆ ವ್ಯಕ್ತಿ ಮೃತರಾಗಿದ್ದಾರೆಂದು ಘೋಷಿಸಿದ್ದರು. ಬನ್ರಾಸಿ ಎಂಬ ಪುತ್ರನ ವಿರುದ್ಧ ಕೊಲೆ ಆರೋಪ ಹೊರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ವರದಿಯಾಗಿದೆ.
Next Story