ಗೋಮಾಂಸ ಸೇವನೆ ಉಸಿರುಗಟ್ಟಿಸುವ ಇತಿಹಾಸ!
ಗೋವುಗಳನ್ನು ಪೂಜಿಸುವ, ಮಾತೆ ಎಂದು ಪರಿಗಣಿಸುವ ಮಂದಿ ಈ ವಸ್ತುನಿಷ್ಠ ಇತಿಹಾಸ ಅಧ್ಯಯನದ ವರದಿಯನ್ನು ವಿರೋಧಿಸಬಹುದು. ಏಕೆಂದರೆ ಸಮಾಜದ ಉದಾರವಾದದ ಉಸಿರುಗಟ್ಟಿಸುವ ಕೋಮು ರಾಜಕಾರಣಿಗಳ ರಾಜಕೀಯ ಲೆಕ್ಕಾಚಾರಗಳಿಗೆ ಸರಿ ಹೊಂದುವುದಿಲ್ಲ. ದಿಲ್ಲಿ ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕ ಡಿ.ಎನ್.ಝಾ ಅವರು ಇದೀಗ ಈ ಅಧ್ಯಯನ ಅಂಶವನ್ನು ಬಹಿರಂಗಗೊಳಿಸದಂತೆ ಕೆಲ ಶಕ್ತಿಗಳು ಒತ್ತಡ ತರುತ್ತಿದ್ದು, ಇವರ ಜೀವಕ್ಕೇ ಅಪಾಯ ಎದುರಾಗಿದೆ. ‘ಹೋಲಿ ಕೌ: ಬೀಫ್ ಇನ್ ಇಂಡಿಯನ್ ಡಯಟರಿ ಟ್ರೆಡಿಷನ್ಸ್’ ಎಂಬ ಇತಿಹಾಸ ಸಂಶೋಧನಾ ಪ್ರಬಂಧವನ್ನು ಪ್ರಕಟಿಸದಂತೆ ಅವರಿಗೆ ಅನಾಮಧೇಯ ಬೆದರಿಕೆ ಕರೆಗಳು ಬರುತ್ತಿವೆ.
ಅಧ್ಯಯನವು ತೀರಾ ಗಂಭೀರ ಹಾಗೂ ಶಿಷ್ಯವೇತನ ಆಧರಿತ, ಅಧಿಕೃತ ಅಧ್ಯಯನವಾಗಿದ್ದು, ಇತಿಹಾಸದ ವೈಜ್ಞಾನಿಕ ಸಂಶೋಧನಾ ವಿಧಾನಗಳಿಗೆ ಅನುಗುಣವಾಗಿ ಅಧಿಕೃತ ಮೂಲಗಳನ್ನು ಸಂಪರ್ಕಿಸಿ ನಡೆಸಿದ ಸಂಶೋಧನೆಯಾಗಿದೆ. ಈ ಅಧ್ಯಯನ ಕೃತಿಯು, ದೇಶದ ಬಹುತೇಕ ಮಂದಿಯ ಜನಪ್ರಿಯ ನಂಬಿಕೆಗೆ ವಿರುದ್ಧವಾದ ಫಲಿತಾಂಶವನ್ನು ಹೊರಹಾಕಿದೆ. ಅದರಲ್ಲೂ ಮುಖ್ಯವಾಗಿ ದೇಶೀಯ ಜನರು ಹಾಗೂ ಇತರ ಸಮುದಾಯಗಳ ಮಂದಿ ಸಾಮಾನ್ಯವಾಗಿ ಹಿಂದುತ್ವ ಶಕ್ತಿಗಳ ಕಟ್ಟುನಿಟ್ಟಿನ ಸೂಚನೆಯ ಹೊರತಾಗಿಯೂ ಗೋಮಾಂಸವನ್ನು ಸೇವಿಸುತ್ತಿದ್ದಾರೆ.
ಹಿಂದುತ್ವ ಶಕ್ತಿಗಳು ಗೋವುಗಳನ್ನು ತಾಯಿ ಸಮಾನ ಎಂದು ಪರಿಗಣಿಸುವುದು ಹೊಸ ವಿಚಾರವೇನಲ್ಲ. ಇದೀಗ ಕೇರಳದಲ್ಲಿ ಕೇವಲ ಅಸ್ಪಶ್ಯರು ಮಾತ್ರವಲ್ಲದೇ 72 ಸಮುದಾಯದವರು ದುಬಾರಿ ಮಾಂಸಕ್ಕಿಂತ ಗೋಮಾಂಸದತ್ತ ಒಲವು ವ್ಯಕ್ತಪಡಿಸುತ್ತಿದ್ದಾರೆ. ಹಿಂದುತ್ವ ಶಕ್ತಿಗಳು ಇದನ್ನು ತಡೆಯಲು ಶತಾಯ ಗತಾಯ ಪ್ರಯತ್ನ ಮಾಡುತ್ತಿವೆ.
ಸಮರ್ಥನೀಯವಲ್ಲ
ಇಲ್ಲಿ ಇತಿಹಾಸಗಾರರು ಮೊಟ್ಟಮೊದಲನೆಯದಾಗಿ, ಮುಸ್ಲಿಂ ಆಡಳಿತಗಾರರು ಭಾರತದಲ್ಲಿ ಗೋಮಾಂಸ ಭಕ್ಷಣೆಯನ್ನು ಪರಿಚಯಿಸಿದರು ಎಂಬ ಭ್ರಮೆಯನ್ನು ತೊಡೆದುಹಾಕಿದ್ದಾರೆ. ಇಸ್ಲಾಂ ಭಾರತಕ್ಕೆ ಬರುವುದಕ್ಕಿಂತ ತೀರಾ ಮೊದಲೇ ಗೋಮಾಂಸ ಭಾರತೀಯ ಆಹಾರಪದ್ಧತಿಯಲ್ಲಿ ಸೇರಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ನಿರ್ದಿಷ್ಟ ಆಹಾರ ಪದ್ಧತಿಯನ್ನು ನಿರ್ದಿಷ್ಟ ಕೋಮಿನ ಜತೆ ಸಂಬಂಧ ಕಲ್ಪಿಸುವುದು ಖಂಡಿತಾ ಸಮರ್ಥನೀಯವಲ್ಲ.
ಭಾರತದ ಪ್ರಾಚೀನ ಧರ್ಮಗ್ರಂಥಗಳನ್ನು, ಅದರಲ್ಲೂ ಪ್ರಮುಖವಾಗಿ ವೇದಗಳನ್ನು ಅವಲೋಕಿಸಿದಾಗ, ಅಲೆಮಾರಿಗಳ ಪೈಕಿ ಅರ್ಚಕವೃತ್ತಿಯ ಆರ್ಯನ್ನರು ಇಲ್ಲಿ ನೆಲೆ ನಿಂತರು. ಕೃಷಿ ವ್ಯವಸ್ಥೆ ಸಮರ್ಪಕವಾಗಿ ಅಭಿವೃದ್ಧಿಯಾಗುವವರೆಗೂ ಪ್ರಾಣಿಗಳನ್ನು ಬಲಿಕೊಡುವುದು ಈ ಭಾಗದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದ್ದ ಪದ್ಧತಿ. ಈ ಹಂತದಲ್ಲಿ ಗೋಸಂಪತ್ತು ದೊಡ್ಡ ಆಸ್ತಿ ಎನಿಸಿತ್ತು. ಈ ಕಾರಣದಿಂದಲೇ ದೇವರನ್ನು ಒಲಿಸಿಕೊಳ್ಳಲು ಪ್ರಾಣಿಬಲಿ ನೀಡುತ್ತಿದ್ದರು. ಇಲ್ಲಿ ಸಂಪತ್ತು ಎನ್ನುವುದು ನಿರ್ದಿಷ್ಟ ವ್ಯಕ್ತಿ ಹೊಂದಿರುವ ಗೋವಿನ ಸಂಖ್ಯೆಗೆ ಅನುಗುಣವಾಗಿತ್ತು.
ಇಂದ್ರ ಹಾಗೂ ಅಗ್ನಿಯಂಥ ದೇವರು ವಿಭಿನ್ನ ಬಗೆಯ ಮಾಂಸದ ಬಗ್ಗೆ ಒಲವು ಹೊಂದಿದ್ದರು ಎಂಬ ಉಲ್ಲೇಖ ಸಿಗುತ್ತದೆ. ಇಂದ್ರನಿಗೆ ಎತ್ತಿನ ಮಾಂಸ ಪ್ರಿಯವಾದರೆ, ಅಗ್ನಿಗೆ ದನ ಮತ್ತು ಎತ್ತಿನ ಮಾಂಸ ಎರಡೂ ಪ್ರಿಯ. ಮರುತ ಹಾಗೂ ಅಶ್ವಿನಿಗಳಿಗೆ ಕೂಡಾ ಹಸುಗಳನ್ನು ಬಲಿ ನೀಡುತ್ತಿದ್ದ ಉಲ್ಲೇಖಗಳು ಸಿಗುತ್ತವೆ. ವೇದಗಳಲ್ಲಿ ಸುಮಾರು 250 ಪ್ರಾಣಿಗಳ ಉಲ್ಲೇಖವಿದ್ದು, ಈ ಪೈಕಿ 50ನ್ನು ಬಲಿ ಕೊಡಲು ಮತ್ತು ಸೇವನೆಗೆ ಯೋಗ್ಯ ಎಂದು ವರ್ಗೀಕರಿಸಲಾಗಿದೆ. ಮಹಾಭಾರತದಲ್ಲಿ ರಂತಿದೇವ ಎಂಬ ರಾಜ ಬ್ರಾಹ್ಮಣರಿಗೆ ಆಹಾರಧಾನ್ಯ ಹಾಗೂ ಗೋಮಾಂಸವನ್ನು ದಾನ ಮಾಡುವ ಖ್ಯಾತಿ ಹೊಂದಿದ್ದ ಎಂಬ ಉಲ್ಲೇಖವಿದೆ. ತೈತ್ತಿರೀಯ ಬ್ರಾಹ್ಮಣರು ಸ್ಪಷ್ಟವಾಗಿ ಹೇಳುವಂತೆ, ನಿಶ್ಚಿತವಾಗಿಯೂ ಗೋವು ಆಹಾರ (ಅಥೊ ಅನ್ನಂ ವಯಾ ಗೋಹೊ). ಅಂತೆಯೇ ಯಾಜ್ಞವಲ್ಕ್ಯನ ನಿದರ್ಶನದಲ್ಲಿ, ಆತ ಎಳೆಯ ಕರುಗಳ ಮಾಂಸ ಭಕ್ಷಣೆ ಮಾಡುತ್ತಿದ್ದ. ಆ ಬಳಿಕವೂ ಬ್ರಾಹ್ಯಣ್ಯದ ಹಲವು ಗ್ರಂಥಗಳಲ್ಲಿ ಗೋಮಾಂಸ ಭಕ್ಷಿಸುತ್ತಿದ್ದುದಕ್ಕೆ ಉಲ್ಲೇಖವಿದೆ. ಮನುಸ್ಮತಿ ಕೂಡಾ ಗೋಮಾಂಸ ಭಕ್ಷಣೆಯನ್ನು ನಿಷೇಧಿಸುವುದಿಲ್ಲ.
ಔಷಧಿಯಾಗಿ
ಚರಕ ಸಂಹಿತೆಯ ಚಿಕಿತ್ಸಾ ವಿಭಾಗದಲ್ಲಿ (ಪುಟ 86-87) ಗೋಮಾಂಸವನ್ನು ಹಲವು ರೋಗಗಳಿಗೆ ಔಷಧ ಎಂದು ಬಣ್ಣಿಸಲಾಗಿದೆ. ಇದರ ಸೂಪ್ ತಯಾರಿಸುವ ವಿಧಾನವನ್ನೂ ವರ್ಣಿಸಲಾಗಿದೆ. ಜ್ವರ ಮತ್ತು ಕ್ಷಯಕ್ಕೂ ಇದರ ಸೇವನೆ ಪರಿಣಾಮಕಾರಿ ಎಂದು ಹೇಳಲಾಗಿದೆ. ಹಸುವಿನ ಕೊಬ್ಬನ್ನು ನಿಃಶಕ್ತಿ ಮತ್ತು ಸಂಧಿವಾತಕ್ಕೆ ಬಳಸಲಾಗುತ್ತಿತ್ತು.
ಆದರೆ ಕೃಷಿ ಆರ್ಥಿಕತೆಯ ಉಗಮ ಹಾಗೂ ಸಮಾಜದಲ್ಲಿ ಆಗುತ್ತಿದ್ದ ಭಾರೀ ಬದಲಾವಣೆಗಳ ಕಾರಣದಿಂದ ಪ್ರಾಣಿಗಳನ್ನು ಬಲಿಕೊಡುವ ಪದ್ಧತಿಯಲ್ಲಿ ಕೂಡಾ ವ್ಯಾಪಕ ಬದಲಾವಣೆ ಉಂಟಾಯಿತು. ಆ ಕಾಲದಲ್ಲಿ ಪ್ರಾಣಿಗಳನ್ನು ಬಲಿಕೊಡುವ ಧಾರ್ಮಿಕ ವಿಧಿವಿಧಾನಗಳು ಜಾರಿಯಲ್ಲಿದ್ದು, ಬ್ರಾಹ್ಮಣರು ಕೂಡಾ ಇದರ ಜತೆ ಗುರುತಿಸಿಕೊಂಡಿದ್ದರು. ಬುದ್ಧ ಈ ಪದ್ಧತಿಗಳನ್ನು ಕಟುವಾಗಿ ವಿರೋಧಿಸಿದ. 500 ಎತ್ತು, 500 ಗಂಡು ಕರುಗಳು, 500 ಹೆಣ್ಣುಕರುಗಳು ಹಾಗೂ 500 ಕುರಿಗಳನ್ನು ಬಲಿಗಾಗಿ ಬಲಿಕಂಬಕ್ಕೆ ಕಟ್ಟಲಾಗಿತ್ತು. ಆದರೆ ಅಶ್ವಮೇಧ, ಪುರುಸ್ಮೇಧ, ವಾಜಪೇಯದಂಥ ಬಲಿಗಳಿಂದ ಯಾವ ಒಳಿತೂ ಇಲ್ಲ ಎಂದು ಬುದ್ಧ ಪ್ರತಿಪಾದಿಸಿದ. ದಿಗ್ಯ ನಿಕಾಯದಲ್ಲಿ ಬರುವ ಕತೆಯೊಂದರಲ್ಲಿ, ಬುದ್ಧ ಮಗಧ ದೇಶದಲ್ಲಿದ್ದಾಗ ಕೂಟದಂತ ಎಂಬ ಬ್ರಾಹ್ಮಣನೊಬ್ಬ, 700 ಎತ್ತು, 700 ಕುರಿ ಹಾಗೂ 700 ಟಗರುಗಳ ಬಲಿನೀಡಲು ಸಿದ್ಧತೆ ನಡೆಸುತ್ತಿದ್ದ. ಬುದ್ಧ ಮಧ್ಯಪ್ರವೇಶಿಸಿ ಅದನ್ನು ತಡೆದ. ಪ್ರಾಣಿ ಬಲಿಯನ್ನು ವಿರೋಧಿಸುತ್ತಿದ್ದುದು ಹಾಗೂ ಪ್ರಾಣಿಗಳಿಗೆ ಗಾಯ ಮಾಡಬಾರದು ಎಂಬ ತತ್ವ ಹೊಸ ಕೃಷಿ ಪದ್ಧತಿಯ ಪರಿಸ್ಥಿತಿಯಲ್ಲಿ ಹೆಚ್ಚಿನ ಮಹತ್ವ ಪಡೆಯಿತು.
ಬೌದ್ಧಧರ್ಮದ ಅಪಾಯ
ಅಹಿಂಸೆಗೆ ಬುದ್ಧ ಒತ್ತು ನೀಡುತ್ತಿದ್ದುದು ಸಂಕುಚಿತ ಅಥವಾ ಅಂಧ ಶ್ರದ್ಧೆಯಲ್ಲ. ಚಕ್ರವರ್ತಿ ಅಶೋಕ ಕೂಡಾ ಬೌದ್ಧಧರ್ಮಕ್ಕೆ ಮತಾಂತರ ಹೊಂದಿದ ಬಳಿಕ ಸಸ್ಯಾಹಾರಿಯಾಗಲಿಲ್ಲ. ರಾಜ ಅಡುಗೆಗಾಗಿ ವಧೆಯಾಗುತ್ತಿದ್ದ ಪ್ರಾಣಿಗಳ ಸಂಖ್ಯೆಯನ್ನಷ್ಟೇ ಕಡಿಮೆ ಮಾಡಿದ.
ಆದ್ದರಿಂದ ಎಲ್ಲ್ಲಿ ವಿಷಯ ಪರಿವರ್ತನೆಯಾಯಿತು ಹಾಗೂ ಹಸು ಎಲ್ಲಿ ಮಾತೃ ಸ್ಥಾನ ಪಡೆಯಿತು? ಬೌದ್ಧಧರ್ಮ ಪ್ರವರ್ಧಮಾನಕ್ಕೆ ಬಂದ ದೀರ್ಘ ಕಾಲದ ಬಳಿಕ, ಬೌದ್ಧಧರ್ಮದ ವಿರುದ್ಧ ದಾಳಿಯ ಅಸ್ತ್ರವಾಗಿ ಈ ಪದ್ಧತಿಯನ್ನು ಭಿನ್ನ ದೃಷ್ಟಿಕೋನದಿಂದ ನೋಡಲು ಆರಂಭಿಸಲಾಯಿತು. ಬೌದ್ಧ ಧರ್ಮದಿಂದ ಬ್ರಾಹ್ಮಣ್ಯದ ಮೌಲ್ಯಗಳಿಗೆ ಎದುರಾದ ಅಪಾಯ ತೀವ್ರತರವಾದದ್ದು. ಬ್ರಾಹ್ಮಣ್ಯದ ಕಬಂಧಬಾಹುಗಳಿಂದ ಕೆಳವರ್ಗದವರು ಜಾರುತ್ತಿದ್ದಾಗ, ಸಮಾನತೆ ಸಾಧಿಸುವ ಹೋರಾಟ ಆರಂಭವಾಯಿತು.
ಸೈದ್ಧಾಂತಿಕ ಪಟ್ಟದಲ್ಲಿ ಶಂಕರಾಚಾರ್ಯರು ಬ್ರಾಹ್ಮಣ್ಯ ಮೌಲ್ಯದ ಶ್ರೇಷ್ಠತೆಯನ್ನು ಸಾರಿದರೆ, ರಾಜಕೀಯವಾಗಿ, ಪುಷ್ಯಮಿತ್ರ ಶುಂಗ್ ಬೌದ್ಧಭಿಕ್ಷುಗಳ ಮೇಲೆ ದೈಹಿಕ ದಾಳಿಗೆ ಮುಂದಾದ. ಸಂಕೇತಗಳ ಮಟ್ಟದಲ್ಲಿ ಶಶಾಂಕ ಬೋಧಿವೃಕ್ಷವನ್ನು ನಾಶ ಮಾಡಿದ.
ಬೌದ್ಧಧರ್ಮ ಪ್ರಸಾರದ ಒಂದು ಮುಖ್ಯಮನವಿ ಎಂದರೆ ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿದ್ದ ಗೋಸಂಪತ್ತಿನ ರಕ್ಷಣೆ. ಒಂದು ಅರ್ಥದಲ್ಲಿ ಬ್ರಾಹ್ಮಣ್ಯವು ಭಾರತದಿಂದ ಬೌದ್ಧಧರ್ಮವನ್ನು ಹೊರಗಟ್ಟುವಲ್ಲಿ ಯಶಸ್ವಿಯಾಗಬೇಕಾದರೆ, ಅದು ಕಾಲಕ್ಕೆ ತಕ್ಕಂತೆ ಪ್ರಾಣಿ ಬಲಿಯ ಪರಿಕಲ್ಪನೆಯಿಂದ ಹಿಂದೆ ಸರಿಯಬೇಕಾಯಿತು. ಈ ಹಂತದಲ್ಲಿ ಬ್ರಾಹ್ಮಣರು ಗೋವುಗಳನ್ನು ತಮ್ಮ ಸೈದ್ಧಾಂತಿಕ ನಡಿಗೆಯ ಸಂಕೇತವಾಗಿ ಪರಿಗಣಿಸಿದರು. ಆದರೆ ಬುದ್ಧನ ಪ್ರತಿಯೊಂದು ಘೋಷಣೆಗಳ ಹಿಂದೆಯೂ ಬಲವಾದ ನಿರ್ದಿಷ್ಟ ಕಾರಣಗಳಿದ್ದರೆ, ಬ್ರಾಹ್ಮಣ್ಯ ಸಿದ್ಧಾಂತದ ಪ್ರತಿದಾಳಿ ಸಿದ್ಧಾಂತಗಳು ಪ್ರತಿಪಾದನೆ ಆಧರಿತ ಹಾಗೂ ಅಂಧಶ್ರದ್ಧೆಯಿಂದ ರೂಪುಗೊಂಡವು. ಆದ್ದರಿಂದ ಬೌದ್ಧಧರ್ಮದ ಅಹಿಂಸೆಯು ಪ್ರಾಣಿ ಸಂಪತ್ತು ಸಂರಕ್ಷಣೆಯ ಕಾಳಜಿಯನ್ನು ಹೊಂದಿದೆ. ಸಮಾಜದಲ್ಲಿ ಪ್ರಾಣಿ ಸಂಪತ್ತು ಉಳಿಸುವುದು ಹಾಗೂ ಅನುಕಂಪದ ತತ್ವದ ಹಿನ್ನೆಲೆ ಹೊಂದಿರುವಂಥದ್ದು. ಆದರೆ ಇದರ ವಿರುದ್ಧದ ವಾದಗಳು ಕೇವಲ ಸಾಂಕೇತಿಕ. ಈ ಹಿನ್ನೆಲೆಯಲ್ಲಿ ಬ್ರಾಹ್ಮಣ ಸಿದ್ಧಾಂತದ ಪ್ರತಿಪಾದಕರು, ಬುದ್ಧನ ಅಹಿಂಸೆ ತತ್ವದಿಂದಾಗಿ ಭಾರತ ದುರ್ಬಲವಾಯಿತು ಎಂದು ಆಪಾದಿಸುತ್ತಾರೆ. ಬುದ್ಧ ಗೋವನ್ನು ಪೂಜಿಸುವವನಾಗಿರಲಿಲ್ಲ ಅಥವಾ ಸಸ್ಯಾಹಾರಿಯೂ ಆಗಿರಲಿಲ್ಲ.
ಗೋವುಗಳು ಮಾತೃಸಮಾನ ಎಂಬ ನಿಲುವನ್ನು ಕ್ರಮೇಣವಾಗಿ ಬಿಗಿಗೊಳಿಸಲಾಯಿತು. ಇಷ್ಟಾಗಿಯೂ ಕೆಳವರ್ಗದ ಹಲವು ಮಂದಿ ಗೋಮಾಂಸ ಸೇವನೆಯ ಪದ್ಧತಿ ಮುಂದುವರಿಸಿದರು. ಬೌದ್ಧಧರ್ಮದ ಅನುಯಾಯಿಗಳು ಗೋಮಾಂಸ ಸೇರಿದಂತೆ ಮಾಂಸವನ್ನು ಭಕ್ಷಿಸುವುದನ್ನು ಮುಂದುವವರಿಸಿದರು. ಬ್ರಾಹ್ಮಣ್ಯವು ಪ್ರಬಲ ಧಾರ್ಮಿಕ ಸಂಪ್ರದಾಯವಾಗಿದ್ದರಿಂದ, ಮೊದಲ ಮೊಘಲ್ ಚಕ್ರವರ್ತಿ ಬಾಬರ್ ತನ್ನ ಉಯಿಲಿನಲ್ಲಿ ಮಗ ಹುಮಾಯುನ್‌ಗೆ, ಸಾಮಾನ್ಯ ಕಲ್ಪನೆಗಿಂತ ಭಿನ್ನವಾಗಿ, ಗೋವುಗಳನ್ನು ರಕ್ಷಿಸುವಂತೆ ಮತ್ತು ಗೋಹತ್ಯೆ ನಿಷೇಧಿಸುವಂತೆ ಸೂಚಿಸಿದ್ದ. ಭಾರತದ ರಾಷ್ಟ್ರೀಯ ಚಳವಳಿಯ ಉದಯಕ್ಕೆ ಸ್ಪಂದನೆಯಾಗಿ ಹಿಂದುತ್ವ ಸಿದ್ಧಾಂತ ಹಾಗೂ ರಾಜಕೀಯ ರಚನೆಯಾದಾಗ, ಗೋಹತ್ಯೆ ನಿಷೇಧದ ಆಗ್ರಹ ಕೂಡಾ ಪ್ರಬಲವಾಯಿತು. ಸ್ವಾತಂತ್ರ್ಯೋತ್ತರ ಭಾರತದಲ್ಲಿ, ಆರೆಸ್ಸೆಸ್, ಸಮೂಹ ಆಂದೋಲನವನ್ನು ಕಟ್ಟುವ ಸಲುವಾಗಿ ಪದೇ ಪದೇ ಈ ವಿಷಯವನ್ನು ಎತ್ತುತ್ತಲೇ ಬಂದಿತು. ಆದರೆ 1980ರ ದಶಕದ ವರೆಗೂ ಇದರ ಕರೆಗೆ ಯಾವ ಸ್ಪಂದನೆಯೂ ದೊರಕಲಿಲ್ಲ.
ಹಸುಗಳನ್ನು ಪೂಜಿಸುವವರ ಹಾಗೂ ತಾಯಿ ಸಮಾನ ಎಂದು ಪರಿಗಣಿಸುವವರ ಭಾವನೆಗಳನ್ನು ಗೌರವಿಸುವುದು ಅಗತ್ಯವಾಗಿದ್ದರೂ, ಇಂಥ ವಸ್ತುನಿಷ್ಠ ಅಧ್ಯಯನಕ್ಕೆ ವಿರೋಧ ವ್ಯಕ್ತಪಡಿಸುವುದು ಇದು ತಮ್ಮ ರಾಜಕೀಯ ಲೆಕ್ಕಾಚಾರಗಳಿಗೆ ಸರಿಯಾಗಿ ಹೊಂದಿಕೆಯಾಗುತ್ತಿಲ್ಲ ಎಂಬ ಕಾರಣಕ್ಕೆ. ಇದು ಸಮಾಜದ ಉದಾರವಾದದ ಉಸಿರುಗಟ್ಟಿಸುವ ಕೋಮು ರಾಜಕಾರಣಿಗಳ ಇನ್ನೊಂದು ಹುನ್ನಾರವಾಗಿದೆ. ಕಳೆದ ಕೆಲ ಸಮಯದಿಂದ ಇಂಥ ಹಲವಾರು ಬೆದರಿಕೆ ಹಾಗೂ ವಿರೋಧವನ್ನು ನಾವು ನೋಡುತ್ತಲೇ ಬಂದಿದ್ದೇವೆ. ಇದು ಚಲನಚಿತ್ರಗಳಿಗೆ ವಿರೋಧ ವ್ಯಕ್ತಪಡಿಸುವಲ್ಲಿರಬಹುದು ಅಥವಾ ಚಿತ್ರಕಲಾಕೃತಿಗಳನ್ನು ನಾಶ ಮಾಡುವುದರಲ್ಲಿರಬಹುದು. ಅಥವಾ ಪ್ರೇಮಿಗಳ ದಿನವನ್ನು ಆಚರಿಸದಂತೆ ಯುವಜನರಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸುವ ಸಮುದಾಯಗಳಲ್ಲಿರಬಹುದು. ನಮ್ಮ ಸಂವಿಧಾನದ ಪ್ರಜಾಸತ್ತಾತ್ಮಕ ಮೌಲ್ಯಗಳು ಪ್ರಮುಖವಾಗುತ್ತವೆ. ಪ್ರಜಾಸತ್ತಾತ್ಮಕ ಸ್ವಾತಂತ್ರ್ಯಕ್ಕೆ ಅಪಾಯ ತರುವುದನ್ನು ಖಂಡತುಂಡವಾಗಿ ಖಂಡಿಸುತ್ತೇವೆ.